ಬೆಂಗಳೂರು : ರಾಜ್ಯದಲ್ಲಿಂದು 1,05,645 ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 559 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,62,967ಕ್ಕೆ ಏರಿಕೆಯಾಗಿದೆ.
ನಿನ್ನೆಗೆ ಹೋಲಿಸಿದರೆ ಇಂದು ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ನಿನ್ನೆ 673 ಮಂದಿಗೆ ಕೋವಿಡ್ ದೃಡಪಟ್ಟಿತ್ತು. ಅಲ್ಲದೆ 13 ಸೋಂಕಿತರ ಮೃತಪಟ್ಟಿದ್ದರು. ಪಾಸಿಟಿವಿಟಿ ದರ ಶೇ.0.52ರಷ್ಟಿದೆ. ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗುತ್ತಿದೆ. ಇಂದು ಗುಣಮುಖರ ಸಂಖ್ಯೆ ಹೆಚ್ಚಿದ್ದು, ಒಟ್ಟು 1,034 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ.
ಈವರೆಗೆ 29,09,656 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 15,754 ರಷ್ಟಿವೆ. ಇಂದು 12 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,529ಕ್ಕೆ ತಲುಪಿದೆ. ಈ ಮೂಲಕ ಸಾವಿನ ಪ್ರಮಾಣ ಶೇ. 2.14 ರಷ್ಟಾಗಿದೆ.
ರೂಪಾಂತರಿ ವೈರಸ್ ಪ್ರಕರಣಗಳ ಸಂಖ್ಯೆ
- ಡೆಲ್ಟಾ ( Delta/B.617.2) - 1092
- ಅಲ್ಪಾ(Alpha/B.1.1.7) - 155
- ಕಪ್ಪಾ (Kappa/B.1.617) 160
- ಬೇಟಾ ವೈರಸ್ (BETA/B.1.351) -7
- ಡೆಲ್ಟಾ ಪ್ಲಸ್(Delta plus/B.1.617.2.1(AY.1) -4
- ಈಟಾ (ETA/B.1.525) - 1