ETV Bharat / state

ಮೊದಲ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿರ್ಧಾರ 2025-26 ರಿಂದ ಜಾರಿ: ಶಿಕ್ಷಣ ಇಲಾಖೆ ಸ್ಪಷ್ಟನೆ - ಈಟಿವಿ ಭಾರತ ಕನ್ನಡ

ಒಂದನೇ ತರಗತಿಗೆ ದಾಖಲು ಮಾಡಲು ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶ ಶೈಕ್ಷಣಿಕ ವರ್ಷ 2025-26 ರಿಂದ ಜಾರಿಗೆ ಬರಲಿದೆ ಎಂದು ಶಿಕ್ಷಣ ಇಲಾಖೆ ಮರು ತಿದ್ದುಪಡಿ ಆದೇಶ ಹೊರಡಿಸಿದೆ.

Etv age-limit-of-6-years-for-first-class-admission-will-be-implemented-from-2025-26
ಮೊದಲ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿರ್ಧಾರ 2025-26 ರಿಂದ ಜಾರಿ: ಶಿಕ್ಷಣ ಇಲಾಖೆ ಸ್ಪಷ್ಟನೆ
author img

By

Published : Nov 15, 2022, 8:16 PM IST

ಬೆಂಗಳೂರು : ಒಂದನೇ ತರಗತಿಗೆ ದಾಖಲು ಮಾಡಲು ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ಕಡ್ಡಾಯಗೊಳಿಸಿ ಹೊರಡಿಸಿದ್ದ ಆದೇಶ 2025-26 ರಿಂದ ಜಾರಿಗೆ ಬರಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.

ರಾಜ್ಯ ಸರ್ಕಾರ ಕಳೆದ ಜು.26ರಂದು ಹೊರಡಿಸಿದ್ದ ಆದೇಶ ಪ್ರತಿಯಲ್ಲಿ ಪ್ರಸಕ್ತ ಸಾಲಿನಿಂದಲೇ 6 ವರ್ಷ ಪೂರ್ಣಗೊಳ್ಳಬೇಕು ಎಂಬ ಮಾಹಿತಿ ನೀಡಿತ್ತು. ಆದರೆ, ಇದೀಗ ತಿದ್ದುಪಡಿ ಆದೇಶ ಹೊರಬಿದ್ದಿದ್ದು, ಇದು 2025-26ರ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ ಎಂದು ತಿಳಿಸಿದೆ.

ಒಂದನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ : ಶಿಕ್ಷಣ ಇಲಾಖೆ ಮೂಲಕ ಇಂದು ಹೊರ ಬಿದ್ದಿರುವ ಆದೇಶದಲ್ಲಿ ಆದೇಶ ಭಾಗದ 3ನೇ ಸಾಲಿನಲ್ಲಿ "ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿ" ಆದೇಶಿಸಿದೆ ಎಂಬುದನ್ನು "2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಿ ಆದೇಶಿಸಿದೆ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಕೋರಿದೆ. ಉಳಿದಂತೆ ಸರ್ಕಾರದ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.

age-limit-of-6-years-for-first-class-admission-will-be-implemented-from-2025-26
ಸರ್ಕಾರದ ಆದೇಶ

ಅಂದಿನ ಆದೇಶದ ಇತರ ಅಂಶಗಳು : 2016-17ನೇ ಶೈಕ್ಷಣಿಕ ಸಾಲಿನಿಂದ ಆರ್​ಟಿಇ ಕಾಯ್ದೆ - 2009 ರ ಸೆಕ್ಷನ್ 12 (1) (ಸಿ) ಅಡಿ ಅನುದಾನರಹಿತ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಪ್ರವೇಶಾವಕಾಶಕ್ಕೆ ಸಂಬಂಧಿಸಿದಂತೆ ಎಲ್.ಕೆ.ಜಿ ತರಗತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಹಾಗೂ 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳು ವಯೋಮಿತಿಯನ್ನು ನಿಗದಿಪಡಿಸಿ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ :6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಗೆ ಮುಂಬಡ್ತಿ: ರಾಜ್ಯ ಸರ್ಕಾರದ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.