ಬೆಂಗಳೂರು: ಪೊಲೀಸರಿಗೆ ಮುಂಬಡ್ತಿ ಭಾಗ್ಯ ಮುಂದುವರೆಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಈ ಬಾರಿ 90 ಪೇದೆಗಳಿಗೆ ಮುಖ್ಯ ಪೇದೆಗಳನ್ನಾಗಿ ಮುಂಬಡ್ತಿ ನೀಡಿದ್ದಾರೆ.
ಗಣೇಶ ಹಬ್ಬದ ದಿನದಂದು ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು. ಈ ಬಾರಿಯೂ ಅರ್ಹ 90 ಕಾನ್ಸ್ಟೇಬಲ್ಗಳು ಹೆಡ್ ಕಾನ್ಸ್ಟೇಬಲ್ಗಳಾಗಿ ಮುಂಬಡ್ತಿ ಪಡೆದಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದ್ದು, ನಮೂದಿಸಿರುವ ಸ್ಥಳಗಳಿಗೆ ತೆರಳಿ ರಿಪೋರ್ಟ್ ಮಾಡಿಕೊಂಡು ಪಾಲನಾ ವರದಿಯನ್ನು ಆಯಾ ವಿಭಾಗದ ಡಿಸಿಪಿಗಳಿಗೆ ನಿಡಬೇಕೆಂದು ಆದೇಶಿಸಲಾಗಿದೆ.
ಒಂದು ವೇಳೆ ಕಾನ್ಸ್ಟೇಬಲ್ಗಳ ಮೇಲೆ ಅಮಾನತು, ಪ್ರಕರಣ ದಾಖಲು ಸೇರಿದಂತೆ ಮತ್ತಿತರ ವ್ಯಾಜ್ಯಗಳು ಇದ್ದರೆ ಯಾವುದೇ ಕ್ಷಣದಲ್ಲಾದರೂ ಮುಂಬಡ್ತಿ ಆದೇಶ ತಡೆ ಹಿಡಿಯಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.