ETV Bharat / state

ಸಂವಿಧಾನ ವಿರೋಧಿಗಳು ಮನುಷ್ಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಬಸವಾದಿ ಶರಣರು 12ನೇ ಶತಮಾನದಲ್ಲಿ ಮುನ್ನಡೆಸಿದ ಮಾನವೀಯ ಧರ್ಮವನ್ನು 15 ನೇ ಶತಮಾನದಲ್ಲಿ ಕನಕದಾಸರು ಮುಂದುವರೆಸಿದರು ಎಂದು ಸಿಎಂ ತಿಳಿಸಿದರು.

Kanakadas Jayanti ಕನಕದಾಸ ಜಯಂತಿ ಸಿಎಂ ಸಿದ್ದರಾಮಯ್ಯ CM Siddaramaiah
ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ಸಂವಿಧಾನ ವಿರೋಧಿಗಳು ಮನುಷ್ಯ ವಿರೋಧಿಗಳು. ಸಂವಿಧಾನ-ಪ್ರಜಾಪ್ರಭುತ್ವ-ಜಾತ್ಯತೀತತೆ ಬಗ್ಗೆ ಪ್ರತಿಯೊಬ್ಬರೂ ಸ್ಪಷ್ಟತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿ ಉದ್ಘಾಟಿಸಿ, ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಸಮಗ್ರ ತತ್ವಪದ ಯೋಜನೆಯ 18 ಸಂಪುಟಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕನಕದಾಸರ 500ನೇ ಜಯಂತೋತ್ಸವವನ್ನು ಆಚರಿಸುವ ಅವಕಾಶ ನನಗೆ ಸಿಕ್ಕಿತ್ತು. ಆ ಸಂದರ್ಭದಲ್ಲಿ ಕನಕದಾಸರ ಕೀರ್ತನೆಗಳನ್ನು ಸುಲಭವಾಗಿ ಜನರ ಕೈಗೆ ತಲುಪಿಸುವ ಕಾರ್ಯವನ್ನು ಮಾಡಲಾಗಿತ್ತು ಎಂದು ಸ್ಮರಿಸಿದರು.

ಕನಕಶ್ರೀ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಕನಕಶ್ರೀ ಪ್ರಶಸ್ತಿಗೆ ಜಾತಿ-ಧರ್ಮ ಮುಖ್ಯ ಅಲ್ಲ. ಕನಕದಾಸರ ಸಾಮಾಜಿಕ ಸಂದೇಶದ ಮೇಲೆ ಕೆಲಸ ಮಾಡುವುದಷ್ಟೇ ಮುಖ್ಯ. ಬಸವಾದಿ ಶರಣರು, ಕನಕದಾಸರು ಇಬ್ಬರೂ ಮನುಷ್ಯರನ್ನು ವಿಭಜಿಸುವ ಜಾತಿ-ಧರ್ಮದ ತಾರತಮ್ಯವನ್ನು ವಿರೋಧಿಸಿದ್ದರು. ವಚನ ಚಳವಳಿಗೂ ಮೊದಲು ಜನರಿಗೆ ಅರ್ಥ ಆಗದ ಭಾಷೆಯಲ್ಲಿ ಧರ್ಮ‌ ಪ್ರಚಾರ ನಡೆಯುತ್ತಿತ್ತು. ಜನರಿಗೆ ಅರ್ಥವಾಗದ ಸಂಸ್ಕೃತ ಶ್ಲೋಕಗಳನ್ನು ಮುಟ್ಟದ ಬಸವಾದಿ ಶರಣರು ಜನರಿಗೆ ಅರ್ಥವಾಗುವ ಜನರ ಭಾಷೆಯಲ್ಲೇ ಅತ್ಯಂತ ಸರಳವಾಗಿ ಮಾನವೀಯ ಧರ್ಮವನ್ನು ಹೇಳಿದರು. ಮನುಷ್ಯ ನಿರ್ಮಿತ ಜಾತಿ ತಾರತಮ್ಯವನ್ನು, ಧಾರ್ಮಿಕ ತಾರತಮ್ಯವನ್ನು ಅಳಿಸಲು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಮುನ್ನಡೆಸಿದ ಮಾನವೀಯ ಧರ್ಮವನ್ನು 15 ನೇ ಶತಮಾನದಲ್ಲಿ ಕನಕದಾಸರು ಮುಂದುವರೆಸಿದರು ಎಂದರು.

ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್ ಅವರ ಆಶಯಗಳೆಲ್ಲಾ ಒಂದೇ ಆಗಿದ್ದವು. ಜಾತಿ, ಧರ್ಮದ ಹೆಸರಿನಲ್ಲಿ ನಡೆಯುವ ಮನುಷ್ಯ ತಾರತಮ್ಯಗಳನ್ನು ನಿವಾರಿಸಲು ಶ್ರಮಿಸಿದರು. ವಿದ್ಯಾವಂತರಾದಷ್ಟೂ ಜಾತಿವಾದಿಗಳಾದರೆ ಆ ವಿದ್ಯೆಗೆ ಗೌರವ ಬರುತ್ತದಾ? ಸಂವಿಧಾನವನ್ನು ವಿರೋಧಿಸುವವರೂ ಈಗ ತಲೆ ಎತ್ತಿದ್ದಾರೆ. ಸಂವಿಧಾನ ವಿರೋಧಿಗಳು ನಿಜವಾದ ಮನುಷ್ಯ ವಿರೋಧಿಗಳು ಎಂದು ತಿಳಿಸಿದರು.

ಮನುಷ್ಯ ಮನುಷ್ಯರನ್ನು ಜಾತಿ, ಧರ್ಮದ ಹೆಸರಲ್ಲಿ ಮೇಲು-ಕೀಳು ಎನ್ನುವ ತಾರತಮ್ಯವನ್ನು ತ್ಯಜಿಸಿ ಮನುಷ್ಯರನ್ನು ಪ್ರೀತಿಸುವುದೇ ಕನಕದಾಸರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.

ಇಲಾಖೆ ಪ್ರಕಟಣೆಗಳಿಗೆ ಶೇ.50 ರಿಯಾಯ್ತಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ಅಕಾಡೆಮಿಗಳು ಮತ್ತು ಪ್ರಾಧಿಕಾರಿಗಳು ಪ್ರಕಟಿಸುವ ಪುಸ್ತಕಗಳನ್ನು ವಿಶೇಷ ಸಂದರ್ಭಗಳಲ್ಲಿ ಶೇ.50 ರಷ್ಟು ರಿಯಾಯ್ತಿ ದರದಲ್ಲಿ ಮಾರಾಟ ಮಾಡುವಂತೆ ಇದೇ ಸಂದರ್ಭದಲ್ಲಿ ಘೋಷಿಸಿದರು.

ಇದನ್ನೂ ಓದಿ: ಇಂದು ದಾಸಶ್ರೇಷ್ಠ ಕನಕದಾಸ ಜಯಂತಿ: ಹರಿದಾಸನ ಇತಿಹಾಸ, ಕೃತಿಗಳ ಮಾಹಿತಿ ತಿಳಿಯಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.