ಬೆಂಗಳೂರು: ರಾಜ್ಯದಲ್ಲಿಂದು 67,583 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 628 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,399,15ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಪಾಸಿಟಿವ್ ದರ ಶೇ. 0.92 ಹಾಗೂ ಡೆತ್ ರೇಟ್ ಶೇ. 2.38ರಷ್ಟಿದೆ. 1,349 ಸೋಂಕಿತರು ಗುಣಮುಖರಾಗಿದ್ದು, ಈ ತನಕ 38,92,459 ಮಂದಿ ಚೇತರಿಕೆ ಕಂಡಿದ್ದಾರೆ.
-
ಇಂದಿನ 25/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/ZoJEqgam7q @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/m2sMJfdCW1
— K'taka Health Dept (@DHFWKA) February 25, 2022 " class="align-text-top noRightClick twitterSection" data="
">ಇಂದಿನ 25/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/ZoJEqgam7q @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/m2sMJfdCW1
— K'taka Health Dept (@DHFWKA) February 25, 2022ಇಂದಿನ 25/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/ZoJEqgam7q @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/m2sMJfdCW1
— K'taka Health Dept (@DHFWKA) February 25, 2022
ಸದ್ಯ 7,518 ಸಕ್ರಿಯ ಪ್ರಕರಣಗಳು ಇವೆ. ಸೋಂಕಿನಿಂದ 15 ಮಂದಿ ಮೃತಪಟ್ಟಿದ್ದು, ಒಟ್ಟೂ ಸಾವಿನ ಸಂಖ್ಯೆ 39,900 ಏರಿದೆ. ವಿಮಾನ ನಿಲ್ದಾಣದಿಂದ ಇಂದು 1,528 ಪ್ರಯಾಣಿಕರು ಆಗಮಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ನಾಳೆ ಕರ್ಪ್ಯೂ ಸಡಿಲಿಕೆ: ಶಾಲಾ - ಕಾಲೇಜು ರಜೆ ವಿಸ್ತರಣೆ
ಬೆಂಗಳೂರಿನಲ್ಲಿ 346 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟೂ ಪ್ರಕರಣಗಳ ಸಂಖ್ಯೆ 17,77,782ಕ್ಕೆ ಏರಿದೆ. 769 ಮಂದಿ ಚೇತರಿಸಿಕೊಂಡಿದ್ದು, ಈ ತನಕ 17,56,935 ಗುಣಮುಖರಾಗಿದ್ದಾರೆ. ಇಂದು 12 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,883ಕ್ಕೆ ತಲುಪಿದೆ. ಸದ್ಯ 3,973 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನ್ ಏಜ್ - 4,431
- ಇತರೆ - 286
- ಒಮಿಕ್ರಾನ್ - 1,115
- BAI.1.529 - 807
- BA1 - 89
- BA2 - 219
- ಒಟ್ಟು - 5,996
ರಾಜ್ಯದಲ್ಲಿ ಸೋಂಕು ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹಂತ-ಹಂತವಾಗಿ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗ ಲಕ್ಷಣಗಳಿಲ್ಲದ ರೋಗಿಗಳಿಗೆ ಈ ಹಿಂದೆ ಶಸ್ತ್ರಚಿಕಿತ್ಸೆ, ಸ್ಕ್ಯಾನಿಂಗ್ ಮತ್ತು ಇತರ ವೈದ್ಯಕೀಯ ಪ್ರಕ್ರಿಯೆಗೂ ಮೊದಲು ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ, ಇದೀಗ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆದಾಗ್ಯೂ ರೋಗ ಲಕ್ಷಣಗಳು ಇರುವ ರೋಗಿಗಳಿಗೆ ಈ ಹಿಂದಿನಂತೆ ಸೂಚಿಸಿರುವ ನಿಯಮಗಳೇ ಮುಂದುವರೆಯಲಿದೆ.