ETV Bharat / state

ಕೆಕೆಆರ್​ಡಿಬಿ: ₹ 363 ಕೋಟಿ ವೆಚ್ಚದ ಕ್ರಿಯಾಯೋಜನೆ ಅನುಮೋದನೆ

ಗುಲ್ಬರ್ಗಾ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ ₹ 254 ಕೋಟಿ ಹಾಗೂ ಮ್ಯಾಕ್ರೋ ಯೋಜನೆಯಡಿ ₹109 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಗುಲ್ಬಾರ್ಗ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ (ಕೆಕೆಆರ್​ಡಿಬಿ) ಅನುಮೋದನೆ ನೀಡಲಾಗಿದೆ.

ಕೆಕೆಆರ್​ಡಿಬಿ: ₹ 363 ಕೋಟಿ ವೆಚ್ಚದ ಕ್ರಿಯಾಯೋಜನೆ ಅನುಮೋದನೆ
author img

By

Published : Sep 27, 2019, 11:44 PM IST

ಬೆಂಗಳೂರು: ಗುಲ್ಬರ್ಗಾ ಜಿಲ್ಲೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ ₹ 254 ಕೋಟಿ ಹಾಗು ಮ್ಯಾಕ್ರೋ ಯೋಜನೆಯಡಿ ₹109 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಲಬುರಗಿ ಜಿಲ್ಲಾ ಸಲಹಾ ಸಮಿತಿಯು (ಕೆಕೆಆರ್​ಡಿಬಿ) ಅನುಮೋದನೆ ನೀಡಿದೆ.

ವಿಕಾಸಸೌಧದಲ್ಲಿ ಇಂದು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯು ಮೈಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ ₹100 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ ₹151 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ ₹54 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ 54 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಡಾ. ನಂಜುಂಡಪ್ಪ ವರದಿಯ ಆಧಾರದಡಿ ಈ ಪ್ರದೇಶದ ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಮಂಡಳಿ ವ್ಯಾಪ್ತಿಯಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತಿವೆ. ₹1,500 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ನಿಯಮಾನುಸಾರ ಈ ಯೋಜನೆಯಡಿ ಬೃಹತ್ ಯೋಜನೆಗಳಾಗಿದ್ದರೂ 3 ವರ್ಷಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿಳಂಬ ಮಾಡದೇ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಹೊಸ ತಾಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ಮಂಡಳಿಗೆ ತಾಂತ್ರಿಕ ಸಿಬ್ಬಂದಿ ನಿಯೋಜಿಸಿ ತಾಂತ್ರಿಕವಾಗಿ ಸದೃಢಗೊಳಿಸಲಾಗುವುದು. ಕಾಮಗಾರಿಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದು. ಈ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಗೋವಿಂದ ಎಂ. ಕಾರಜೋಳ ಅವರು ಸಭೆಯಲ್ಲಿ ತಿಳಿಸಿದರು.

Intro:ಬೆಂಗಳೂರು : ಗುಲ್ಬರ್ಗಾ ಜಿಲ್ಲೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ 254 ಕೋಟಿ ರೂ. ಹಾಗು ಮ್ಯಾಕ್ರೋ ಯೋಜನೆಯಡಿ 109 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಗುಲ್ಬಾರ್ಗ ಜಿಲ್ಲಾ ಸಲಹಾ ಸಮಿತಿಯು (ಕೆಕೆಆರ್ ಡಿಬಿ ) ಅನುಮೋದನೆ ನೀಡಲಾಯಿತು. Body:ವಿಕಾಸಸೌಧದಲ್ಲಿ ಇಂದು ಗುಲ್ಬರ್ಗಾ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯು ಮೈಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ 100 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ 151 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ 54 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ 54 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.
ಡಾ. ನಂಜುಂಡಪ್ಪ ವರದಿಯ ಆಧಾರದಡಿ ಈ ಪ್ರದೇಶದ ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಮಂಡಳಿಯ ವ್ಯಾಪ್ತಿಯಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತಿವೆ. 1500 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ನಿಯಮಾನುಸಾರ ಈ ಯೋಜನೆಯಡಿ ಬೃಹತ್ ಯೋಜನೆಗಳಾಗಿದ್ದರೂ 3 ವರ್ಷಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿಳಂಬ ಮಾಡದೇ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಹೊಸ ತಾಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ಮಂಡಳಿಗೆ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ ತಾಂತ್ರಿಕವಾಗಿ ಸದೃಡಗೊಳಿಸಲಾಗುವುದು. ಕಾಮಗಾರಿಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದು. ಈ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಗೋವಿಂದ ಎಂ. ಕಾರಜೋಳ ಅವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ಬಸವರಾಜ್ ಮತ್ತಿಮುಡ, ರಾಜಕುಮಾರ್ ಪಾಟೀಲ್ ಟೆಲ್ಕೂರ್, ಸುಭಾಷ್ ಆರ್ ಗುತ್ತೇದಾರ್, ಡಾ. ಅವಿನಾಶ್ ಜಾದವ್, ಪ್ರಿಯಾಂಕ ಖರ್ಗೆ, ಡಾ. ಅಜೇಯಸಿಂಗ್ , ಎಂ.ವೈ. ಪಾಟೀಲ್, ತಿಪ್ಪಣ್ಣ ಕಮ್ಮತನೂರ್, ಕನಿಜ್ಹ ಫಾತೀಮ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಡಿ.ಶರತ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.