ETV Bharat / state

ಪರಿಷತ್ 4ನೇ ಕ್ಷೇತ್ರದಲ್ಲೂ ಅರಳಿದ ಕಮಲ: ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಚಿದಾನಂದ್​ಗೌಡಗೆ ಗೆಲುವು

ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್​​ರಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದ ಚಿದಾನಂದಗೌಡ ಅಂತಿಮವಾಗಿ ದ್ವಿತೀಯ ಪ್ರಾಶಸ್ತ್ಯದ ಮತಎಣಿಕೆಯಲ್ಲಿ ಪ್ರತಿಸ್ಪರ್ಧಿ ವಿರುದ್ಧ 7,032 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

BJP candidate Chidananda Gowda
ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ
author img

By

Published : Nov 11, 2020, 7:12 PM IST

ಬೆಂಗಳೂರು: ವಿಧಾನಪರಿಷತ್​​​ನ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಶ್ರೀನಿವಾಸ್​​ರಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದ ಚಿದಾನಂದಗೌಡ ಅಂತಿಮವಾಗಿ ದ್ವಿತೀಯ ಪ್ರಾಶಸ್ತ್ಯದ ಮತಎಣಿಕೆಯಲ್ಲಿ ಪ್ರತಿಸ್ಪರ್ಧಿ ವಿರುದ್ಧ 7,032 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಸೇರಿದಂತೆ ಒಟ್ಟು 15 ಮಂದಿ ಕಣದಲ್ಲಿದ್ದ ಕ್ಷೇತ್ರದಲ್ಲಿ ಎರಡು ದಿನಗಳ ಮತಎಣಿಕೆ ನಂತರ ಚಿದಾನಂದ ಗೆಲುವಿನ ನಗೆ ಬೀರಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ 5,071 ಮತಗಳ ಮುನ್ನಡೆ ಗಳಿಸಿದ್ದ ಚಿದಾನಂದ್ ನಿಗದಿತ ಮತ ಲಭಿಸದ ಹಿನ್ನೆಲೆ ದ್ವಿತೀಯ ಪ್ರಾಶಸ್ತ್ಯದ ಮತಎಣಿಕೆ ಮಾಡುವ ಮೂಲಕ ಅಂತಿಮ ಘೋಷಣೆ ಮಾಡಲಾಯಿತು.

ಕಲಾ ಕಾಲೇಜು ಮತ ಎಣಿಕೆ ಕೇಂದ್ರದ ಹೊರಭಾಗ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಹಾಲಿ ಜೆಡಿಎಸ್ ವಶದಲ್ಲಿದ್ದ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ. ಜೆಡಿಎಸ್ ಸದಸ್ಯ ಆರ್.ಚೌಡರೆಡ್ಡಿ ತೂಪಲ್ಲಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಬಿಜೆಪಿ ತನ್ನ ವಶಮಾಡಿಕೊಂಡಿದೆ. ಬಿಜೆಪಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಗಳ ತೀವ್ರ ಹೋರಾಟದ ಮಧ್ಯೆ ಚೌಡರೆಡ್ಡಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ 4 ವಿಧಾನಪರಿಷತ್ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ಮೂರು ಸ್ಥಾನವನ್ನು ಗೆದ್ದುಕೊಂಡಿದ್ದ ಬಿಜೆಪಿ ಇಂದು 4ನೇ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಮೂಲಕ ಜೆಡಿಎಸ್​​ನಿಂದ ಎರಡು ಹಾಗೂ ಕಾಂಗ್ರೆಸ್​​ನಿಂದ ಒಂದು ಕ್ಷೇತ್ರವನ್ನು ಕಿತ್ತುಕೊಂಡಿದೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಗೆಲುವು ಖಚಿತವಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಸಮೀಪ ಇರುವ ಕಲಾ ಕಾಲೇಜು ಮತ ಎಣಿಕೆ ಕೇಂದ್ರದ ಹೊರಭಾಗ ಜಮಾವಣೆಗೊಂಡು ಸಂಭ್ರಮಾಚರಣೆ ನಡೆಸಿದರು. ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ಅಭ್ಯರ್ಥಿ ಚಿದಾನಂದಗೌಡ ಸಿಹಿ ತಿನ್ನಿಸುವ ಮೂಲಕ ಜನ ಸಂಭ್ರಮಾಚರಣೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.