ETV Bharat / lifestyle

ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಅತಿಯಾಗಿದೆಯೇ?: ಹೀಗೆ ಮಾಡಿ ಸೊಳ್ಳೆಗಳನ್ನು ನೈಸರ್ಗಿಕವಾಗಿ ಓಡಿಸಿ! - HOME REMEDIES GET RID OF MOSQUITOES

ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಮಿತಿಮಿರಿದೆಯೇ? ಸೊಳ್ಳೆಗಳನ್ನು ಓಡಿಸಲು ರಾಸಾಯನಿಕಗಳನ್ನು ಬಳಕೆ ಮಾಡಿದರೆ ಅನಾರೋಗ್ಯದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ನೈಸರ್ಗಿಕವಾಗಿ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.

PREVENT MOSQUITO BITES NATURALLY  GET RID OF MOSQUITOES  KEEP MOSQUITO AWAY IN Kannada  WAYS TO KEEP MOSQUITO AWAY
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Nov 27, 2024, 7:29 PM IST

Home Remedies Get Rid Of Mosquitoes: ಸೊಳ್ಳೆಗಳು ಪ್ರತಿಯೊಂದು ಸೀಸನ್​ನಲ್ಲಿ ವಿಪರೀತವಾಗಿರುತ್ತವೆ. ಅವುಗಳನ್ನು ಓಡಿಸಲು ಅನೇಕ ಜನರು ವಿವಿಧ ಸೊಳ್ಳೆ ನಿವಾರಕಗಳು ಮತ್ತು ಕಾಯಿಲ್‌​ ಬಳಕೆ ಮಾಡುತ್ತಾರೆ. ಇದರಿಂದ ಸೊಳ್ಳೆಗಳನ್ನು ಮನೆಯಿಂದ ಓಡಿ ಹೋಗುತ್ತವೆ. ಇದರ ಜೊತೆಗೆ ಸೋಳ್ಳೆ ಓಡಿಸಲು ಬಳಕೆ ಮಾಡಿದ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಇದರೊಂದಿಗೆ ನೈಸರ್ಗಿಕವಾಗಿ ಸೊಳ್ಳೆಗಳ ಕಾಟ ತಪ್ಪಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕರ್ಪೂರ, ಬೇವಿನ ಎಣ್ಣೆ, ಬಿರಿಯಾನಿ ಎಲೆಗಳು: ಒಂದು ಚಿಕ್ಕ ಬಟ್ಟಲಿನಲ್ಲಿ ಒಂದು ಚಮಚ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಐದರಿಂದ ಆರು ಕರ್ಪೂರದ ಪೀಸ್​ಗಳನ್ನು ಸೇರಿಸಿ ಮತ್ತು ಕರಗಿಸಿ. ನಂತರ ಈ ಮಿಶ್ರಣವನ್ನು ಬಿರಿಯಾನಿ ಎಲೆಗಳಿಗೆ ಹಚ್ಚಬೇಕು, ಬಳಿಕ ಈ ಎಲೆಗಳನ್ನು ಸುಡುವುದರಿಂದ ಬರುವ ಹೊಗೆಯು ಸೊಳ್ಳೆಗಳನ್ನು ಮನೆಯಿಂದ ಹೊರಗೆ ಓಡುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಬೇವಿನ ಎಣ್ಣೆ, ಕರ್ಪೂರದಿಂದ ದೀಪ: ಸ್ವಲ್ಪ ಬೇವಿನ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರ ಪೀಸ್​ಗಳನ್ನು ಹಚ್ಚಬೇಕು. ಇದನ್ನು ಒಲೆಯ ಮೇಲೆ ಹಾಕಿ ಕರಗಿಸಿ. ಆ ಎಣ್ಣೆಯನ್ನು ಪಣತಿಗೆ ಹಾಕಿ ಸುರಿಯಿರಿ, ಬತ್ತಿಯನ್ನು ಹಾಕಿ ದೀಪವನ್ನು ಬೆಳಗಿಸಿ. ಬತ್ತಿಯನ್ನು ಹೊತ್ತಿಸುವುದರಿಂದ ಈ ಹೊಗೆ ತಾಳಲಾರದೇ ಅಲ್ಲಿಂದ ಸೊಳ್ಳೆಗಳು ಓಡಿ ಹೋಗುತ್ತವೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಕರ್ಪೂರ, ಬೇವಿನ ಸೊಪ್ಪಿನ ಹೊಗೆ: ನಿತ್ಯ ಸೊಳ್ಳೆ ಕಾಯಿಲ್‌ಗಳನ್ನು ಹಚ್ಚುವ ಬದಲು, ಕಿಟಕಿ ಬಾಗಿಲು ಮುಚ್ಚಿ 15 ನಿಮಿಷಗಳ ಕಾಲ ಕರ್ಪೂರ ಮತ್ತು ಬೇವಿನ ಸೊಪ್ಪನ್ನು ಸುಡಬೇಕಾಗುತ್ತದೆ. ಬೇರೆ ದಾರಿ ತೋಚದೇ ಸೊಳ್ಳೆಗಳು ಮನೆಯಿಂದ ಹೊರಗೆ ಹೋಗುತ್ತವೆ.

ನಿಂಬೆ ಹಾಗೂ ಲವಂಗ: ನಿಂಬೆ ಮತ್ತು ಲವಂಗವನ್ನು ಉಪಯೋಗಿಸುವುದರಿಂದ ಸೊಳ್ಳೆಗಳ ಕಾಟವನ್ನು ನಿವಾರಿಸಬಹುದು. ನಿಂಬೆಯನ್ನು ಎರಡು ತುಂಡುಗಳಾಗಿ ಅಡ್ಡಲಾಗಿ ಕತ್ತರಿಸಬೇಕಾಗುತ್ತದೆ. ಕತ್ತರಿಸಿದ ನಿಂಬೆ ಹಣ್ಣಿನ ಹೋಳುಗಳಿಗೆ ಲವಂಗ ಅಂಟಿಸಿ ಹಾಸಿಗೆಯ ಹತ್ತಿರ ಅಥವಾ ಮಲಗುವ ಸ್ಥಳದಲ್ಲಿ ಇಟ್ಟರೆ ಸಾಕು ಸೊಳ್ಳೆಗಳು ಇತ್ತ ಸುಳಿಯುವುದೇ ಇಲ್ಲ.

ಅಜವಾನದ ಎಲೆ: ಸೊಳ್ಳೆಗಳನ್ನು ಓಡಿಸಲು ಅಜವಾನದ ಎಲೆಗಳನ್ನು ಭಾರಿ ಉಪಯೋಗಕ್ಕೆ ಬರುತ್ತದೆ. ಈ ಎಲೆಗಳಿಗೆ ಸೊಳ್ಳೆಗಳನ್ನೂ ಹಿಮ್ಮೆಟ್ಟಿಸುವ ಶಕ್ತಿಯಿದೆ. ಇದಕ್ಕಾಗಿ ಅಜವಾನದ ಎಲೆಗಳನ್ನು ಪಿಂಗಾಣಿ ಪಾತ್ರೆಯಲ್ಲಿ ಇಡಬೇಕು. ಬಳಿಕ ಈ ಎಲೆಗಳನ್ನು ಸುಡುವ ಮೂಲಕ ಸೊಳ್ಳೆಗಳನ್ನು ಓಡಿಸಬಹುದು. ಮನೆಯೊಳಗೆ ಸೊಳ್ಳೆಗಳು ಬರುವ ಜಾಗದಲ್ಲಿ ಈ ಪಿಂಗಾಣಿ ಪಾತ್ರೆ ಇಟ್ಟರೆ ಸಾಕು.

ನೀರಿನ ಜೊತೆಗೆ ಅಜವಾನದ ಎಲೆ: ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು, ನಂತರ ಒಲೆಯ ಮೇಲೆ ಹಾಕಿ ಕುದಿಸಿ. ಬಳಿಕ ಕುದಿಯುವ ನೀರಿಗೆ ಕೆಲವು ಅಜವಾನದ ಎಲೆಗಳನ್ನು ಹಾಕಿ. ಐದು ನಿಮಿಷಗಳ ನಂತರ, ನೀರನ್ನು ತಣ್ಣಗಾಗಿಸಿ ಹಾಗೂ ಬಾಟಲಿಗೆ ಸುರಿಯಿರಿ. ಹೊರಗೆ ಹೋಗುವಾಗ ಮಿಶ್ರಣವನ್ನು ಕೈ, ಕಾಲುಗಳ ಮೇಲೆ ಸಿಂಪಡಿಸಿಕೊಳ್ಳಬೇಕು. ಹೀಗೆ ಮಾಡಿದರೆ ಹೊರಗಡೆಯೂ ಸೊಳ್ಳೆ ಕಾಟದಿಂದ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ತಜ್ಞರು.

ಈ ಸಲಹೆಗಳೊಂದಿಗೆ, ಮನೆಯ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿಬೇಕು. ಸಂಜೆ ವೇಳೆ ಸೊಳ್ಳೆಗಳು ಬರುವ ಸಾಧ್ಯತೆ ಹೆಚ್ಚಿದೆ. ಕಿಟಕಿಗಳು ಹಾಗೂ ಬಾಗಿಲುಗಳನ್ನು ಸಾಧ್ಯವಾದಷ್ಟು ಮುಚ್ಚಿದರೆ ಒಳ್ಳೆಯದು.

ಇದನ್ನೂ ಓದಿ: ಸೊಳ್ಳೆ ಬತ್ತಿ, ರಾಸಾಯನಿಕಗಳ ಬದಲು ನೈಸರ್ಗಿಕವಾಗಿ ಮನೆಯಿಂದ ಸೊಳ್ಳೆಗಳನ್ನು ಓಡಿಸೋದು ಹೇಗೆ? - Mosquitoes Avoiding Tips

ETV Bharat Logo

Copyright © 2025 Ushodaya Enterprises Pvt. Ltd., All Rights Reserved.