ETV Bharat / state

ಪದೇ ಪದೇ ಒಂದೇ ಸ್ಥಳದಲ್ಲಿ ಅಪರಾಧ ಕೃತ್ಯ ನಡೆಯದಂತೆ ನಿಯಂತ್ರಿಸಲು ಡಿಜಿಪಿ ಅಲೋಕ್ ಮೋಹನ್ ಹೊಸ ತಂತ್ರ - ಎಫ್ಐಆರ್

ಡಿಜಿಪಿ ಅಲೋಕ್ ಮೋಹನ್​ ಅಪರಾಧ ನಿಯಂತ್ರಿಸಲು ಪೊಲೀಸರು ಎಫ್ಐಆರ್​ಲ್ಲಿ ಅಪರಾಧ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರವಾಗಿ ನಮೂದಿಸುವುದು ಕಡ್ಡಾಯವಾಗಿದೆ ಎಂದು ಸೂಚನೆ ನೀಡಿದ್ದಾರೆ.

ಡಿಜಿಪಿ ಅಲೋಕ್ ಮೋಹನ್
ಡಿಜಿಪಿ ಅಲೋಕ್ ಮೋಹನ್
author img

By ETV Bharat Karnataka Team

Published : Sep 23, 2023, 4:18 PM IST

ಬೆಂಗಳೂರು: ಹೆಚ್ಚು ಅಪರಾಧ ನಡೆಯುವ ಸ್ಥಳಗಳ ಮಾಹಿತಿ ಸಂಗ್ರಹಿಸಲು ಹಾಗೂ ಮುಂಜಾಗ್ರತ ಕ್ರಮವಾಗಿ ಅಪರಾಧ ನಿಯಂತ್ರಿಸಲು ಪೊಲೀಸರು ದಾಖಲಿಸುವ ಪ್ರಥಮ ವರ್ತಮಾನ ವರದಿಯಲ್ಲಿ (ಎಫ್ಐಆರ್) ಅಪರಾಧ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರವಾಗಿ ನಮೂದಿಸುವುದು ಕಡ್ಡಾಯವಾಗಿದೆ.

ಎಫ್ಐಆರ್​ನಲ್ಲಿ ಕೃತ್ಯ ನಡೆದ ಸ್ಥಳ ಅಂದರೆ ನಿಖರವಾಗಿ ರೇಖಾಂಶ ಹಾಗೂ ಅಕ್ಷಾಂಶ ಎಂಬ ಭರ್ತಿಯಲ್ಲಿ ಕಡ್ಡಾಯವಾಗಿ ತುಂಬಬೇಕಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಿಂದ ಐಟಿ ತಂತ್ರಾಂಶ ಜಾರಿಯಾಗಿದೆ. ಕೃತ್ಯ ನಡೆದ ಸ್ವರೂಪ, ಯಾವಾಗ ನಡೆಯಿತು? ಹೇಗೆ ನಡೆಯಿತು ಸೇರಿದಂತೆ ಪ್ರಾಥಮಿಕ ಮಾಹಿತಿಗಳು ಎಫ್ಐಆರ್​ನಲ್ಲಿ ದಾಖಲಾಗಿರುತ್ತದೆ. ಎಫ್ಐಆರ್​ನಲ್ಲಿ ವರದಿಯಾದ ಪ್ರಕರಣಗಳ ಕೃತ್ಯ ನಡೆದ ಅಕ್ಷಾಂಶ ಹಾಗೂ ರೇಖಾಂಶಗಳನ್ನು ಭರ್ತಿ ಮಾಡಲು ಸ್ಥಳಾವಕಾಶ ನೀಡಲಾಗಿದೆ.

ಆದರೆ ಬಹುತೇಕ ಠಾಣೆಗಳ ಪೊಲೀಸರು ವಿವರಗಳನ್ನು ನಮೂದಿಸುತ್ತಿಲ್ಲ. ಕೃತ್ಯ ನಡೆದ ಸ್ಥಳದ ವಿವರ ದಾಖಲಿಸದ ಹಿನ್ನೆಲೆ ಅಪರಾಧ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಡ್ಡಾಯವಾಗಿ ನಮೂದಿಸುವಂತೆ ಅಲೋಕ್ ಮೋಹನ್​ ಅವರು ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಲು ಆಯಾ ಘಟಕದ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಅಪರಾಧ ನಡೆದ ಕೃತ್ಯದ ಸ್ಥಳ ನಮೂದಿಸುವುದರಿಂದ ಕ್ರೈಂ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಯಾವ ಭಾಗದಲ್ಲಿ ಕಳ್ಳತನವಾಗುತ್ತವೆ. ಎಲ್ಲೆಲ್ಲಿ ಕೊಲೆ ನಡೆಯುತ್ತದೆ. ಪದೇ ಪದೇ ಎಲ್ಲಿ ಅಪರಾಧಗಳು ಸಂಭವಿಸಲಿವೆ ಎಂಬುದರ ಮನಗಂಡು ಸೂಕ್ತ ಕ್ರಮಕೈಗೊಳ್ಳಲು ಅನುಕೂಲವಾಗುತ್ತದೆ.

ಮೊಬೈಲ್​ ಪತ್ತೆಗೆ ಹೊಸ ತಂತ್ರಜ್ಞಾನ(KYM): ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಮೊಬೈಲ್​ ಕಳ್ಳತನ ಹೆಚ್ಚಾಗಿದ್ದರಿಂದ ಪೊಲೀಸರು ಮೊಬೈಲ್​ ಪತ್ತೆಗೆ ಸಹಾಯವಾಗಲು ಹೊಸ ತಂತ್ರಜ್ಞಾನ(KYM)ವನ್ನು ಬಳಸಿಕೊಳ್ಳಲು ಶುರುಮಾಡಿದ್ದರು. ಇದೇ ತಂತ್ರಜ್ಞಾನದಿಂದ ಮೊಬೈಲ್ ಕಳೆದುಕೊಂಡ 112 ಮೊಬೈಲ್​ಗಳನ್ನು ವಾರಸುದಾರರಿಗೆ ಕೊಡಲಾಗಿತ್ತು. ಈ ಕಾರ್ಯಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಳ್ಳತನವಾದ ಮೊಬೈಲ್​ನ್ನು ನೂರಕ್ಕೆ ನೂರರಷ್ಟು ಪತ್ತೆ ಮಾಡಲು ಆಗುವುದಿಲ್ಲ. ಆದರೇ ವಿಶಿಷ್ಟ ತಂತ್ರಜ್ಞಾನ ಬಳಸಿ ಪ್ರಯತ್ನ ಮಾಡಲಾಗುತ್ತಿದ್ದು, ನಮಗೆ ಮಾಹಿತಿ ಬಂದ ತಕ್ಷಣ ಹುಡುಕಿಕೊಡುವ ಪ್ರಾಮಾಣಿಕ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಲ್ಲದೇ ಪ್ರತಿ ತಿಂಗಳು ಮೊಬೈಲ್ ವಾಪಸ್ ಕೊಡುವ ಕಾರ್ಯ ನಿರಂತರವಾಗಿರಲಿದೆ ಎಂದು ತಿಳಿಸಿದ್ದರು.

ಮೊಬೈಲ್​ ಕಳ್ಳತನ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಸ್​ನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಜರುಗಿವೆ. ಕಳೆದ ಎರಡು ವರ್ಷಗಳಿಂದ ಕಳ್ಳತನವಾದ ಮೊಬೈಲ್ ‌ಹುಡುಕುವ ಕೆಲಸ ಮಾಡಲಾಗುತ್ತಿದ್ದು, ಈವರೆಗೆ 5 ಸಾವಿರಕ್ಕೂ ಅಧಿಕ ಕೇಸ್​ಗಳು ದಾಖಲಾಗಿವೆ. ಕೆಲವು ಪ್ರಕರಣದಲ್ಲಿ ಕಳ್ಳರನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಹೆಚ್ಚು ಕಳೆದುಕೊಂಡಿರುವ ಮೊಬೈಲ್​ಗಳು ಇರುತ್ತವೆ. ಆದರೇ ಏನಾದರೂ ಕಳ್ಳತನ ಪ್ರಕರಣ ಇದ್ದರೆ ಅಂತರವನ್ನು ‌ಬಂಧಿಸುವ ಕೆಲಸ ಮಾಡಲಾಗುವುದು ಎಂದಿದ್ದರು.

ಇದನ್ನೂ ಓದಿ: ಮಾದಕ ವಸ್ತು ಮಾರಾಟ: ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.