ETV Bharat / state

ಮುಸುಕುಧಾರಿ ವೇಷದಲ್ಲಿ ಬಂದ ಪುಂಡರ ಗುಂಪು.. ಬೆಂಗಳೂರಲ್ಲಿ ಯುವಕನ ಮೇಲೆ ಹಲ್ಲೆ - ಬೈಕ್​ಗಳಲ್ಲಿ ಬಂದ ಮಾಸ್ಕ್ ಹೆಲ್ಮೆಟ್​ಧಾರಿಗಳು

ವಾಲ್ಕೀಕಿ ನಗರ ನಿವಾಸಿಯಾಗಿರುವ ಅವಿನಾಶ್ ನಿನ್ನೆ ತಡರಾತ್ರಿ ಸ್ನೇಹಿತರೊಂದಿಗೆ ಕಲಾಸಿಪಾಳ್ಯಕ್ಕೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬೈಕ್​ಗಳಲ್ಲಿ ಬಂದ ಮಾಸ್ಕ್ ಮತ್ತು ಹೆಲ್ಮೆಟ್​ಧಾರಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ.

Bengaluru
ಬೆಂಗಳೂರು
author img

By

Published : Sep 22, 2022, 7:37 PM IST

ಬೆಂಗಳೂರು: ನಿನ್ನೆ ಮಧ್ಯರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆಂದು ಹೋಗುತ್ತಿದ್ದ ಯುವಕನನ್ನು ಗುರಿಯಾಗಿಸಿ ಪುಂಡರ ಗುಂಪೊಂದು ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ. ಅವಿನಾಶ್ ಎಂಬುವರು ಹಲ್ಲೆಗೊಳಗಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಲಕ್ಷ್ಮಣ್ ನಿಂಬರಗಿ

ವಾಲ್ಕೀಕಿ ನಗರ ನಿವಾಸಿಯಾಗಿರುವ ಅವಿನಾಶ್ ನಿನ್ನೆ ತಡರಾತ್ರಿ ಸ್ನೇಹಿತರೊಂದಿಗೆ ಕಲಾಸಿಪಾಳ್ಯಕ್ಕೆ ಊಟಕ್ಕೆ ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬೈಕ್​ಗಳಲ್ಲಿ ಬಂದ ಮಾಸ್ಕ್ ಮತ್ತು ಹೆಲ್ಮೆಟ್​ಧಾರಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ. ಗಾಬರಿಯಿಂದ ಅವಿನಾಶ್ ಸ್ನೇಹಿತರು ಕಾಲ್ಕಿತ್ತಿದ್ದಾರೆ. ಆದರೆ ಅವಿನಾಶ್ ಆರೋಪಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

Avinash
ಹಲ್ಲೆಗೊಳಗಾದ ಯುವಕ ಅವಿನಾಶ್​

ಕೂಡಲೇ ಬಾಟಲಿಯಿಂದ ಮುಖ ಹಾಗೂ ಕೈಗಳ‌ ಮೇಲೆ ಚುಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಆಸ್ತಿ ವಿಚಾರಕ್ಕಾಗಿ ಹಲ್ಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಚುರುಕುಗೊಳಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಿನ್ನಕ್ಕಾಗಿ ಮಹಿಳೆ ಕೊಲೆ, ಗೆಳೆಯನ ಸಿಲುಕಿಸುವ ಯತ್ನ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.