ETV Bharat / state

Drink and Drive: ಬೆಂಗಳೂರಲ್ಲಿ ಪೊಲೀಸರ ಮುಂದೆಯೇ ದಂಪತಿ ರಂಪಾಟ

author img

By

Published : Jul 8, 2021, 10:57 AM IST

ವ್ಯಕ್ತಿಯೊಬ್ಬ ಮದ್ಯ ಸೇವಿಸಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಮುಂದೆಯೇ ಇರಾನ್ ದಂಪತಿ ಜಗಳವಾಡಿಕೊಂಡಿರುವ ವಿಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ದಂಪತಿ ಕಿತ್ತಾಟ
ದಂಪತಿ ಕಿತ್ತಾಟ

ಬೆಂಗಳೂರು: ಮದ್ಯದ ಅಮಲಿನಲ್ಲಿದ್ದ ದಂಪತಿ ನಗರದಲ್ಲಿ ರಂಪಾಟ ನಡೆಸಿದ್ದಾರೆ. ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದ ಈ ದಂಪತಿಗೆ ಪೊಲೀಸರು ಪ್ರಶ್ನಿಸಿದ್ದಕ್ಕೆ, ನಡು ರಸ್ತೆಯಲ್ಲೇ ದಂಪತಿ ಜಗಳವಾಡಿಕೊಂಡಿರುವ ಘಟನೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗ್ತಿರುವ ವಿಡಿಯೋವೊಂದು ವೈರಲ್​ ಆಗಿದೆ.

ಪೊಲೀಸರ ಮುಂದೆಯೇ ದಂಪತಿ ಕಿತ್ತಾಟ

ಬುಧವಾರ ರಾತ್ರಿ ಕ್ವೀನ್ಸ್ ರಸ್ತೆಯ ಕಬ್ಬನ್ ಪಾರ್ಕ್​ ಮೆಟ್ರೋ ಸ್ಟೇಷನ್ ಬಳಿ ಸಂಚಾರಿ ಠಾಣಾ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದು. ಈ ಸಂದರ್ಭದಲ್ಲಿ ಅಜಾಗರೂಕತೆಯಿಂದ ಬರುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದ್ದಾರೆ. ವಾಹನದಲ್ಲಿ ಇಬ್ಬರು ಯುವಕರು, ಮೂವರು ಮಹಿಳೆಯರಿದ್ದರು. ಅದರಲ್ಲಿ ದಂಪತಿ ಮದ್ಯ ಸೇವಿಸಿದ್ದು, ವ್ಯಕ್ತಿ ಕಾರು ಚಲಾಯಿಸುತ್ತಿದ್ದ. ಪಾನಮತ್ತ ವ್ಯಕ್ತಿಯೇ ಕಾರು ಚಲಾಯಿಸುತ್ತಿದ್ದುದರಿಂದ ಪೊಲೀಸರು ಕಾರನ್ನು ಸೀಝ್ ಮಾಡಿದ್ದು, ದಂಡ ವಿಧಿಸಿದ್ದಾರೆ.

ಈ ಸಮಯದಲ್ಲಿ ಇರಾನ್​​ ಮೂಲದ ವ್ಯಕ್ತಿ, ಕಾರು ಮರಳಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಆಗ ಆತನ ಪತ್ನಿ ಪೊಲೀಸರ ಬಳಿ ಹೋಗದಂತೆ ಪತಿಯನ್ನು ತಡೆದು ಜಗಳವಾಡಿದ್ದಾಳೆ. ಇದನ್ನು ಕಂಡು ಹೈರಾಣಾದ ಪೊಲೀಸರು, ನ್ಯಾಯಾಲಯಕ್ಕೆ ಬಂದು ಕಾರನ್ನು ಪಡೆಯಿರಿ ಎಂದು ಸೂಚಿಸಿದ್ದಾರೆ. ಈ ದಂಪತಿ ಜಗಳ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗ್ತಿದೆ.

ಇದನ್ನೂ ಓದಿ:ಪೊಲೀಸರಿಗೆ ಬೆದರಿಕೆ: AIMIM ಮುಖಂಡ ಮಜೀದ್​ ವಿರುದ್ಧ ಕೇಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.