ಬೆಂಗಳೂರು : ಕೋವಿಡ್-19 ಕಾರಣದಿಂದಾಗಿ ಶಾಲೆಗಳು ಇನ್ನೂ ಪುನಾರಂಭವಾಗಿಲ್ಲ. ಬರೋಬ್ಬರಿ 8 ತಿಂಗಳಿಗೂ ಹೆಚ್ಚು ಕಾಲ ಕಳೆದು ಹೋಗಿದ್ದು, ಆನ್ಲೈನ್ನಲ್ಲೇ ಪಾಠ ನಡೆಯುತ್ತಿದೆ. ಆದರೆ, ಕೋವಿಡ್ ಕಾರಣಕ್ಕೆ ಆಫ್ಲೈನ್ ಕ್ಲಾಸ್ ಇಲ್ಲ, ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ಹಾಜರಿ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಅಚ್ಚರಿಯ ಸಂಗತಿ ಬಿಚ್ಚಿಟ್ಟಿವೆ.
ಆನ್‌ಲೈನ್ ತರಗತಿಗಳು ನಡೆಯುತ್ತಿಲ್ಲ ಎನ್ನುವವರ ನಡುವೆ ಇಲ್ಲೊಂದು ಹೊಸ ದೂರು ಕೇಳಿ ಬರುತ್ತಿದೆ. ಶೇ.20-40ರಷ್ಟು ಮುಖ್ಯವಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರು ಆಗುತ್ತಿಲ್ಲ.
ಶೈಕ್ಷಣಿಕ ಜೀವನದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮೊದಲ ಹಂತವಾಗಿದ್ದು, ವಿದ್ಯಾರ್ಥಿಗಳಿಗೆ ಇದು ಬೋರ್ಡ್ ಎಕ್ಸಾಂ ಇರುವ ವರ್ಷವಾಗಿದೆ. ಆದ್ದರಿಂದ ಅವರು ತರಗತಿಗಳು ತಪ್ಪಿಸುವಂತಿಲ್ಲ.
ಈ ಸಂಬಂಧ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಮಾತಾನಾಡಿದ್ದು, ಶಾಲೆಗಳು ಎಂದಿನಂತೆ ತೆರೆದಿದ್ದರೆ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇರುತ್ತಿರಲಿಲ್ಲ.
ಆದರೆ, ಈ ಬಾರಿ ಆನ್‌ಲೈನ್ ತರಗತಿಗಳೇ ನಡೆಯುತ್ತಿದೆ. ನಿಯಮಿತವಾಗಿ ಆನ್‌ಲೈನ್ ತರಗತಿಗಳು ನಡೆದ್ರೂ ಅನೇಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಚಕ್ಕರ್ ಹೊಡೆಯುತ್ತಿದ್ದಾರೆ. ಇದನ್ನು ಸರಿಪಡಿಸಲು ಪಾಲಕರಾಗಲಿ, ಶಿಕ್ಷಣ ಇಲಾಖೆಯಾಗಲಿ ಪ್ರಯತ್ನ ಪಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ಮಾಡುವ ಜವಾಬ್ದಾರಿ ಪೋಷಕರು ವಹಿಸಿಕೊಳ್ಳಬೇಕು. ಅವರಿಗೆ ಈ ವಿಚಾರವನ್ನು ಮನದಟ್ಟು ಮಾಡುವ ಕೆಲಸ ಸರ್ಕಾರ ಮಾಡಬೇಕು. ಇವೆರಡು ನಡೆಯದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಗೈರಾಗಿದ್ದಾರೆ.
ಇದು ಅವರ ಭವಿಷ್ಯದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿದೆ. ಈ ಕುರಿತು ಸರ್ಕಾರದ ಗಮನ ಸೆಳೆದು ಕಟ್ಟುನಿಟ್ಟಾಗಿ ಆನ್‌ಲೈನ್ ತರಗತಿಗೆ ಹಾಜರಾಗುವ ನಿಯಮ ಜಾರಿ ಮಾಡುವಂತೆ ಒತ್ತಾಯಿಸಲು ನಿರ್ಧರಿಸಿದ್ದೇವೆ ಅಂತಾ ತಿಳಿಸಿದರು.
ಇದನ್ನೂ ಓದಿ: ಸಮಿತಿ ವರದಿ ಬರುವವರೆಗೆ ಆನ್ ಲೈನ್ ಕ್ಲಾಸ್ ಗೆ ಅವಕಾಶ