ETV Bharat / state

ರಾಜ್ಯ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ಕೋರ್ಸ್​ ಪ್ರವೇಶ ಶುಲ್ಕ 10% ಹೆಚ್ಚಿಸಿ ಸರ್ಕಾರ ಆದೇಶ

ರಾಜ್ಯದಲ್ಲಿನ KPCF, KRLMPCA & AMPCK ಸಂಘಗಳಡಿಯಲ್ಲಿ ಬರುವ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳ ಸೀಟುಗಳಿಗೆ ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ.

Vidhan Soudha
ವಿಧಾನ ಸೌಧ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ (ಎಂಡಿ/ಎಂಎಸ್) ಕೋರ್ಸ್​ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

2024-25ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ (KRLMPCA) ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ರಾಜ್ಯದ ಡೀಮ್ಡ್​ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್(ಎಂ.ಡಿ/ಎಂ.ಎಸ್):

ಕ್ಲಿನಿಕಲ್: ಹಳೆ ಶುಲ್ಕ 1,00,000 ರೂ., ಹೊಸ ಶುಲ್ಕ 1,10,000 ರೂ.

ಪ್ಯಾರಾ ಕ್ಲಿನಿಕಲ್: ಹಳೆ ಶುಲ್ಕ 50,000 ರೂ., ಹೊಸ ಶುಲ್ಕ 55,000 ರೂ.

ಪ್ರೀ ಕ್ಲಿನಿಕಲ್: ಹಳೆ ಶುಲ್ಕ 25,000 ರೂ., ಹೊಸ ಶುಲ್ಕ 27,500 ರೂ.

ರಾಜ್ಯದಲ್ಲಿನ KPCF, KRLMPCA & AMPCK ಸಂಘಗಳಡಿಯಲ್ಲಿ ಬರುವ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳ ಸೀಟುಗಳಿಗೆ 2024- 25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ನಿಗದಿಪಡಿಸಲಾದ ಶುಲ್ಕದ ವಿವರ ಕೆಳಗಿನಂತಿರಲಿದೆ.

ಖಾಸಗಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ:

ಕ್ಲಿನಿಕಲ್: ಹಳೆ ಶುಲ್ಕ 12,48,176 ರೂ., ಹೊಸ ಶುಲ್ಕ 13,72,994 ರೂ.

ಪ್ಯಾರಾ ಕ್ಲಿನಿಕಲ್: ಹಳೆ ಶುಲ್ಕ 3,12,048 ರೂ., ಹೊಸ ಶುಲ್ಕ 3,43,253 ರೂ.

ಪ್ರೀ ಕ್ಲಿನಿಕಲ್: ಹಳೆ ಶುಲ್ಕ 1,56,971 ರೂ., ಹೊಸ ಶುಲ್ಕ 1,72,668 ರೂ.

ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ:

ಕ್ಲಿನಿಕಲ್: ಹಳೆ ಶುಲ್ಕ 6,98,280 ರೂ., ಹೊಸ ಶುಲ್ಕ 7,68,108 ರೂ.

ಪ್ಯಾರಾ ಕ್ಲಿನಿಕಲ್: ಹಳೆ ಶುಲ್ಕ 1,74,570 ರೂ., ಹೊಸ ಶುಲ್ಕ 1,92,027 ರೂ.

ಪ್ರೀ ಕ್ಲಿನಿಕಲ್: ಹಳೆ ಶುಲ್ಕ 87,286 ರೂ., ಹೊಸ ಶುಲ್ಕ 96,015 ರೂ.

ರಾಜ್ಯದಲ್ಲಿನ ಡೀಮ್ಡ್​ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸ್ನಾತಕೋತ್ತರ ಕೋರ್ಸ್​(ಎಂ.ಡಿ/ಎಂ.ಎಸ್)ಗಳ ಸೀಟುಗಳಿಗೆ 2024-25ನೇ ಸಾಲಿಗೆ ಪ್ರವೇಶ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿ ನಿಗದಿಪಡಿಸಲಾದ ಶುಲ್ಕದ ವಿವರ ಹೀಗಿರಲಿದೆ:

ಕ್ಲಿನಿಕಲ್: ಹಳೆ ಶುಲ್ಕ 6,98,280ರೂ., ಹೊಸ ಶುಲ್ಕ 7,68,108 ರೂ.

ಇದನ್ನೂ ಓದಿ: ಕಾಲೇಜುಗಳ ಶುಲ್ಕ ಹೆಚ್ಚಳ ಖಂಡಿಸಿ ಮಂಗಳೂರು ವಿವಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.