ಬೆಂಗಳೂರು: ಇದೇ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ದ.ಆಫ್ರಿಕಾ ಟಿ-20 ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿದೆ.
![Additional bus service from BMTC for passengers who arriving for view T-20 cricket](https://etvbharatimages.akamaized.net/etvbharat/prod-images/4501774_bmtcjpg.jpg)
ಪಂದ್ಯಾ ಸಂಜೆ 07.00 ಗಂಟೆಗೆ ಶುರುವಾಗಲಿದ್ದು, ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ಇರುವ ನಿಲುಗಡೆಯಲ್ಲಿ ಇಳಿಯುವುದು ಹಾಗೂ ಕ್ರಿಕೆಟ್ ಪಂದ್ಯ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸುಮಾರು ರಾತ್ರಿ 11:30 ಗಂಟೆಗೆ ಮನೆಗೆ ತೆರಳಲು, ಕ್ರೀಡಾಂಗಣದಿಂದಲೇ ಚೀಟಿ ವಿತರಿಸಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಬಸ್ ರೂಟ್ ವ್ಯವಸ್ಥೆ ಹೀಗಿದೆ:
* ಶಿವಾಜಿನಗರದಿಂದ- ಕಾಡುಗೋಡಿ ಬಸ್ ನಿಲ್ದಾಣ ( ಮಾರ್ಗ: ಟ್ರಿನಿಟಿ, ದೊಮ್ಮಲೂರು, ಹೆಚ್ ಎ ಎಲ್, ಮಾರತಹಳ್ಳಿ),
* ಮೆಯೋ ಹಾಲ್ನಿಂದ ಸರ್ಜಾಪುರ (ಮಾರ್ಗ: ವಿವೇಕ್ ನಗರ, ಕೋರಮಂಗಲ, ಅಗರ),
* ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ( ಮಾರ್ಗ: ಆಡುಗೋಡಿ ಮಡಿವಾಳ,ಬೊಮ್ಮನಹಳ್ಳಿ),
* ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ವರೆಗೆ ( ಮಾರ್ಗ: ಆಡುಗೋಡಿ, ಜಯದೇವ ಆಸ್ಪತ್ರೆ ,ಹುಳಿಮಾವು ಗೇಟ್),
* ಶಾಂತಿನಗರ ಬಸ್ ನಿಲ್ದಾಣದಿಂದ ಕೆಂಗೇರಿ ಕೆಹೆಚ್ಬಿ ಕ್ವಾಟ್ರಸ್ವರೆಗೆ ( ಮಾರ್ಗ: ಮೈಸೂರು ರಸ್ತೆ, ನಾಯಂಡಳ್ಳಿ, ಕೆಂಗೇರಿ),
* ಕೆಂಪೇಗೌಡ ಬಸ್ ನಿಲ್ದಾಣದಿಂದ ಜನಪ್ರಿಯ ಟೌನ್ ಶಿಪ್ವರೆಗೆ ( ಮಾರ್ಗ: ಮಾಗಡಿ ರಸ್ತೆ, ಸುಂಕದಕಟ್ಟೆ ಗೊಲ್ಲರಹಟ್ಟಿ ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲದವರೆಗೆ ( ಮಾರ್ಗ:ಶಿವಾಜಿನಗರ, ಮೇಕ್ರಿ ಸರ್ಕಲ್ ,ಯಶವಂತಪುರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ 5 ನೇ ಹಂತವರೆಗೆ ( ಮಾರ್ಗ: ಶಿವಾಜಿನಗರ, ಮೇಕ್ರಿ ಸರ್ಕಲ್, ಹೆಬ್ಬಾಳ)
* ಕೆ ಆರ್ ಮಾರ್ಕೆಟ್ನಿಂದ ಆರ್ ಕೆ ಹೆಗಡೆ ನಗರದವರೆಗೆ ( ಮಾರ್ಗ: ಶಿವಾಜಿನಗರ ಟ್ಯಾನರಿ ರೋಡ್ ನಾಗವಾರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರುವರೆಗೆ(ಮಾರ್ಗ: ಶಿವಾಜಿನಗರ, ಲಿಂಗರಾಜಪುರ, ಹೆಣ್ಣೂರು ಕ್ರಾಸ್)