ETV Bharat / state

ಹೊಸಕೋಟೆಯಲ್ಲಿ ಭೀಕರ ಅಪಘಾತ: ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಪ್ರವಾಸಕ್ಕಾಗಿ ತೆರಳಿದ್ದ ಯುವಕರ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

banglore
ಅಪಘಾತ
author img

By

Published : Mar 18, 2020, 2:18 AM IST

ಬೆಂಗಳೂರು: ಪ್ರವಾಸಕ್ಕಾಗಿ ತೆರಳಿದ್ದ ಯುವಕರ ಕಾರ್​ವೊಂದು ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ.

ತಾಲೂಕಿನ ನಂದಗುಡಿ ಪೊಲೀಸ್ ಠಾಣೆಯ ರಾಷ್ಟ್ರೀಯ ಹೆದ್ದಾರಿ 75ರ ಮುಗಬಾಳ ಬಳಿ ಈ ಘಟನೆ ನಡೆದಿದೆ. ಕೆಆರ್​ಪುರದ ಸಿಗೇಹಳ್ಳಿ ಗ್ರಾಮದ ಯುವಕರು ಜಾಲಿ ಟ್ರಿಪ್​ಗೆಂದು ಸ್ವಿಫ್ಟ್ ಕಾರಿನಲ್ಲಿ ಕೋಲಾರ ತಾಲೂಕಿನ ನರಸಾಪುರಕ್ಕೆ ತೆರಳಿದ್ದರು. ನಂತರ ಸ್ವಗ್ರಾಮಕ್ಕೆ ವಾಪಾಸ್ಸಾಗುವ ಸಂದರ್ಭದಲ್ಲಿ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿಡೈವರ್​​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದಿದೆ.

ಡಿವೈಡರ್​ಗೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಮನೋಜ್ (22) ಮೃತ ಯುವಕನಾಗಿದ್ದು, ಗಿರೀಶ್ (21) ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಮತ್ತೊಬ್ಬ ಯುವಕ ದರ್ಶನ್ (24) ಗಾಯಗೊಂಡಿದ್ದಾನೆ. ಗಾಯಾಳು ಹಾಗೂ ಮೃತ ಯುವಕನನ್ನು ಪಟ್ಟಣದ ಎಂ.ವಿ.ಜೆ. ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಘಟನೆ ನಡೆದು ಹಲವು ಸಮಯ ಕಳೆದರೂ ಸಾರ್ವಜನಿಕರು ಭಯದಿಂದ ಮೃತ ಯುವಕರನ್ನು ಮುಟ್ಟಲು ಹಿಂಜರಿದಾಗ ಸ್ವತಃ ಆರಕ್ಷಕ ಸಿಬ್ಬಂದಿಗಳು ಅವರನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ಸ್ಥಳಕ್ಕೆ ಸಿಪಿಐ ರವೀಂದ್ರ, ಪಿಎಸೈ ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.