ETV Bharat / state

ಅನೈತಿಕ ಪ್ರೇಮ: ಆಫ್ರಿಕನ್ ವ್ಯಕ್ತಿಯಿಂದಲೇ ಆಫ್ರಿಕನ್ ಪ್ರಜೆ ಕೊಲೆ

ಅನೈತಿಕ ಪ್ರೇಮದಿಂದ ಆಫ್ರಿಕನ್ ವ್ಯಕ್ತಿಯಿಂದಲೇ ಆಫ್ರಿಕನ್ ಪ್ರಜೆ ಕೊಲೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡೇವಿಡ್
ಡೇವಿಡ್
author img

By

Published : Oct 11, 2022, 3:31 PM IST

Updated : Oct 11, 2022, 3:50 PM IST

ಬೆಂಗಳೂರು: ಇದು ಆಫ್ರಿಕನ್ ಖಂಡದಿಂದ ಏಷ್ಯಾಕ್ಕೆ ಬಂದು, ಭಾರತದ ಬೆಂಗಳೂರಿನಲ್ಲಿ ಬಿಸಿನೆಸ್​ ಮಾಡಿಕೊಂಡಿದ್ದು, ಭಾರತದ ಹೆಣ್ಣಿಗಾಗಿ ಕಡಿದಾಡಿಕೊಂಡು ಕೊಲೆಯಾದ ಆಫ್ರಿಕನ್ ಪ್ರಜೆಯ ದುರಂತ ಅಂತ್ಯ ಇದು. ಆಫ್ರಿಕಾದ 36 ವರ್ಷದ ಆರಡಿ ಡೇವಿಡ್ ಕೊಲೆಯಾದ ವ್ಯಕ್ತಿ. ಈತನನ್ನು ಕೊಲೆ ಮಾಡಿರುವ ಆರೋಪದಡಿ ಆಫ್ರಿಕಾ ಮೂಲದ ವಿಕ್ಟರ್ ಎಂಬಾತನನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಸಂಜೆ 6-30ಕ್ಕೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ದಾಸರಹಳ್ಳಿಯ ಮುನಿಕೆಂಪಣ್ಣ ಬಡಾವಣೆಯ ನಡುರಸ್ತೆಯಲಿ ಡೇವಿಡ್ ಹೆಣವಾಗಿದ್ದ. ಡೇವಿಡ್ ಕೊಲೆ ಆರೋಪಿ ಮನೆಗೆ ಬಂದು ಆತನ‌ ಲಿವಿಂಗ್ ಟುಗೆದರ್ ಪಾರ್ಟನರ್ ಜೊತೆ ಸಾಂಗತ್ಯ ಬಯಸಿದ್ದ. ಇದು ವಿಕ್ಟರ್​​ಗೆ ಇಷ್ಟವಿರಲಿಲ್ಲ. ತಾನಿದ್ದ ಬಾಡಿಗೆ ಮನೆಯಲ್ಲಿ ಕಳೆದ‌ ಎರಡು ದಿನಗಳ ಹಿಂದೆ ಪಾರ್ಟನರ್ ಜೊತೆ ಡೇವಿಡ್​ನನ್ನು ಕಂಡ ಆರೋಪಿ ವಿಕ್ಟರ್ ಜಗಳ ತೆಗೆದಿದ್ದಾನೆ.

ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅವರು ಮಾತನಾಡಿದರು

ಚಾಕುವಿನಿಂದ ಭೀಕರವಾಗಿ ಐದಾರು ಸಲ ಎದೆ, ಹೊಟ್ಟೆ, ಕತ್ತಿಗೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಬ್ಯುಸಿನೆಸ್​ ವೀಸಾ ಅವಧಿ ಮುಗಿದಿದ್ದರೂ ಇಬ್ಬರು ಆಫ್ರಿಕನ್ ಪ್ರಜೆಗಳು ಅಕ್ರಮವಾಗಿ ವಾಸವಿದ್ದರು. ಈಶಾನ್ಯ ಭಾರತದ ಮಹಿಳೆ ಸಾಂಗತ್ಯಕ್ಕಾಗಿ ಒಬ್ಬ ಕೊಲೆಯಾಗಿದ್ದರೆ, ಮತ್ತೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಓದಿ: ಜಿಂಕೆ ಮಾಂಸ ಸಾಗಣೆ: ಮೈಸೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

Last Updated : Oct 11, 2022, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.