ಬೆಂಗಳೂರು: ರಾಷ್ಟ್ರಾದ್ಯಂತ ಬ್ಯಾಂಕ್ ನೌಕರರ ಮುಷ್ಕರ ಹಿನ್ನೆಲೆ ಇಂದು ಹಾಗೂ ನಾಳೆ ಬ್ಯಾಂಕ್ ವ್ಯವಹಾರ ಬಂದ್ ಆಗಲಿದೆ. ಇಂದು ಬೆಂಗಳೂರಿನ ಕೆ.ಜಿ ರಸ್ತೆಯ ಸ್ಟೇಟ್ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ಜೋರಾಗಿದೆ. ವಿವಿಧ ಬ್ಯಾಂಕ್ ಸಂಘಟನೆಗಳ ನೌಕರರಿಂದ ಪ್ರತಿಭಟನೆ ನಡೆಯುತ್ತಿದ್ದು, ಈಗಾಗಲೇ ಎಸ್ಬಿಐ ವೃತ್ತದಲ್ಲಿ ನೌಕರರು ಜಮಾಯಿಸಿದ್ದಾರೆ.
ಅಂದಹಾಗೇ, ಬ್ಯಾಂಕ್ ನೌಕರರ ಪ್ರತಿಭಟನೆ ಹಿನ್ನೆಲೆ ಎಟಿಎಂಗಳಿಗೆ ಯಾವುದೇ ಸಮಸ್ಯೆ ಇಲ್ಲ. ಇಂಟರ್ನೆಟ್ ಬ್ಯಾಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಇನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ, ಫಾರಿನ್ ಎಕ್ಸ್ಚೇಂಚ್ಗೆ ಸಮಸ್ಯೆ ಆಗಲಿದೆ.
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳೇನು?
- ವೇತನ ಪಟ್ಟಿಯ ಮೇಲೆ ಶೇ. 20 ರಷ್ಟು ವೃದ್ಧಿ
- ವಾರಕ್ಕೆ ಐದು ದಿನಕ್ಕೆ ಮಾತ್ರ ಬ್ಯಾಂಕ್ ಸೇವೆ
- ಮೂಲ ವೇತನ ಜೊತೆಯಲ್ಲಿ ವಿಶೇಷ ಭತ್ಯೆ ನೀಡಬೇಕು
- ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು
- ಕುಟುಂಬ ಪಿಂಚಣಿ ಹೆಚ್ಚಳ ಮಾಡಬೇಕು
- ವ್ಯವಹಾರದಲ್ಲಿ ಬರುವ ಲಾಭದಲ್ಲಿ ನೌಕರರ ಕಲ್ಯಾಣ ನಿಧಿಗೆ ಹಣ ಮೀಸಲಿಡಬೇಕು
- ನಿವೃತ್ತಿ ನಂತರ ಮಿತಿ ರಹಿತ ತೆರಿಗೆ ವಿನಾಯಿತಿ ನೀಡಬೇಕು
- ಕೆಲಸ ಮತ್ತು ಭೋಜನಕ್ಕೆ ನಿರ್ದಿಷ್ಟ ಸಮಯ ಮೀಸಲಿಡಬೇಕು
- ನಿವೃತ್ತಿ ನಂತರ ಬಾಕಿ ಉಳಿದಿರೋ ರಜೆಗೆ ವೇತನ ನೀಡುವುದು
- ಗುತ್ತಿಗೆ ಕಾರ್ಮಿಕರು ಮತ್ತು ವ್ಯವಹಾರ ಪ್ರತಿನಿಧಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ