ETV Bharat / bharat

'ಬ್ಯಾಲೆಟ್​ ಪೇಪರ್​​ ಮರು ಜಾರಿಯಾಗುವವರೆಗೂ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ':ಕೈ ನಾಯಕನ ಅಚ್ಚರಿ ಹೇಳಿಕೆ

ಇವಿಎಂ ರದ್ದು ಮಾಡಿ ಬ್ಯಾಲೆಟ್​ ಪೇಪರ್​ ಮರು ಜಾರಿ ಮಾಡಬೇಕು ಎಂದು ಕಾಂಗ್ರೆಸ್​ ಒತ್ತಾಯಿಸುತ್ತಿರುವ ನಡುವೆ, ಛತ್ತೀಸ್​ಗಢದ ಮಾಜಿ ಸಚಿವರ ಹೇಳಿಕೆ ಅಚ್ಚರಿ ಮೂಡಿಸಿದೆ.

ಛತ್ತೀಸ್‌ಗಢದ ಮಾಜಿ ಸಚಿವ ಕವಾಸಿ ಲಖ್ಮಾ
ಛತ್ತೀಸ್‌ಗಢದ ಮಾಜಿ ಸಚಿವ ಕವಾಸಿ ಲಖ್ಮಾ (ETV Bharat)
author img

By PTI

Published : Nov 27, 2024, 7:44 PM IST

ಜಗದಲ್‌ಪುರ (ಛತ್ತೀಸ್​ಗಢ) : ಎಲೆಕ್ಟ್ರಾನಿಕ್​ ಮತಯಂತ್ರ (ಇವಿಎಂ) ಬದಲಿಗೆ ಮೊದಲಿದ್ದ ಬ್ಯಾಲೆಟ್​ ಪೇಪರ್​ ಮರು ಜಾರಿಗೆ ಆಂದೋಲನ ರೂಪಿಸಲು ಕಾಂಗ್ರೆಸ್​ ಚಿಂತಿಸಿರುವ ನಡುವೆ, ಪಕ್ಷದ ನಾಯಕರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬ್ಯಾಲೆಟ್ ಪೇಪರ್ ಪದ್ಧತಿಯನ್ನು ಮತ್ತೆ ಜಾರಿ ಮಾಡುವವರೆಗೆ ಕಾಂಗ್ರೆಸ್ ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಸಚಿವ ಕವಾಸಿ ಲಖ್ಮಾ ಬುಧವಾರ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಅನ್ನು ಮರು ಬಳಕೆಗೆ ತರಲು ಒತ್ತಾಯಿಸುವ ಕುರಿತು I.N.D.I.A ಮಿತ್ರಪಕ್ಷಗಳೊಂದಿಗೆ ಸಭೆ ನಡೆಸಲಿದ್ದಾರೆ. ಮತಯಂತ್ರಗಳನ್ನು ಬದಲಿಸುವವರೆಗೆ ಪಕ್ಷವು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ.

ಬ್ಯಾಲೆಟ್​​ ಪೇಪರ್​ಗಾಗಿ ಆಂದೋಲನ: ಇವಿಎಂಗಳನ್ನು ರದ್ದು ಮಾಡುವ ಕುರಿತು ದೇಶದಲ್ಲಿ ಆಂದೋಲನ ಆರಂಭಿಸಲಾಗುವುದು. ಎಐಸಿಸಿ ಅಧ್ಯಕ್ಷರು ಬ್ಯಾಲೆಟ್​ ಪೇಪರ್​ ಮರು ಜಾರಿ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಎಲ್ಲ ಮೈತ್ರಿ ಪಕ್ಷಗಳೊಂದಿಗೆ ಕಾಂಗ್ರೆಸ್ ಮಾತುಕತೆ ನಡೆಸಲಿದೆ. ಶೀಘ್ರವೇ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇವಿಎಂ ಟೀಕಿಸಿದ ಖರ್ಗೆ: ಇದಕ್ಕೂ ಮೊದಲು ಮಂಗಳವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಇವಿಎಂ ಕಾರ್ಯವೈಖರಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದರು. ಏನೇ ಆದರೂ ಸರಿ, ದೇಶದಲ್ಲಿ ಮತ್ತೆ ಬ್ಯಾಲೆಟ್​ ಪೇಪರ್​ ಮರು ಜಾರಿ ಆಗಬೇಕು. ಆಗ ಬಿಜೆಪಿಯ ನಿಜ ಬಣ್ಣ ಬಯಲಾಗಲಿದೆ. ಇದಕ್ಕಾಗಿ ದೇಶದಲ್ಲಿ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದರು.

ಮಹಾರಾಷ್ಟ್ರ ಮತ್ತು ಛತ್ತೀಸ್​ಗಢ ವಿಧಾನಸಭೆ ಚುನಾವಣೆಗಳ ಫಲಿತಾಂಶ ನೋಡದರೆ, ಇವಿಎಂ ಹ್ಯಾಕ್​ ಮಾಡಿರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯಬೇಕು ಮತ್ತು ಬ್ಯಾಲೆಟ್​ ಪೇಪರ್​ ಮರು ಜಾರಿಯಿಂದ ಮಾತ್ರ ಪಾರದರ್ಶನ ಚುನಾವಣೆ ನಡೆಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸುಪ್ರೀಂನಲ್ಲಿ ಅರ್ಜಿ ತಿರಸ್ಕೃತ: ಇನ್ನೊಂದೆಡೆ, ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್​ ಪೇಪರ್ ಮತದಾನಕ್ಕೆ ಅವಕಾಶ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಚುನಾವಣೆಯಲ್ಲಿ ಸೋತಾಗ ಮಾತ್ರ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಟ್ಯಾಂಪರಿಂಗ್ ಆರೋಪಗಳು ಬರುತ್ತವೆ. ಗೆದ್ದಾಗ ಈ ಬಗ್ಗೆ ಮಾತೇ ಆಡುವುದಿಲ್ಲ ಎಂದು ಅರ್ಜಿದಾರರ ವಿರುದ್ಧ ಕಿಡಿಕಾರಿತ್ತು.

ಇದನ್ನೂ ಓದಿ: ಸೌರಶಕ್ತಿ ಕೇಸಲ್ಲಿ ಲಂಚ ಯಾರಿಗೆ, ಯಾರು ನೀಡಿದ್ರು ಎಂಬುದೇ ಅಮೆರಿಕ ಹೇಳಿಲ್ಲ: ಮುಕುಲ್​ ರೋಹಟಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.