ETV Bharat / state

ರೈತರ ಬೆಳೆಗಳಿಗೆ ಪರ್ಯಾಯ ಮಾರುಕಟ್ಟೆ: ನಂದಿನಿ ಬೂತ್​ಗಳಲ್ಲಿ ಮಾರಾಟ - ರೈತರ ಬೆಳೆಗೆ ಮಾರುಕಟ್ಟೆ

ರಾಜಧಾನಿ ಬೆಂಗಳೂರಿನಲ್ಲಿ ರೈತರ ಹಣ್ಣು, ತರಕಾರಿ ಮಾರಾಟಕ್ಕೆ ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ವಾರ್ಡ್​ಗಳ ನಂದಿನಿ ಬೂತ್​ಗಳಲ್ಲಿ ಹಾಗೂ ಹಾಪ್ ​ಕಾಮ್ಸ್​​ ಮೂಲಕ ಅಪಾರ್ಟ್​ಮೆಂಟ್​​ಗಳಿಗೂ ತಲುಪಿಸುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಹಕಾರಿ ಸಚಿವ ಎಸ್..ಟಿ.ಸೋಮಶೇಖರ್​ ತಿಳಿಸಿದರು.

Alternative market for farmers crops
ಸಹಕಾರಿ ಸಚಿವ ಎಸ್​.ಟಿ.ಸೋಮಶೇಖರ್​
author img

By

Published : Apr 3, 2020, 4:54 PM IST

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆ ರೈತರು ಬೆಳೆದ ಹಣ್ಣು, ತರಕಾರಿ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

Alternative market for farmers crops
ಸಹಕಾರಿ ಸಚಿವ ಎಸ್​.ಟಿ.ಸೋಮಶೇಖರ್​

ಇಲ್ಲಿನ ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಅಪಾರ್ಟ್​ಮೆಂಟ್​ಗಳಿಗೆ ಹಾಪ್ ​ಕಾಮ್ಸ್​ನಿಂದ ಹಾಗೂ ಎಲ್ಲಾ ವಾರ್ಡ್​ಗಳ ನಂದಿನಿ ಬೂತ್​ಗಳಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಇನ್ನೊಂದೆಡೆ ಗ್ರಾಹಕರಿಗೂ ಸುಲಭವಾಗಿ ಅಗತ್ಯ ವಸ್ತುಗಳು ಸಿಗುತ್ತವೆ. ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ತಳ್ಳುವ ಗಾಡಿಗಳಲ್ಲಿಯೂ ಹಣ್ಣು, ತರಕಾರಿ ಮಾರಾಟಕ್ಕೆ ನಿಗದಿತ ಸ್ಥಳದಲ್ಲಿ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ, ಕೃಷಿ ಸಚಿವ ಬಿ.ಸಿ.ಪಾಟೀಲ್ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.