ಬೆಂಗಳೂರು: ಗಂಗೆಯ ಅಭಿಷೇಕವಿಲ್ಲದೆ ಉತ್ತರ ಭಾರತದಲ್ಲಿ ಶಿವನ ಪೂಜೆಯೇ ನಡೆಯೋಲ್ಲ. ಈ ಹಿನ್ನೆಲೆಯಲ್ಲಿಯೇ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಅಭಿಷೇಕ ಮಾಡಲು ಗಂಗೆಯ ಪವಿತ್ರ ಜಲವನ್ನು ನಗರಕ್ಕೆ ತೆಗೆದುಕೊಂಡುಬರಲಾಗಿದೆ.
ಹರಿದ್ವಾರದಿಂದ ಬೃಹತ್ ಟ್ಯಾಂಕರ್ನಲ್ಲಿ 40 ಸಾವಿರ ಲೀಟರ್ ಗಂಗಾ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಬರಲಾಗಿದೆ. ಮಾಜಿ ಮುಜರಾಯಿ ಸಚಿವರಾದ ಕೃಷ್ಣಯ್ಯ ಶೆಟ್ಟಿ ಕಳೆದ 14 ವರ್ಷಗಳಿಂದ ಶಿವರಾತ್ರಿ ಪ್ರಯಕ್ತ ಗಂಗಾ ನದಿಯ ನೀರನ್ನ ರಾಜ್ಯದ ದೇಗುಲಗಳಿಗೆ ತಲುಪಿಸುವ ಕೆಲಸ ಮಾಡ್ತಿದ್ದಾರೆ.
ಬೆಂಗಳೂರಿನ ಬಳೇಪೇಟೆಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಗಂಗೆ ನೀರನ್ನು ಟ್ಯಾಂಕರ್ ಮೂಲಕ ತೆಗೆದುಕೊಂಡು ಬರಲಾಗಿದೆ. ರಾಜ್ಯದ ಮೂವತ್ತು ಜಿಲ್ಲೆಗಳ 3700 ಶಿವನ ದೇವಾಲಯಗಳಿಗೆ ಇಲ್ಲಿಂದ ಕ್ಯಾನ್ಗಳ ಮೂಲಕ ಗಂಗಾ ಜಲವನ್ನು ಸರಬರಾಜು ಮಾಡೋ ಕೆಲಸಕ್ಕೆ ಜ್ಯೋತಿಷಿ ಆನಂದ ಗುರೂಜಿ ಚಾಲನೆ ನೀಡಿದ್ದಾರೆ.