ETV Bharat / state

ನಮೂನೆ 1-5, 6-10 ಸರಳೀಕರಣಗೊಳಿಸಿ ಜಮೀನು ದುರಸ್ತಿಗೊಳಿಸುವ ಅಭಿಯಾನ ಆರಂಭ - CAMPAIGN ON LAND REGISTRATION

ರಾಜ್ಯದಲ್ಲಿ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ, ಜಮೀನನ್ನು ದುರಸ್ತಿಗೊಳಿಸಲು ಸುತ್ತೋಲೆ ಹೊರಡಿಸಿ ತಕ್ಷಣದಿಂದ ಅಭಿಯಾನ ಆರಂಭಿಸಲಾಗುತ್ತಿದೆ.

land registration
ಕೃಷಿಯಲ್ಲಿ ತೊಡಗಿರುವ ಮಹಿಳೆಯರು (IANS)
author img

By ETV Bharat Karnataka Team

Published : Nov 27, 2024, 7:47 PM IST

ಬೆಂಗಳೂರು: ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದೆ. ಆದರೆ, ನಾನಾ ಕಾರಣಗಳಿಂದ ಜಮೀನು ದುರಸ್ತಿಯಾಗದೆ, ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಅದರ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ.

ದುರಸ್ತಿ ಪೋಡಿ ಮಾಡಲು 1-5 ಮತ್ತು 6-10 ಎಂದು ನಿರ್ವಹಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಹೀಗಾಗಿ, ದಶಕಗಳಿಂದಲೂ ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ, ಜಮೀನನ್ನು ದುರಸ್ತಿ ಮಾಡಿಕೊಡಬೇಕು ಎಂಬ ಕೂಗು ರೈತರೂ ಸೇರಿದಂತೆ ಇತರೆ ಸಂಘ ಸಂಸ್ಥೆಗಳಿಂದ ಇತ್ತು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ, ರೈತರ ಜಮೀನನ್ನು ದುರಸ್ತಿ ಮಾಡಿಕೊಡಬೇಕು ಎಂಬ ವಿಚಾರದಲ್ಲಿ ಕಟಿಬದ್ಧವಾಗಿತ್ತು. ಅಲ್ಲದೆ, ರೈತರಿಗೆ ಮಂಜೂರಾಗಿದ್ದು, ತಕರಾರಿಲ್ಲದ ಜಮೀನಿನ ನಮೂನೆ 1-5 ದಾಖಲೆಯನ್ನು ಸಿದ್ಧಪಡಿಸುವ ಹಾಗೂ ತಿದ್ದುಪಡಿಗಳನ್ನು ಸರಳೀಕರಣಗೊಳಿಸುವ ದರಖಾಸ್ತು ಪೋಡಿ ಅಭಿಯಾನಕ್ಕೆ ಚಾಲನೆ ನೀಡುವ ಸಂಬಂಧ 2024-25ನೇ ಸಾಲಿನ ಬಜೆಟ್​​​ನಲ್ಲಿ ಭರವಸೆ ನೀಡಲಾಗಿತ್ತು.

''ಈ ನಿಟ್ಟಿನಲ್ಲಿ ಕಳೆದ ವರ್ಷದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸುವ ಮೂಲಕ ಈ ಸಮಸ್ಯೆಗೆ ಇದೀಗ ಪರಿಹಾರ ನೀಡಲಾಗುತ್ತಿದೆ. ನಮೂನೆ 1-5 ಹಾಗೂ 6-10 ಅನ್ನು ಸರಳೀಕರಣಗೊಳಿಸಿ, ಜಮೀನನ್ನು ದುರಸ್ತಿಗೊಳಿಸಲು ಸುತ್ತೋಲೆ ಹೊರಡಿಸಿ, ತಕ್ಷಣದಿಂದ ದುರಸ್ತಿ ಅಭಿಯಾನವನ್ನು ಆರಂಭಿಸಲಾಗುತ್ತಿದೆ'' ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸುತ್ತೋಲೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ: ದರಕಾಸ್ತು ಪೋಡಿ (ನಮೂನೆ 1-5 ಮತ್ತು 6-10) ಬದಲಾವಣೆ ಬಗ್ಗೆ ಸಂಕ್ಷಿಪ್ತ ಮಾಹಿತಿ.

  • ಮೊದಲು ಒಂದು ಸರ್ವೆ ನಂಬರಿನ ಮಂಜೂರಾತಿದಾರರ ಪೋಡಿಯನ್ನು ಹಂತಹಂತವಾಗಿ ನಿರ್ವಹಿಸಲಾಗುತ್ತಿತ್ತು. ಆದುದರಿಂದ 1-5 ಕಡತವನ್ನು ಅನೇಕ ಬಾರಿ ತಯಾರಿಸಲಾಗುತ್ತಿತ್ತು. ಈಗ ಒಂದು ಸರ್ವೆ ನಂಬರಿನ ಎಲ್ಲ ಮಂಜೂರಾತಿಯ 1-5 ಮತ್ತು ಪೋಡಿ ಕೆಲಸವನ್ನು ಏಕಕಾಲದಲ್ಲಿ ನಿರ್ವಹಿಸಲಾಗುವುದು.
  • ಈ ಮೊದಲು ಈ ಪ್ರಕ್ರಿಯೆ ಭೌತಿಕವಾಗಿ ನಡೆಯುತ್ತಿತ್ತು. ಒಂದೇ ಸರ್ವೆ ನಂಬರಿಗೆ ಹಲವು ಸಲ ಕಡತವನ್ನು ತಯಾರಿಸಲಾಗುತ್ತಿತ್ತು. ಈಗ ಸಂಪೂರ್ಣ ಪ್ರಕ್ರಿಯೆಯನ್ನು ತಂತ್ರಾಂಶದಲ್ಲಿ ನಿರ್ವಹಿಸಲು ಕ್ರಮವಹಿಸಲಾಗಿದೆ. ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಳವಡಿಸಲಾಗುತ್ತಿದೆ. ಈಗ ಒಂದು ಸರ್ವೆ ನಂಬರಿಗೆ ಒಮ್ಮೆ ದಾಖಲೆಗಳನ್ನು ಅಳವಡಿಸಿದ ನಂತರ ಅವು ಖಾಯಂ ಆಗಿ ಲಭ್ಯವಾಗುತ್ತವೆ. ಈ ದಾಖಲೆಗಳನ್ನು ಯಾರೂ ನಕಲು ಮಾಡಲು/ತಿದ್ದಲು ಸಾಧ್ಯವಿಲ್ಲ.
  • ಮೊದಲು ಯಾವುದೇ ಒಂದು ದಾಖಲಾತಿ ಲಭ್ಯವಿಲ್ಲದೇ ಹೋದರೂ ಆ ಕಡತವನ್ನು ಗೈರುವಿಲೇ ಕಮೀಟಿಗೆ ಮಂಡಿಸಲಾಗುತ್ತಿತ್ತು. ಈಗ ಕನಿಷ್ಠ 3 ದಾಖಲಾತಿಗಳು ಲಭ್ಯವಿದ್ದರೆ, ತಹಶೀಲ್ದಾರರು ನೈಜತೆಯನ್ನು ಪರಿಶೀಲಿಸಿ ಪೋಡಿ ಕ್ರಮವಹಿಸಲು ಆದೇಶಿಸಬಹುದಾಗಿದೆ.
  • ಮೊದಲು ನಮೂನೆ 1-5ನ್ನು ತಹಶೀಲ್ದಾರರು ತಯಾರಿಸಿದ ನಂತರ ಉಪವಿಭಾಗಾಧಿಕಾರಿಗಳು ಹಾಗೂ ಭೂ ದಾಖಲೆಗಳ ಉಪನಿರ್ದೇಶಕರು ಪರಿಶೀಲಿಸಿ ಅನುಮೋದಿಸುತ್ತಿದ್ದರು. ಈ ಹಂತವನ್ನು ಈಗ ಕೈಬಿಡಲಾಗಿದ್ದು, ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದ್ದು, ಮಂಜೂರಾತಿಯ ನೈಜತೆಯನ್ನು ಖಚಿತಪಡಿಸಿಕೊಂಡ ನಂತರ ನೇರವಾಗಿ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪೋಡಿ ಕ್ರಮವಹಿಸಲು ಸೂಚಿಸಬಹುದು.
  • ಕೆಲವು ಪ್ರಕರಣಗಳಲ್ಲಿ ನಮೂನೆ 6 ರಿಂದ 10 ತುಂಬುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.
  • ಮಂಜೂರಾತಿ ನಕ್ಷೆಯಲ್ಲಿ ಗುರುತಿಸಿರುವ ರೂಢಿ ದಾರಿಯನ್ನು ದುರಸ್ತಿ ದಾಖಲೆಯಲ್ಲಿ ಪ್ರತ್ಯೇಕ ದಾರಿ ಎಂದೇ ಗುರುತಿಸಿ ಖಾಯಂಗೊಳಿಸಬೇಕು ಹಾಗೂ ಆ ಜಾಗವನ್ನು ಯಾರ ವಿಸ್ತೀರ್ಣದಲ್ಲೂ ಸೇರಿಸಬಾರದು ಎಂದು ತಿಳಿಸಲಾಗಿದೆ.
  • ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರರು ನಮೂನೆ 1ರಿಂದ 5ರ ಮಾಹಿತಿಯನ್ನು ಭರ್ತಿ ಮಾಡಿ ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಈ ಮೂಲಕ ಅಕ್ರಮಗಳಿಗೆ ಶಾಶ್ವತ ಪರಿಹಾರ ನೀಡಲಾಗಿದೆ.
  • ಇನ್ನು ಮುಂದೆ ದರಖಾಸ್ತು ಪೋಡಿ ಪ್ರಕರಣಗಳನ್ನು ಸಂಪೂರ್ಣವಾಗಿ ಆನ್​​ಲೈನ್​ ವ್ಯವಸ್ಥೆಯಲ್ಲಿ ಮೋಜಿಣಿ ತಂತ್ರಾಶದಲ್ಲಿ ನಿರ್ವಹಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಪ್ರಸ್ತುತ ಚಾಲ್ತಿಯಲ್ಲಿರುವ ಏಕ ವ್ಯಕ್ತಿ ಪ್ರಕರಣದಲ್ಲಿನ ಪೋಡಿ ಆದೇಶವು 6 ತಿಂಗಳ ಅವಧಿಯವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ರೈತರಿಗೆ ಆಗುವ ಲಾಭಗಳು:

  • ತಂತ್ರಾಂಶ ಬಳಕೆಯಿಂದ ಸಂಪೂರ್ಣ ಪಾರದರ್ಶಕವಾಗಿ ದುರಸ್ತಿ ಪ್ರಕ್ರಿಯೆ ನಡೆಯುವುದು. ಎಲ್ಲ ಹಂತದಲ್ಲಿ ಕಾಲಮಿತಿಯನ್ನು ವಿಧಿಸಿರುವುದರಿಂದ ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
  • ಗ್ರಾಮ ಆಡಳಿತಾಧಿಕಾರಿಗಳಿಂದ ಭೂ ದಾಖಲೆಗಳ ಉಪನಿರ್ದೇಶಕರವರೆಗೆ ಸಂಪೂರ್ಣ ಪ್ರಕ್ರಿಯೆ ಕಾಗದ ರಹಿತ ನಿರ್ವಹಣೆಯಿಂದ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಕಡತ ರವಾನಿಸಲು ಯಾವುದೇ ಸಮಯ ವ್ಯರ್ಥವಾಗುವುದಿಲ್ಲ. ಇದರಿಂದ ರೈತರು ಕಡತದ ಹಿಂದೆ ಅಲೆದಾಡುವುದು ಸಹ ತಪ್ಪುತ್ತದೆ.
  • 1-5 ಹಾಗೂ 6-10ಗೆ ಸಂಬಂಧಿಸಿದಂತೆ Dashboard ಲಭ್ಯವಿರುವುದರಿಂದ ಪ್ರಗತಿಯನ್ನು ರಾಜ್ಯಮಟ್ಟದಲ್ಲಿ ಪರಿಶೀಲಿಸಬಹುದು. ಇದರಿಂದ ದುರಸ್ತಿಯನ್ನು ನಿಗದಿತ ಅವಧಿಯಲ್ಲಿ ಪೂರೈಸಬಹುದಾಗಿದೆ. ಜನಸಾಮಾನ್ಯರೂ ಸಹ ಈ ಮಾಹಿತಿಯನ್ನು ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ.
  • ಮುಂದಿನ ದಿನಗಳನ್ನು ಅಳತೆಯ ಕಾರ್ಯವನ್ನು Rovers ಮೂಲಕ ಡಿಜಿಟಲ್ ಸರ್ವೆ ಮಾಡಲು ಉದ್ದೇಶಿಸಿದ್ದು, ಇದರಿಂದ ಹೆಚ್ಚಿನ ನಿಖರತೆಯೊಂದಿಗೆ ಅಳತೆಗೆ ತಗಲುವ ಸಮಯವು ಸಹ ಗಮನಾರ್ಹವಾಗಿ ಕಡಿತವಾಗಲಿದೆ.

ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿ: ಕೇಂದ್ರ ಸಚಿವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.