ETV Bharat / state

ಕಂಡವರ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಜೈಲು ಸೇರಿದ ಆರೋಪಿ

ನಿನ್ನೆ ತಡರಾತ್ರಿ 2 ಗಂಟೆ ವೇಳೆಗೆ ಕೆಪಿ ಅಗ್ರಹಾರದ‌ಲ್ಲಿ ಘಟನೆ ನಡೆದಿದ್ದು, ಸಿಮೆಂಟ್ ಕಲ್ಲಿನಿಂದ ತಲೆ ಮೇಲೆ ಹೊಡೆದು ಕೊಲೆ ಮಾಡಲಾಗಿದೆ.

accused-arrested-who-murdered-for-property-issue
ಕಂಡವರ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಜೈಲು ಸೇರಿದ ಆರೋಪಿ
author img

By

Published : Sep 19, 2022, 7:05 PM IST

ಬೆಂಗಳೂರು: ತಮ್ಮ ಹಾಗೂ ಅಣ್ಣನ ಮಕ್ಕಳ ನಡುವೆ ಆಸ್ತಿಗಾಗಿ ನಡೆದ ಜಗಳದ ಮಧ್ಯೆ ಹೋಗಿ ಕೊಲೆ ಮಾಡಿರುವ ವ್ಯಕ್ತಿ ಈಗ ಜೈಲು ಸೇರಿದ್ದಾನೆ. ಬಾಲಕೃಷ್ಣ ಎಂಬವನು ಕೊಲೆಯಾದ ವ್ಯಕ್ತಿ. ನವೀನ್​ ರಾವ್​ ಬಂಧಿತ ಆರೋಪಿ. ಆಸ್ತಿ ವಿಚಾರಕ್ಕೆ ಕೆಪಿ ಅಗ್ರಹಾರದ‌ ನಿವಾಸಿ ಬಾಲಕೃಷ್ಣನನ್ನು ಕೊಲೆ ಮಾಡಲಾಗಿದೆ. ನಿನ್ನೆ ತಡರಾತ್ರಿ 2 ಗಂಟೆ ವೇಳೆಗೆ ಘಟನೆ ನಡೆದಿದ್ದು, ಸಿಮೆಂಟ್ ಕಲ್ಲಿನಿಂದ ತಲೆ ಮೇಲೆ ಹೊಡೆದು ಕೊಲೆ ಮಾಡಲಾಗಿದೆ.

ಕಂಡವರ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಜೈಲು ಸೇರಿದ ಆರೋಪಿ

ಬಾಲಕೃಷ್ಣ ಮತ್ತು ಅವರ ತಮ್ಮ- ಅಣ್ಣನ ಮಕ್ಕಳ ನಡುವೆ ಆಸ್ತಿ ವಿವಾದವಿತ್ತು. ಬಾಲಕೃಷ್ಣ ಅವರು ಮದುವೆ ಆಗಿರಲಿಲ್ಲ. ಇದರಿಂದ ಅಣ್ಣನ ಮಗ ನವೀನ್ ಸ್ನೇಹಿತನಾಗಿದ್ದ ಅದೇ ಏರಿಯಾದ ನವೀನ್ ರಾವ್, ಬಾಲಕೃಷ್ಣಗೆ ನವೀನ್​ಗೆ ಆಸ್ತಿ ಕೊಡುವಂತೆ ಗಲಾಟೆ ಮಾಡಿದ್ದಾನೆ. ತಡ ರಾತ್ರಿ ಇಬ್ಬರು ಒಟ್ಟಿಗೆ ಕುಡಿದು ಬಂದು ಮನೆಯನ್ನು ಸ್ನೇಹಿತನಿಗೆ ಬಿಟ್ಟುಬಿಡು ಎಂದು ಮತ್ತೆ ಕಿರಿಕ್ ಮಾಡಿದ್ದನು.

ಇದಕ್ಕೆ ಬಾಲಕೃಷ್ಣ ನಿರಾಕರಿಸಿದಾಗ ಅಲ್ಲೆ ಇದ್ದ ಸಿಮೆಂಟ್ ಹಾಲೋಬ್ಲಾಕ್​ನಿಂದ ಬಾಲಕೃಷ್ಣ ಮೇಲೆ ಹಲ್ಲೆ ನಡೆಸಿದ್ದಾನೆ.‌ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಬಾಲಕೃಷ್ಣ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಸದ್ಯ ಘಟನೆ ಸಂಬಂಧ ನವೀನ್ ರಾವ್ ನನ್ನು ಕೆಪಿ ಅಗ್ರಹಾರ ಪೊಲೀಸರು ಬಂಧಿಸಿ ವಿಚಾರಕ್ಕೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಡು ರಸ್ತೆಯಲ್ಲೇ ಕಲಬುರಗಿ ಯುವಕನ ಬರ್ಬರ ಕೊಲೆ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.