ETV Bharat / state

ಪೇಸಿಎಂ, ಪೇಎಕ್ಸ್‌ಸಿಎಂ ಅಲ್ಲ. ಇದು ಪೇ ಟೀಂ.. ಎಎಪಿಯಿಂದಲೂ ಕ್ಯೂಆರ್‌ ಕೋಡ್‌ ಮಾದರಿ ಪೋಸ್ಟರ್‌ - Etv Bharat kannada

ಪೇಟಿಎಂ ಕ್ಯೂಆರ್​ ಕೋಡ್​ ಮಾದರಿಯಲ್ಲೇ ಆಮ್​ ಆದ್ಮಿ ಪಕ್ಷ ಸಿಎಂ ಬೊಮ್ಮಾಯಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಚಿಹ್ನೆ ಬಳಸಿ ಪೇ ಟೀಂ ಎಂದು ಕ್ಯೂಆರ್​ ಕೋಡ್​ ರಚಿಸಿದೆ.

KN_BNG_
ಎಎಪಿಯಿಂದ ಕ್ಯೂಆರ್​​ ಕೋಡ್​ ಬಿಡುಗಡೆ
author img

By

Published : Sep 22, 2022, 1:31 PM IST

ಬೆಂಗಳೂರು: ಪೇಟಿಎಂ ಕ್ಯೂಆರ್‌ ಕೋಡ್‌ ಮಾದರಿಯಲ್ಲಿ ಕಾಂಗ್ರೆಸ್‌ ರಚಿಸಿದ ಪೇಸಿಎಂ ಪೋಸ್ಟರ್‌ ವೈರಲ್‌ ಆದ ಬೆನ್ನಲ್ಲೇ ಇದೀಗ ಆಮ್‌ ಆದ್ಮಿ ಪಾರ್ಟಿ ಕೂಡ ಕ್ಯೂಆರ್‌ ಕೋಡ್‌ ಮಾದರಿಯ ಪೋಸ್ಟರ್‌ ತಯಾರಿಸಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಟಕ್ಕರ್‌ ಕೊಟ್ಟಿದೆ.

ಕಾಂಗ್ರೆಸ್​ನಿಂದ ಸಿಎಂ ಬಸವರಾಜ ಬೊಮ್ಮಾಯಿ ಪೇಸಿಎಂ ಕ್ಯೂಆರ್‌ ಕೋಡ್‌ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ ಪೇ ಎಕ್ಸ್‌ ಸಿಎಂ ಕ್ಯೂಆರ್‌ ಕೋಡ್‌ ಜೊತೆಗೆ ಜೆಡಿಎಸ್‌ ಚಿಹ್ನೆ ಕ್ಯೂಆರ್‌ ಕೋಡನ್ನೂ ಸೇರಿಸಿ ಆಮ್‌ ಆದ್ಮಿ ಪಾರ್ಟಿಯು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ.

ಇದು ಪೇ ಸಿಎಂ, ಪೇ ಎಕ್ಸ್ ಸಿಎಂ ಅಲ್ಲ, ಇದು ಪೇ ಟೀಂ. ಜೆಡಿಎಸ್‌ 10%, ಕಾಂಗ್ರೆಸ್‌ 20% ಹಾಗೂ ಬಿಜೆಪಿ 40% ಲೂಟಿ ಮಾಡಿದೆ. ಮೂರೂ ಪಕ್ಷಗಳ ಟೀಂ ರಾಜ್ಯವನ್ನು ಲೂಟಿ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಉಳಿದಿದ್ದು ಮೂರು ನಾಮ ಎಂದು ಆಮ್‌ ಆದ್ಮಿ ಪಾರ್ಟಿಯು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.