ಬೆಂಗಳೂರು: ಮೂಲ ಬಿಜೆಪಿ ನಾಯಕರು ಹಾಗೂ ವಲಸಿಗ ಬಿಜೆಪಿ ನಾಯಕರು ಎಂದು ಭಾರತೀಯ ಜನತಾ ಪಕ್ಷದಲ್ಲಿ ಇಲ್ಲ. ಅಂತ ಭಿನ್ನಾಭಿಪ್ರಾಯವನ್ನು ಪಕ್ಷ ಯಾವತ್ತು ಮಾಡಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮದು ಸಿದ್ಧಾಂತದ ಮೇಲೆ ನಡೆಯುವ ಪಕ್ಷ. ನಮ್ಮ ನಾಯಕರಾದ ಯಡಿಯೂರಪ್ಪನವರು ಸಮರ್ಥರಿದ್ದಾರೆ. ಫೆ. 6ರಂದು ಸಂಪುಟ ವಿಸ್ತರಣೆ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಈ ಮೂಲಕ ಎಲ್ಲರನ್ನು ಸಮಾಧಾನ ಪಡಿಸುತ್ತಾರೆ ಎಂದು ಹೇಳಿದರು.
ಕೆಲವು ಶಾಸಕರು ಭಿನ್ನಾಭಿಪ್ರಾಯ ತೆಗೆದಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ದಾಸೋಹ ಯೋಜನೆ ಅಕ್ಕಿ ಕಡಿತ: ನನಗೆ ಅಕ್ಕಿ, ಗೋಧಿ ಕಡಿತ ಮಾಡಿರುವ ಮಾಹಿತಿ ಇಲ್ಲ. ಶೀಘ್ರವೇ ಮಾಹಿತಿ ಪಡೆದುಕೊಳ್ಳುತ್ತೇನೆ. ಮಠ, ಸಂಘ, ಸಂಸ್ಥೆಗಳಿಗೆ ನೀಡುವ ಯೋಜನೆಯಲ್ಲಿ ಲೋಪವಾಗದಂತೆ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡದರು.