ETV Bharat / state

ವಾಲ್ಮೀಕಿ ಪರಿಶಿಷ್ಟ ಪಂಗಡ ನಿಗಮದ‌ ಮೇಲೆ ಎಸಿಬಿ ದಾಳಿ

ಎಸಿಬಿ ಅಧಿಕಾರಿಗಳು‌ ಇವತ್ತು ಸಹ ದಾಳಿಯನ್ನು ಮುಂದುವರೆಸಿದ್ದಾರೆ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ‌ಬೆಂಗಳೂರಿನ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ನಿಗಮದ ಕಚೇರಿ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ನಗದು ಹಾಗೂ ಮಹತ್ವದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ACB attack on government officials
ಮುಂದುವರೆದ ಎಸಿಬಿ ದಾಳಿ
author img

By

Published : Aug 27, 2020, 7:34 PM IST

Updated : Aug 27, 2020, 8:36 PM IST

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ನಿಗಮ ಮೇಲೆ ಎಸಿಬಿ ಅಧಿಕಾರಿಗಳು‌ ದಾಳಿ ನಡೆಸಿದರು.‌ ವಸಂತ ನಗರ ಬಳಿಯಿರುವ ನಿಗಮದ ಕಚೇರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದ ಕಾರಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಲಕ್ಷಾಂತರ ರೂ. ನಗದು ಹಾಗೂ ಮಹತ್ವದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪರಿಶಿಷ್ಟ ಪಂಗಡದ ಭೂಮಿ ಇಲ್ಲದ ರೈತರಿಗೆ ಸರ್ಕಾರದಿಂದ ಭೂಮಿ ಖರೀದಿಸಿ ನೀಡಲಾಗುತ್ತಿತ್ತು. ಆದರೆ, ಹೀಗೆ ನೀಡುವ ಯೋಜನೆಯಡಿ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಸರ್ಕಾರಕ್ಕೆ ಅಧಿಕ ಲೆಕ್ಕ ನೀಡಲಾಗುತ್ತಿತ್ತು. ಪ್ರತಿ ಎಕರೆಗೆ 4ರಿಂದ 5 ಲಕ್ಷದವರೆಗೆ ಹೆಚ್ಚಿನ ಹಣ ಕೊಟ್ಟು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟದ‌ ಮಾಡಿದ ಆರೋಪ ನಿಗಮದ ಮೇಲಿದೆ. ಈ ಮೂಲಕ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳು ಲಾಭ ಪಡೆದು ಅಕ್ರಮ ಎಸಗಿದ ಆರೋಪ ಹಿನ್ನೆಲೆಯಲ್ಲಿ‌ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ‌ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ, ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ನಿನ್ನೆ ನಡೆಸಿದ್ದ ದಾಳಿಯನ್ನು ಎಸಿಬಿ ಅಧಿಕಾರಿಗಳು ಮುಂದುವರೆಸಿದ್ದಾರೆ.

ವಾಲ್ಮೀಕಿ ಪರಿಶಿಷ್ಟ ಪಂಗಡ ನಿಗಮದ ಕಚೇರಿಯಲ್ಲಿ ಹಣ ಎಣಿಸುತ್ತಿರುವ ಎಸಿಬಿ ಅಧಿಕಾರಿಗಳು.

ಕೊಳಚೆ ನಿರ್ಮೂಲನಾ ಮಂಡಳಿ ಕಾರ್ಯದರ್ಶಿಯಾಗಿರುವ ಎಂ.ಎಸ್.ನಿರಂಜನ ಬಾಬು ಅವರ ತುಮಕೂರಿನ ಮಾರುತಿ ನಗರದಲ್ಲಿ 1 ಬಂಗಲೆ, ವಿವಿಧೆಡೆ 5 ಮನೆಗಳು, ತುಮಕೂರು ಜಿಲ್ಲೆಯಲ್ಲಿ 8 ನಿವೇಶನ ಹಾಗೂ ದೇವನಹಳ್ಳಿಯಲ್ಲಿ 1 ನಿವೇಶನ, 1.5 ಕೆಜಿ ಚಿನ್ನಾಭರಣ, 3.5 ಕೆ.ಜಿ ಬೆಳ್ಳಿ ವಸ್ತುಗಳು, 2 ಕಾರು, 5 ಲಕ್ಷ ನಗದು, ವಿವಿಧ ಬ್ಯಾಂಕ್​​ನಲ್ಲಿ 20 ಲಕ್ಷ ರೂ. ಠೇವಣಿ, 54 ಲಕ್ಷ ರೂ.ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಹೆಚ್.ನಾಗರಾಜ್ ಬಳಿಯೂ ಅಪಾರ ಅಕ್ರಮ ಆಸ್ತಿಪಾಸ್ತಿ ಪತ್ತೆ:

ಮೈಸೂರು ನಗರಪಾಲಿಕೆಯ ಅಭಿವೃದ್ಧಿ ಅಧಿಕಾರಿಯಾಗಿರುವ ನಾಗರಾಜ್ ಅವರ ಮೈಸೂರು ನಗರದಲ್ಲಿ 2 ಮನೆ, 5 ಮಹಡಿ ಕಮರ್ಷಿಯಲ್ ಕಾಂಪ್ಲೆಕ್ಸ್, ಬೆಂಗಳೂರು ನಗರದಲ್ಲಿ 1 ಫ್ಲ್ಯಾಟ್, ಮೈಸೂರಿನಲ್ಲಿ 4 ಸೈಟ್​, ಬೆಂಗಳೂರು ನಗರದಲ್ಲಿ 1 ನಿವೇಶನ, 2 ಕೆ.ಜಿ ಚಿನ್ನಾಭರಣ, 11 ಕೆ.ಜಿ ಬೆಳ್ಳಿ ವಸ್ತುಗಳು, 2 ಕಾರು, 9 ಲಕ್ಷ ನಗದು ಹಾಗೂ 15 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

Last Updated : Aug 27, 2020, 8:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.