ETV Bharat / state

ಬಿಬಿಎಂಪಿ ಸದಸ್ಯ ಜಾಕೀರ್​​ರಿಂದ ಪಾಲಿಕೆ ಆಸ್ತಿ ಕಬಳಿಕೆ: ಎನ್​.ಆರ್ ರಮೇಶ್​ ಆರೋಪ​ - ಬಿಬಿಎಂಪಿ ಸದಸ್ಯ ಜಾಕೀರ್​​ ವಿರುದ್ಧ ಎನ್​.ಆರ್ ರಮೇಶ್​ ಆರೋಪ

ಬಿಬಿಎಂಪಿ ಸದಸ್ಯ ರಕೀಬ್ ಜಾಕೀರ್ ವಿರುದ್ಧ ಬಿಜೆಪಿ ಮುಖಂಡ ಎನ್​.ಆರ್.​ ರಮೇಶ್​ ಪಾಲಿಕೆ ಆಸ್ತಿ ಕಬಳಿಸಿರುವ ಆರೋಪ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

Allegation of property fraud against BBMP member Zakir
ಬಿಎಂಟಿಎಫ್​ ಅಧೀಕ್ಷರಿಗೆ ದೂರು ನೀಡಿದ ಎನ್​.ಆರ್​ ರಮೇಶ್​
author img

By

Published : Sep 4, 2020, 4:52 PM IST

ಬೆಂಗಳೂರು: ನಗರದ ಫ್ರೇಜರ್ ಟೌನ್​ನಲ್ಲಿ 18 ಕೋಟಿ ರೂ. ಮೌಲ್ಯದ ಪಾಲಿಕೆ ಆಸ್ತಿಯನ್ನು ನಕಲಿ ಖಾತೆ ಮಾಡಿ, ವಾರ್ಡ್ ಸಂಖ್ಯೆ 78 ರ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಹಾಗೂ ಪಾಲುದಾರರು ಕಬಳಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದ ಜಿಲ್ಲಾಧ್ಯಕ್ಷ ಎನ್​. ಆರ್ ರಮೇಶ್ ಆರೋಪ ಮಾಡಿದ್ದಾರೆ‌. ಈ ಬಗ್ಗೆ ಎಸಿಬಿ, ಬಿಎಂಟಿಎಫ್ ಹಾಗೂ ಪಾಲಿಕೆ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಫ್ರೇಜರ್ ಟೌನ್​ನ ಹೇನ್ಸ್ ರಸ್ತೆಯಲ್ಲಿ ಹಾಗೂ ಬಂಬೂ ಬಜಾರ್ ರಸ್ತೆಯಲ್ಲಿ ಎರಡು ಆಸ್ತಿಗಳನ್ನು ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯ ಕಾನೂನು ಬಾಹಿರವಾಗಿ ಕಬಳಿಸಿ, ಖಾಸಗಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಎನ್​.ಆರ್.​ ರಮೇಶ್​ ಆರೋಪಿಸಿದ್ದಾರೆ. 1971-74 ರ ಅವಧಿಯಲ್ಲಿ ಮಾಜಿ ಪಾಲಿಕೆ ಸದಸ್ಯ ದಿವಂಗತ ಪಾಂಡ್ಯನ್ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾಗ ತೀರಿಹೋಗಿದ್ದರು. ಅವರ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಸ್ವತ್ತಿನ ಸಂಖ್ಯೆ - 25/2-1 ನ್ನು 50 ವರ್ಷಗಳ ಕಾಲಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಇದು ಏಳು ಕೋಟಿ ಬೆಲೆಬಾಳುವ ಜಾಗವಾಗಿದೆ. ಇದರ ಪಕ್ಕದ ಸ್ವತ್ತು 25/1 ನ್ನು 1963-64 ರಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ವಿ.ರಾಮಾಂಜಲು ನಾಯ್ಡು ಅವರಿಗೆ, ಅವರ ಕುಟುಂಬ ಕಷ್ಟದಲ್ಲಿತ್ತು ಎಂಬ ಕಾರಣಕ್ಕೆ 99 ವರ್ಷಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಈ ಎರಡೂ ಆಸ್ತಿಗಳ ಬೆಲೆ 18ಕೋಟಿ ರೂಪಾಯಿಯಾಗಿದೆ.

ಬಿಎಂಟಿಎಫ್​ ಅಧೀಕ್ಷರಿಗೆ ದೂರು ನೀಡಿದ ಎನ್​.ಆರ್​ ರಮೇಶ್​

ನಂತರ ಪಾಲಿಕೆ ಆಯುಕ್ತರ ಅನುಮತಿ ಇಲ್ಲದೆ ಪಾಂಡ್ಯಾನ್ ಅವರ ಪತ್ನಿ ಬೇಬಿಯಮ್ಮ ಅವರಿಗೆ ಕಾನೂನು ಬಾಹಿರವಾಗಿ ಆಗಿನ ಪೂರ್ವ ವಲಯದ ಜಂಟಿ ಆಯುಕ್ತರು ಮಾರಾಟದ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಬಳಿಕ ಬೇಬಿಯಮ್ಮ ಮಗಳಿಗೆ ದಾನ ಪತ್ರದ ಮೂಲಕ ಹಕ್ಕನ್ನು ವರ್ಗಾಯಿಸಿದ್ದಾರೆ. ಅದಾದ ನಂತರ ವಾಣಿ, ಕೆ. ತಾಜ್ ಹೆಸರಿಗೆ, ಕೆ.ತಾಜ್ ಎಂ. ಅಕ್ರಮುಲ್ಲಾ ಹೆಸರಿಗೆ ಕ್ರಯ ಪತ್ರಗಳ ಮೂಲಕ ಸ್ವತ್ತು ಮಾರಾಟ ಮಾಡಿದ್ದಾರೆ‌. ಈಗಾಗ್ಲೇ ಈ ಜಾಗದಲ್ಲಿ ನಿಯಮ ಬಾಹಿರವಾಗಿ ತಳಮಹಡಿ ಸೇರಿ ಏಳು ಅಂತಸ್ತಿನ ವಸತಿ ಸಂಕೀರ್ಣ ನಿರ್ಮಿಸಲಾಗ್ತಿದೆ ಎಂದರು.

ನಂತರ ರಾಮಾಂಜಲು ನಾಯ್ಡು ಅವರಿಗೆ ಗುತ್ತಿಗೆಗೆ ಕೊಟ್ಟಿದ್ದ ಆಸ್ತಿಯನ್ನು ದಿಢೀರನೆ ಸ್ವತ್ತಿನ ಸಂಖ್ಯೆ ಬದಲಾಯಿಸಿ, ಅಜೀಂ ಖಾನ್ ಎಂಬವರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ದಾರೆ‌. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳೂ ಸಹ ಭಾಗಿಯಾಗಿ ಕಾನೂನುಬಾಹಿರವಾಗಿ ಅವರ ಮಕ್ಕಳಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇಲ್ಲಿ ಏಳು ಮಹಡಿಗಳ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ವಾರ್ಡ್ 78 ರ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಮತ್ತು ಇತರ ಪಾಲುದಾರರೂ ಭಾಗಿಯಾಗಿದ್ದಾರೆ ಎಂದು ರಮೇಶ್ ಆರೋಪಿಸಿದರು.

ದೂರು ಸ್ವೀಕರಿಸಿದ ಬಿಎಂಟಿಫ್​ನ ಪೊಲೀಸ್ ಅಧೀಕ್ಷಕ ಓಬಳೇಶ್ ಮಾತನಾಡಿ, ಇದನ್ನು ಪೂರ್ಣವಾಗಿ ತನಿಖೆ ಮಾಡಲಾಗುವುದು. ಸ್ಥಳ ಪರಿಶೀಲನೆ ಮಾಡಿ ಮೇಲ್ನೋಟಕ್ಕೆ ಆರೋಪ ಕಂಡು ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ನಂತರ ತನಿಖೆ ಮಾಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಕಾರ್ಪೋರೇಟರ್ ಜಾಕೀರ್, ನನಗೂ ಆಸ್ತಿಗೂ ಸಂಬಂಧ ಇಲ್ಲ. ಇದು ನಮ್ಮ ಕುಟುಂಬದ ಗೆಳೆಯರಿಗೆ ಸೇರಿದ್ದು. 1960 ರಲ್ಲಿ ಇದನ್ನು ಖರೀದಿಸಿದ್ದಾರೆ. ಅದಕ್ಕೆ ಅಗತ್ಯ ದಾಖಲೆಗಳನ್ನೂ ನೀಡಿದ್ದಾರೆ. ಎಸಿಬಿಗೆ ದೂರು ನೀಡಿದ್ದರೆ ಅವರು ತನಿಖೆ ನಡೆಸಲಿ. ಯಾವುದೇ ನಕಲಿ ದಾಖಲೆ ಇಲ್ಲ, ತನಿಖೆ ಆಗಲಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.