ಬೆಂಗಳೂರು: ರಾಜ್ಯದಲ್ಲಿಂದು 622 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,55,015ಕ್ಕೆ ಏರಿಕೆ ಆಗಿದೆ. 3 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,362ಕ್ಕೆ ಏರಿಕೆಯಾಗಿದೆ. 351 ಮಂದಿ ಗುಣಮುಖರಾಗಿದ್ದು 9,35,772 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳು 6862 ಇದ್ದು, 115 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡವಾರು 0.81 ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ 0.48 ರಷ್ಟು ಇದೆ.
ಓದಿ:ಭಾರತದ ಕೊರೊನಾ ಲಸಿಕೆ ಹಾಕಿಸಿಕೊಂಡ ಕೆ.ಪಿ. ಶರ್ಮಾ ಓಲಿ
ಇಂದು ಯುಕೆಯಿಂದ 272 ಪ್ರಯಾಣಿಕರು ಆಗಮಿಸಿದ್ದು, ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ 64 ಜನಕ್ಕೆ ಪಾಸಿಟಿವ್ ಕಂಡುಬಂದಿದೆ. ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.