ETV Bharat / state

ಬೆಂಗಳೂರು: ಮಗಳ ನಿಂದಿಸಿದ ಸ್ನೇಹಿತನ ಹತ್ಯೆ, ಆರೋಪಿ ಬಂಧನ - ಬೆಂಗಳೂರು ಕ್ರೈಂ

ತನ್ನ ಮಗಳನ್ನು ನಿಂದಿಸಿದನೆಂದು ಕೋಪಗೊಂಡ ವ್ಯಕ್ತಿ ತನ್ನ ಸ್ನೇಹಿತನನ್ನು ಕೊಲೆಗೈದ ಘಟನೆ ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದಿದೆ.

Bengaluru murder
ಬೆಂಗಳೂರು ಕೊಲೆ
author img

By ETV Bharat Karnataka Team

Published : Sep 21, 2023, 6:59 AM IST

Updated : Sep 21, 2023, 8:17 AM IST

ಬೆಂಗಳೂರು: ತನ್ನ ಮಗಳನ್ನು ನಿಂದಿಸಿದ್ದಕ್ಕಾಗಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಹತ್ಯೆಗೈದ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ನೇಪಾಳ ಮೂಲದ ಪ್ರೇಮ್ ರಾಜ್ ಉಪಾಧ್ಯಾಯ (57) ಕೊಲೆಯಾದವ. ಧರ್ಮೇಂದ್ರ ಸಿಂಗ್ ಹತ್ಯೆಗೈದ ಆರೋಪಿ. ಇಬ್ಬರು ನೇಪಾಳ ಮೂಲದವರಾಗಿದ್ದು, ಬೆಂಗಳೂರಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು.

ಪ್ರೇಮ್ ರಾಜ್ ಎಸ್​​ಬಿಆರ್ ಕಂಪೆನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ‌ ಮಾಡುತ್ತಿದ್ದರು. ಅಲ್ಲಿಂ‌ದ‌ ಕೆಲಸ ತೊರೆದು ಹೊಟೇಲ್​​​ವೊಂದರಲ್ಲಿ‌ ಕೆಲಸಕ್ಕೆ ಸೇರಿದ್ದರು. ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಧಮೇಂದ್ರನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಬುಧವಾರ ಇಬ್ಬರೂ ಬಾರ್​​ಗೆ ಹೋಗಿ ಮದ್ಯ ಸೇವಿಸಿದ್ದಾರೆ. ಬಳಿಕ ಮನೆಗೆ ಬಂದಿದ್ದು, ಧರ್ಮೇಂದ್ರ ಸಿಂಗ್ ಮಗಳನ್ನು ಪ್ರೇಮ್ ರಾಜ್ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಧರ್ಮೇಂದ್ರ ಸಿಂಗ್ ನಶೆಯಲ್ಲಿ ಕೊಲೆ ಮಾಡಿದ್ದಾನೆ.

ಕೊಲೆ ಬಳಿಕ ಸ್ನೇಹಿತನಿಗೆ ಕರೆ ಮಾಡಿ ತಾನು ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಶವ ಸ್ಥಳಾಂತರಿಸಬೇಕಿದೆ. ಇದಕ್ಕೆ 10 ಸಾವಿರ ರೂಪಾಯಿ ನೀಡುವುದಾಗಿ ಧರ್ಮೇಂದ್ರ ಸಿಂಗ್ ಹೇಳಿದ್ದ. ಬಳಿಕ ಪೊಲೀಸರಿಗ ಕರೆ ಮಾಡಿ ಹತ್ಯೆ ಬಗ್ಗೆ ಮಾಹಿತಿ ನೀಡಿದ್ದಾನೆ‌. ಸ್ಥಳಕ್ಕೆ ಬಂದ ಕಾಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು‌ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಲಿವಿಂಗ್​ ರಿಲೇಶನ್​ಶಿಪ್​ನಲ್ಲಿದ್ದ ಮಹಿಳೆ ಕೊಲೆ.. ಆರೋಪಿ ಬಂಧನ

ಬೆಂಗಳೂರಲ್ಲಿ ಇತ್ತೀಚೆಗೆ ನಡೆದಿತ್ತು ಜೋಡಿ ಕೊಲೆ: ಬೆಂಗಳೂರಲ್ಲಿ ಇತ್ತೀಚೆಗೆ ವ್ಯಕ್ತಿಯೋರ್ವ ತನ್ನ ಹಂಡ್ತಿ ಮತ್ತು ಮಗನನ್ನು ಕೊಲೆಗೈದಿದ್ದ ಘಟನೆ ಬಗಲಗುಂಟೆ ಠಾಣೆಯ ವ್ಯಾಪ್ತಿಯಲ್ಲಿ ನಡೆದಿತ್ತು. ವನೀತಾ (35) ಹಾಗೂ ಪುತ್ರ ಸಾಯಿ ಸೃಜನ್ (8) ಕೊಲೆಯಾದವರು. ಚಂದ್ರು ಕೊಲೆಗೈದವರು. ಈತ ಪತ್ನಿಗೆ ಚಾಕುವಿನಲ್ಲಿ ಇರಿದು, ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ವನೀತಾ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದು, ಕಳೆದ 2 ವರ್ಷಗಳಿಂದ ಪತಿಯನ್ನು ಪುತ್ರನ ಜೊತೆ ಬೇರೆ ಮನೆಯಲ್ಲಿ ವಾಸವಾಗಿದ್ದಳು. ಇದೇ ಕೋಪದಿಂದ ಪತಿ ಚಂದ್ರು, ಪತ್ನಿಯ ಮನೆಗೆ ರಾತ್ರಿ ನುಗ್ಗಿ ಹತ್ಯೆಗೈದಿದ್ದ. ಬಳಿಕ ರಾತ್ರಿ 12ರ ಸುಮಾರಿಗೆ ವನೀತಾ ತಾಯಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

ಮುಂಡಗೋಡ ಬಳಿ ಟಿಬೆಟಿಯನ್​ ವ್ಯಕ್ತಿ ಕೊಲೆ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್​​ನಲ್ಲಿ ಇತ್ತೀಚೆಗೆ ಟಿಬೆಟಿಯನ್​ವೊಬ್ಬರ ಕೊಲೆ ನಡೆದಿತ್ತು. ಕ್ಯಾಂಪಿನಲ್ಲಿದ್ದ ಇಬ್ಬರು ಟಿಬೆಟಿಯನ್​​ರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇಬ್ಬರ ಮಧ್ಯೆ ಪರಸ್ಪರ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಮೃತನನ್ನು ಜಮ್ಯಾಂಗ್ ಲಾಕ್ಪಾ (43) ಎಂದು ಗುರುತಿಸಲಾಗಿದೆ. ಗೊಂಪಾ ಚೋಡೇಕ್ ಗಂಭೀರ ಗಾಯಗೊಂಡವರು.

Last Updated : Sep 21, 2023, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.