ETV Bharat / state

DSS ಅಧ್ಯಕ್ಷ ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟ ಜಗ್ಗೇಶ್.. - ಬೆಂಗಳೂರು ಲೇಟೆಸ್ಟ್ ನ್ಯೂಸ್

ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲ, ತಲೆಯೂ ಬಾಗಿಸೋದಿಲ್ಲ. ನನ್ನ ಕೋಟ್ಯಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ, ಕ್ಷಮೆಯಿಲ್ಲ’ ಎಂದು ಜಗ್ಗೇಶ್ ಸರಣಿ ಟ್ಟೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ನಟ ಜಗ್ಗೇಶ್
ನಟ ಜಗ್ಗೇಶ್
author img

By

Published : Aug 25, 2021, 6:26 PM IST

ಬೆಂಗಳೂರು : 2020-21ನೇ ಸಾಲಿನಲ್ಲಿ ಪಾಲಿಕೆ ಶಾಲೆಗಳಿಗೆ ಸ್ವೆಟರ್ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ಈ ಸಂಬಂಧ ಟೆಂಡರ್‌ ಕರೆಯದೆ ನೇರವಾಗಿ ಸ್ವೆಟರ್ ಗಳನ್ನ ಖರೀದಿಸಲು, ಕರ್ನಾಟಕ ನಿಗಮಕ್ಕೆ ಸ್ವೆಟರ್​​ಗಳನ್ನು ಸರಬರಾಜು ಮಾಡಲು ಆದೇಶವೂ ಆಗಿತ್ತು.

ಆದರೆ, ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಸ್ವೆಟರ್ ಖರೀದಿ ಟೆಂಡರ್​​ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಸಿ ಎಸ್ ರಘು ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು, ನಿನ್ನೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು‌.

ಈ ಕುರಿತಂತೆ ನಟ ಜಗ್ಗೇಶ್​ ಟ್ವಿಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದಲ್ಲಿ, ಸುಖಾಸುಮ್ಮನೆ ತಮ್ಮ ಹೆಸರು ಎಳೆದು ತಂದಿರುವ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಘು ವಿರುದ್ಧ ನಟ ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ. ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ, ಪ್ರತಿಗಳನ್ನ ಟ್ಟಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ, ನನ್ನ ಹೆಸರು ಯಾಕೆ ತಂದಿರಿ. ಮಾಧ್ಯಮಗಳಲ್ಲಿ ನನ್ನ ತೇಜೋವಧೆ ಮಾಡಿದ್ದೀರಿ ಎಂದು ರಘು ವಿರುದ್ಧ ಕಿಡಿಕಾರಿದ್ದಾರೆ.

  • ಎಲ್ಲೋ ಮಾಡಿದ ವಿಷಯಕ್ಕೆ ನನ್ನ ಹೆಸರು ಏಕೆ ತಂದಿರಿ!ನೀವು ನ್ಯಾಯಪರ ಹೋರಾಟ ಮಾಡಿ ನನ್ನ ಬೆಂಬಲವು ಇರುತ್ತದೆ!ಆದರೆ ನನಗು ಇದಕ್ಕು ಯಾವ ಸಂಬಂಧವಿಲ್ಲಾ ಆದರು ನನ್ನ ಹೆಸರು ಏಕೆ ತಂದಿರಿ!ಯಾವ ಪುರುಷಾರ್ಥಕ್ಕೆ?ನಾನು ತಪ್ಪು ಮಾಡಲ್ಲಾ ತಲೆಯು ಬಾಗಿಸೋಲ್ಲಾ!ನನ್ನಕೋಟ್ಯಾಂತರ ಅಭಿಮಾನಿಗಳಿಗೆ ತಪ್ಪು ಸಂದೇಶ
    ರವಾನಿಸುವ ಕಾರ್ಯ ಮಾಡಿದ್ದೀರಿ ಕ್ಷಮೆಯಿಲ್ಲಾ

    — ನವರಸನಾಯಕ ಜಗ್ಗೇಶ್ (@Jaggesh2) August 25, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಕಾಲಿವುಡ್ ನಿರ್ದೇಶಕನ ಜೊತೆ ಸ್ಯಾಂಡಲ್​​ವುಡ್​​ ಬಾದಷಾ ಕಿಚ್ಚನ ಮುಂದಿನ ಸಿನಿಮಾ?

‘ಎಲ್ಲೋ ಮಾಡಿದ ವಿಷಯಕ್ಕೆ ನನ್ನ ಹೆಸರು ಏಕೆ ತಂದಿರಿ, ನೀವು ನ್ಯಾಯಪರ ಹೋರಾಟ ಮಾಡಿ ನನ್ನ ಬೆಂಬಲವು ಇರುತ್ತದೆ. ಆದರೆ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ನನ್ನ ಹೆಸರು ಏಕೆ ತಂದಿರಿ.

ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲ, ತಲೆಯೂ ಬಾಗಿಸೋದಿಲ್ಲ. ನನ್ನ ಕೋಟ್ಯಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ, ಕ್ಷಮೆಯಿಲ್ಲ’ ಎಂದು ಜಗ್ಗೇಶ್ ಸರಣಿ ಟ್ಟೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.