ETV Bharat / state

ಆಳ್ವಾನನ್ನು ಖೆಡ್ಡಾಕ್ಕೆ ಕೆಡವಲು ಸಿಸಿಬಿ ಪ್ಲಾನ್: ಆದಿತ್ಯ ಅಗರ್ವಾಲ್​ ವಿಚಾರಣೆ ಚುರುಕು

author img

By

Published : Sep 17, 2020, 11:06 AM IST

ಡ್ರಗ್ ಪೆಡ್ಲರ್ ಆದಿತ್ಯ ಅಗರ್ವಾಲ್​ನನ್ನು ಸಿಸಿಬಿ ಪೊಲೀಸರು 2 ದಿನಗಳ ಕಾಲ ವಶಕ್ಕೆ ಪಡೆದಿದ್ದು, ಇಂದು ಸಿಸಿಬಿ ಅಧಿಕಾರಿಗಳು ಬೆಳಗ್ಗೆಯಿಂದಲೇ ವಿಚಾರಣೆ ನಡೆಸುತ್ತಿದ್ದಾರೆ.

ಡ್ರಗ್ ಪೆಡ್ಲರ್ ಆದಿತ್ಯಾ ಅಗರ್ವಾಲ್​
ಡ್ರಗ್ ಪೆಡ್ಲರ್ ಆದಿತ್ಯಾ ಅಗರ್ವಾಲ್​

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ನಂಟು ಆರೋಪ ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಈ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಆದಿತ್ಯ ಅಗರ್ವಾಲ್​ನನ್ನು ಸಿಸಿಬಿ ಪೊಲೀಸರು 2 ದಿನಗಳ ಕಾಲ ವಶಕ್ಕೆ ಪಡೆದಿದ್ದು, ಇಂದು ಸಿಸಿಬಿ ಅಧಿಕಾರಿಗಳು ಬೆಳಗ್ಗೆಯಿಂದಲೇ ವಿಚಾರಣೆ ನಡೆಸುತ್ತಿದ್ದಾರೆ.

ಈತನ ಜೊತೆ ಆಪ್ತನಾಗಿರುವ ಆರೋಪಿ ಆದಿತ್ಯ ಆಳ್ವಾ ಕುರಿತು ಬಹಳಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದಿತ್ಯ ಆಳ್ವಾ ಅಗರವಾಲ್​​ಗೆ ಅತ್ಯಾಪ್ತ ಎನ್ನಲಾಗ್ತಿದೆ. ಹೀಗಾಗಿ‌ ಆತನನ್ನು ಬಾಡಿ ವಾರೆಂಟ್ ಮೂಲಕ ಜೈಲಿನಿಂದ ಕರೆತಂದಿರುವ ಸಿಸಿಬಿ ಅಧಿಕಾರಿಗಳು ವಿರೇನ್ ಖನ್ನಾ, ಆದಿತ್ಯ ಆಳ್ವಾ ‌ನಡುವಿನ ಡ್ರಗ್ಸ್​ ಮಾಫಿಯಾದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದಾನೆ.

ಈ ಹಿಂದೆ ಆದಿತ್ಯ ಅಗರ್ವಾಲ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿರೇನ್ ಖನ್ನಾ ವಿಚಾರಣೆ ವೇಳೆ ಆದಿತ್ಯ ಅಗರ್ವಾಲ್ ಬಗ್ಗೆ ಕೆಲವೊಂದು ಮಾಹಿತಿ ನೀಡಿದ್ದ ಎಂದು ಹೇಳಲಾಗ್ತಿದೆ. ಹೀಗಾಗಿ ಬಾಡಿ ವಾರೆಂಟ್ ಮೂಲಕ 2 ದಿನಗಳ ಕಾಲ‌ ಮತ್ತೆ ಕಸ್ಟಡಿಗೆ ಪಡೆದ ಸಿಸಿಬಿ ತನಿಖೆ ಮುಂದುವರೆಸಿದೆ.

ಆದಿತ್ಯ ಅಗರ್ವಾಲ್​ ಹಿನ್ನೆಲೆ: ಡ್ರಗ್ಸ್​ ಮಾಫಿಯಾ ಕಿಂಗ್​ಪಿನ್ ವಿರೇನ್​ ಖನ್ನಾನ ಅತ್ಯಾಪ್ತ ಸಹಾಯಕ ಆದಿತ್ಯ ಅಗರ್ವಾಲ್. ಈ ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರಿದ್ದ ಮೊದಲ ಆರೋಪಿ ಆದಿತ್ಯ ಅಗರ್ವಾಲ್ ಆಗಿದ್ದಾನೆ. ಈತ ಹರಿಯಾಣದ ಪಂಚಕುಲದ ನಿವಾಸಿಯಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಈತ ಯುವತಿಯೋರ್ವಳ ಜೊತೆ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್​ನಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದನಂತೆ. ಬಳಿಕ ಡ್ರಗ್ಸ್ ದಂಧೆಯಲ್ಲಿ ವಿರೇನ್ ಖನ್ನಾ ಪಾರ್ಟ್​ನರ್ ಮತ್ತು ಸಹಾಯಕನಂತೆ ಕೆಲಸ ಮಾಡುತ್ತಿದ್ದ. ವಿರೇನ್ ಖನ್ನಾ ಪಾರ್ಟಿಗಳಲ್ಲಿ ಡ್ರಗ್ಸ್​ ಪೂರೈಸುತ್ತಿದ್ದ ಈತ ರಿಚ್ಮಂಡ್ ರಸ್ತೆಯ ಅಪಾರ್ಟ್‌ಮೆಂಟ್​ವೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದ. ತಿಂಗಳಿಗೆ 42 ಸಾವಿರ ರೂಪಾಯಿ ಬಾಡಿಗೆ ನೀಡಿ ವಾಸವಿದ್ದು, ಡ್ರಗ್ಸ್​ ದಂಧೆ ನಡೆಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದನಂತೆ ಈ ಆದಿತ್ಯ ಅಗರ್ವಾಲ್.

ಆದರೆ ಡ್ರಗ್ಸ್​ ಮಾಫಿಯಾ ಸುದ್ದಿಯಾಗುತ್ತಿದ್ದಂತೆ ಬೆಂಗಳೂರು ಬಿಟ್ಟು ಹರಿಯಾಣಕ್ಕೆ ಪರಾರಿಯಾಗಿದ್ದ. ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಪಂಚಕುಲದಲ್ಲಿ ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.