ಬೆಂಗಳೂರು: ಆಂಧ್ರಪ್ರದೇಶದಿಂದ ನಗರಕ್ಕೆ ಸಾಗಿಸಿ ಕೊಟ್ಯಂತರ ರೂಪಾಯಿ ಮೌಲ್ಯದ ಸಾವಿರಾರು ಕೆ.ಜಿಯ ರಕ್ತಚಂದನ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಈತ ಫಾರ್ಮ್ ಹೌಸ್ ನ ನೀರಿನ ಸಂಪ್ನಲ್ಲಿ ಮರಗಳನ್ನು ಶೇಖರಿಸಿ ಹಂತ-ಹಂತವಾಗಿ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ತಮಿಳುನಾಡು ಮೂಲದ ವಿನೋದ್ ಬಂಧಿತ ಆರೋಪಿ. ಹೆಸರಘಟ್ಟದ ಫಾರ್ಮ್ ಹೌಸ್ನಲ್ಲಿ ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದ. ಜುಲೈ 22 ರಂದು ವಿನೋದ್ ಹಾಗೂ ಅಜಯ್ ಎಂಬುವರು ಸ್ಯಾಟಲೈಟ್ ಬಸ್ ನಿಲ್ದಾಣದ ನ್ಯೂ ಟಿಂಬರ್ ಲೇಔಟ್ನಲ್ಲಿ 113 ಕೆಜಿ ಮೌಲ್ಯದ ರೆಡ್ ಸ್ಯಾಂಡಲ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಪೈಕಿ ವಿನೋದ್ ಎಂಬಾತನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಹೆಸರಘಟ್ಟದ ಫಾರ್ಮ್ ಹೌಸ್ನಲ್ಲಿ ನೀರಿಲ್ಲದ ಸಂಪ್ನಲ್ಲಿ ಪ್ಯಾಕ್ ಮಾಡಿ ಬಚ್ಚಿಟ್ಟಿದ್ದ ಒಟ್ಟು 2.68 ಕೋಟಿ ಮೌಲ್ಯದ 1.693 ಕೆ.ಜಿ ರಕ್ತಚಂದನವನ್ನು ಜಪ್ತಿ ಮಾಡಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಸದ್ಯ ಓರ್ವನನ್ನು ಮಾತ್ರ ಬಂಧಿಸಲಾಗಿದೆ. ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಅಣತಿಯಂತೆ ವಿನೋದ್ ರಕ್ತ ಚಂದನ ತುಂಡುಗಳನ್ನು ಮಾರಾಟಕ್ಕೆ ಮುಂದಾಗಿದ್ದ. ಎಷ್ಟು ತಿಂಗಳಿಂದ ಅಕ್ರಮ ಎಸಗುತ್ತಿದ್ದರು ಎಂಬುದು ಸೇರಿದಂತೆ ಉಳಿದ ವಿವರಗಳ ಬಗ್ಗೆ ಎಸ್ಕೇಪ್ ಆಗಿರುವ ಆರೋಪಿಗಳನ್ನ ಬಂಧಿಸಿದಾಗ ಗೊತ್ತಾಲಿದೆ. ಅಲ್ಲದೆ, ಫಾರ್ಮ್ ಹೌಸ್ನ ಮಾಲೀಕರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ. ಮಾಲೀಕನ ಬಗ್ಗೆ ಮಾಹಿತಿಗಾಗಿ ವಿಲೇಜ್ ಅಕೌಂಟೆಂಟ್ಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಹಾರ್ಪಿಕ್ ಬಾಕ್ಸ್ಗಳಲ್ಲಿ ಸ್ಪಿರೀಟ್ ಸಾಗಣೆ: ಮಾಲು ಸಹಿತ ಇಬ್ಬರ ಬಂಧನ