ETV Bharat / state

ದರ್ಶನ್​ ಪ್ರಕರಣದಲ್ಲಿ ಉಮಾಪತಿ ನನ್ನ ಬಳಸಿಕೊಂಡಿದ್ದು ತಪ್ಪು: ಅರುಣಾ ಕುಮಾರಿ - ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣ

ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಅರುಣಾ ಕುಮಾರಿ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅರುಣಾ ಕುಮಾರಿ
ಅರುಣಾ ಕುಮಾರಿ
author img

By

Published : Jul 13, 2021, 12:47 PM IST

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಬೆಳಗ್ಗೆಯಷ್ಟೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಮಾಧ್ಯಮಗೋಷ್ಟಿ ನಡೆಸಿ ದರ್ಶನ್ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ರು. ಈ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅರುಣಾ ಕುಮಾರಿ ಸಹ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ.

ದರ್ಶನ್​ ಪ್ರಕರಣದಲ್ಲಿ ಉಮಾಪತಿ ನನ್ನ ಬಳಸಿಕೊಂಡಿದ್ದು ತಪ್ಪು: ಅರುಣಾ ಕುಮಾರಿ

‘ಉಮಾಪತಿ ನನ್ನ ಬಳಸಿಕೊಂಡ್ರು’

ಈ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ, ನನ್ನನ್ನು ಬಳಸಿಕೊಂಡಿದ್ದು ತಪ್ಪು ಅಂತಾ ಹೇಳಿದ್ದಾರೆ. ಉಮಾಪತಿಗೆ ನನ್ನ ಪರಿಚಯ ಇಲ್ಲ ಅಂತಾ ಹೇಳ್ತಿದ್ದಾರಲ್ಲ, ಅವರು ನನಗೆ ಮಾರ್ಚ್ 30 ರಿಂದಲೂ ಪರಿಚಯ ಇದ್ದಾರೆ ಎಂದು ಅರುಣಾಕುಮಾರಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟರು.

‘ತಂದೆ-ಅಣ್ಣನಿಗೂ ಹಾರ್ಟ್ ಸಿಂಬಲ್ ಕಳಿಸ್ತಿನಿ’

ನಿರ್ಮಾಪಕ ಉಮಾಪತಿಗೆ ಹಾರ್ಟ್​ ಸಿಂಬಲ್​ ಕಳಿಸಿರುವ ಬಗ್ಗೆ ಮಾತನಾಡಿರುವ ಅರುಣಾ, ನನ್ನ ಅಣ್ಣ-ತಂದೆಗೂ ನಾನು ಹಾರ್ಟ್ ಸಿಂಬಲ್ ಕಳಿಸ್ತಿವಿ ಅಲ್ವಾ, ಅದ್ರಲ್ಲೇನು ವಿಶೇಷ. ಇದೇ ಈಗ ದೊಡ್ಡ ಸುದ್ದಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಕಳ್ಳತನ ಮಾಡಿಲ್ಲ’

ನಾನು ಲೋನ್ ಕೊಡಿಸುವುದಕ್ಕೆ ಭೇಟಿ ಮಾಡಿರೋದು ನಿಜ. ಆದರೆ, ಸಾಲ ಕೊಡಿಸಿಲ್ಲ. ದರ್ಶನ್​ ಫಾರಂ ಹೌಸ್​ಗೆ ಹೋಗಿದ್ದೀನಿ, ನಾನು ಕಳ್ಳತನ ಮಾಡಿಲ್ಲ ಅಂತಾ ಅರುಣಾ ಕುಮಾರಿ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ’

ದರ್ಶನ್-ಉಮಾಪತಿ ಮಧ್ಯೆ ಏನು ನಡೆದಿದೆ ಅಂತಾ ಗೊತ್ತಿಲ್ಲ. ಆದರೆ, ಇದರಿಂದ ನನಗೆ ತೊಂದರೆಯಾಗುತ್ತಿದೆ. ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ. ದಯಮಾಡಿ ನನ್ನನ್ನು ಬದುಕಲು ಬಿಡಿ ಅಂತಾ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:ಆಡಿಯೋ ಚಾಟ್, ಅರುಣಾಕುಮಾರಿ ಪರಿಚಯ: ದರ್ಶನ್​ ಆರೋಪಕ್ಕೆ ಉಮಾಪತಿ ಸ್ಪಷ್ಟನೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.