ETV Bharat / state

ರಸ್ತೆ ಅಪಘಾತ: ಬೆಂಗಳೂರಿನಲ್ಲಿ ಕಳೆದ ವರ್ಷ 909 ಸಾವು, ₹184 ಕೋಟಿ ದಂಡ ವಸೂಲಿ - ರಸ್ತೆ ಅಪಘಾತ

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

road accidents  people died  ರಸ್ತೆ ಅಪಘಾತ  ಮಾರಣಾಂತಿಕ ಅಪಘಾತ ಪ್ರಕರಣ
184 ಕೋಟಿ ದಂಡ ವಸೂಲಿ
author img

By ETV Bharat Karnataka Team

Published : Jan 2, 2024, 8:11 AM IST

Updated : Jan 2, 2024, 8:26 AM IST

ಬೆಂಗಳೂರು: ಕಳೆದ ವರ್ಷ ಸಂಭವಿಸಿದ ಅಪಘಾತ ಪ್ರಕರಣಗಳ ಅಂಕಿಅಂಶವನ್ನು ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ನಿಯಮ ಉಲ್ಲಂಘನೆ ನಿಯಂತ್ರಿಸಲು ಪೊಲೀಸರು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡರೂ 880 ಮಾರಣಾಂತಿಕ ಅಪಘಾತ ಪ್ರಕರಣಗಳು ನಡೆದಿದ್ದು, ಈ ಪೈಕಿ 909 ಮಂದಿ ಸಾವನ್ನಪ್ಪಿದ್ದಾರೆ.

ಮಾರಣಾಂತಿಕವಲ್ಲದ 4095 ಅಪಘಾತ ಪ್ರಕರಣಗಳಲ್ಲಿ 4,201 ಮಂದಿ ಗಾಯಗೊಂಡಿದ್ದಾರೆ. ಸಂರ್ಪಕ ರಹಿತವಾಗಿ 87,25,321 ಲಕ್ಷ ಪ್ರಕರಣ ದಾಖಲಿಸಿದರೆ, ಸಂಪರ್ಕಸಹಿತ ನಿಯಮದಡಿ 2,49,624 ಪ್ರಕರಣಗಳು ದಾಖಲಾಗಿವೆ. ಒಟ್ಟು 184.83 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧ 7,055 ಡ್ರಿಂಕ್ ಡ್ರೈವ್ ಪ್ರಕರಣ ದಾಖಲಿಸಲಾಗಿದೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಅಪಘಾತ ಎಸಗಿದವರ ವಿರುದ್ಧ 16 ಪ್ರಕರಣಗಳು ದಾಖಲಾಗಿವೆ. ತುರ್ತು ಸಂದರ್ಭದಲ್ಲಿ ರೋಗಿಗಳ ಸ್ಥಳಾಂತರಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದ್ದು, 22 ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.

ಡಿಸೆಂಬರ್​ 31ರಿಂದ ಜನವರಿ 1ರ ಮಧ್ಯರಾತ್ರಿಯವರೆಗೆ ನಗರದಾದ್ಯಂತ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು, ಒಟ್ಟು 7,620ಕ್ಕೂ ಹೆಚ್ಚು ವಾಹನಗಳ ತಪಾಸಣೆ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 330 ವಾಹನ ಸವಾರರ ವಿರುದ್ದ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜನವರಿ 1 ರಾತ್ರಿ 12 ಗಂಟೆಯವರೆಗೆ 1 ಮಾರಣಾಂತಿಕ ಅಪಘಾತ ಹಾಗೂ 10 ಮಾರಣಾಂತಿಕವಲ್ಲದ ಅಪಘಾತಗಳು ಪ್ರಕರಣ ದಾಖಲಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಸಂಚಾರ ಪೊಲೀಸರು ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುತ್ತಿದ್ದಾರೆ. ರಸ್ತೆಯಲ್ಲಿ ನಿಂತು ವಾಹನಗಳನ್ನ ಅಡ್ಡಗಟ್ಟಿ ಪ್ರಕರಣ ದಾಖಲಿಸುವ ಬದಲು ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್​ಮೆಂಟ್​ಗೆ ಒತ್ತು ನೀಡಿದ್ದರಿಂದ ಆಯಕಟ್ಟಿನ ಜಂಕ್ಷನ್, ತಿರುವುಗಳಲ್ಲಿ ಅತ್ಯಾಧುನಿಕ ಕ್ಯಾಮರಾಗಳ ಮೂಲಕ ಡಿಜಿಟಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ‌.‌ ‌ದಿನಕ್ಕೆ ಬೆಂಗಳೂರಿನಲ್ಲಿ 10 ರಿಂದ 12 ಸಾವಿರ ಟ್ರಾಫಿಕ್ ವೈಯಲೇಷನ್ ಕೇಸ್​ಗಳನ್ನ ದಾಖಲಿಸಲಾಗುತ್ತಿದೆ. ಈ ಮಧ್ಯೆ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿ, ವೇಗವಾಗಿ ವಾಹನ ಚಲಾಯಿಸಿ ಹೆಚ್ಚು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ.

ಸ್ವಯಂ ಅಪಘಾತಗಳು ಹೆಚ್ಚು: "ವೇಗವಾಗಿ ವಾಹನ ಚಲಾಯಿಸುವ ಭರದಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿ ನಿಯಂತ್ರಣ ಕಳೆದುಕೊಂಡು ಎದುರು ಬರುವ ವಾಹನಗಳಿಗೆ ಅಥವಾ ಪಾದಚಾರಿಗಳ ಮೇಲೆ ಅಪಘಾತ ಮಾಡುತ್ತಿರುವುದು ಹೆಚ್ಚಾಗಿ ಕಂಡುಬಂದಿದೆ. ಹೆಲ್ಮೆಟ್ ರಹಿತ,‌ ಮದ್ಯಸೇವನೆ ಹಾಗೂ ನಿರ್ಲಕ್ಷ್ಯದಿಂದ ಚಾಲಕರು ಅಪಘಾತವೆಸಗುತ್ತಿದ್ದಾರೆ. ಸಂಚಾರ ದಟ್ಟಣೆ ಅವಧಿಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಆದ್ಯತೆ ಜೊತೆಗೆ ಡಿಜಿಟಲ್ ಮೂಲಕ ಕೇಸ್​ಗಳ ದಾಖಲಿಸುವ ಪ್ರಮಾಣ ಹೆಚ್ಚಾದಂತೆ, ವಾಹನ ಸವಾರರು ಪೊಲೀಸರು ತಮ್ಮನ್ನ‌ ಪ್ರಶ್ನಿಸುತ್ತಿಲ್ಲ‌ ಎಂಬ ಮನೋಭಾವ ಹಾಗೂ ಸಂಚಾರ ನಿಯಮ ಪಾಲನೆ ಬಗ್ಗೆ ಅಗೌರವ ಹೆಚ್ಚಾಗಿದೆ" ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಈ ಹಿಂದೆ 'ಈಟಿವಿ ಭಾರತ್'​ಗೆ ತಿಳಿಸಿದ್ದರು.

ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ಮೊತ್ತದ ಪರಿಹಾರ ವಿತರಿಸಿದ ಕೆಎಸ್​ಆರ್​ಟಿಸಿ

Last Updated : Jan 2, 2024, 8:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.