ETV Bharat / state

ಅಫ್ಘಾನ್‌ನಿಂದ ಡ್ರಗ್ಸ್ ಆಮದು ಬಗ್ಗೆ ಪ್ರಧಾನಿ ಮೋದಿ ಮೌನ ಏಕೆ?: ಎಐಸಿಸಿ ವಕ್ತಾರೆ ಸುಪ್ರಿಯಾ - ಎಐಸಿಸಿ ವಕ್ತಾರೆ ಸುಪ್ರಿಯಾ

ಅಫ್ಘಾನಿಸ್ತಾನದಿಂದ ಮುಂದ್ರಾ ಅದಾನಿ ಬಂದರು ಮೂಲಕ ಸುಮಾರು 3000 ಕೆಜಿ ಡ್ರಗ್ಸ್ ಬಂದಿದ್ದು ದೇಶದ ಭದ್ರತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ. ಇದುವರೆಗೂ ನರೇಂದ್ರ ಮೋದಿ ಈ ಕುರಿತು ತುಟಿ ಬಿಚ್ಚಿಲ್ಲ ಎಂದು ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರಿನೇತ್​​ ಟೀಕಿಸಿದರು.

3000-kgs-of-drugs-found-in-gujarat-mundra-port
ಎಐಸಿಸಿ ವಕ್ತಾರೆ ಸುಪ್ರಿಯಾ
author img

By

Published : Oct 1, 2021, 4:56 PM IST

ಬೆಂಗಳೂರು: ಮುಂದ್ರಾ ಅದಾನಿ ಪೋರ್ಟ್ ಮೂಲಕ ದೇಶದೊಳಗೆ ದೊಡ್ಡ ಪ್ರಮಾಣದ ಡ್ರಗ್ಸ್ ಬಂದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚಿಲ್ಲ ಎಂದು ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರಿನೇತ್ ಆರೋಪಿಸಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮುಂದ್ರಾ ಅದಾನಿ ಬಂದರು ಮೂಲಕ ಸುಮಾರು 3000 ಕೆಜಿ ಡ್ರಗ್ಸ್ ಬಂದಿದೆ. ಇದರ ಬೆಲೆ 26 ಸಾವಿರ ಕೋಟಿ ರೂ. ಆಗುತ್ತದೆ. ಇಷ್ಟೊಂದು ಪ್ರಮಾಣದ ಡ್ರಗ್ಸ್ ದೇಶದೊಳಗೆ ಹೇಗೆ ಬಂತು?. ಅದರಲ್ಲೂ ಅಫ್ಘಾನಿಸ್ತಾನದಿಂದ ಈ ಡ್ರಗ್ಸ್ ಬಂದಿದ್ದು, ದೇಶದ ಭದ್ರತೆಯ ಬಗ್ಗೆ ಪ್ರಶ್ನೆ ಮೂಡುತ್ತದೆ ಎಂದರು.

ಕಳೆದ 17 ದಿನಗಳ ಹಿಂದೆ ಗುಜರಾತ್​ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಇದನ್ನು ತರಿಸಿದ್ದವರು ಯಾರು ಅಂತ ಗೊತ್ತಾಗಿಲ್ಲ. ಟ್ರೇಡಿಂಗ್ ಕಂಪನಿ ಮುಖಾಂತರ ಅದಾನಿ ಪೊರ್ಟ್ ಮೂಲಕ ಡ್ರಗ್ಸ್ ಬಂದಿದೆ. ಇದು ಯುವಕರಿಗೆ ಮಾರಕವಾದ ಪೌಡರ್. 14 ಕೋಟಿ‌ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಚಿತ್ರರಂಗದಲ್ಲಿಯೂ ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಸಣ್ಣ ಕಂಪನಿ ಇಷ್ಟು ಡ್ರಗ್ಸ್ ತರಿಸುತ್ತೆ ಅಂದ್ರೆ ಹೇಗೆ?. ಇದಕ್ಕೆ ಯಾರ ಕುಮ್ಮಕ್ಕಿದೆ ಎಂದು ವಾಗ್ದಾಳಿ ನಡೆಸಿದರು.

ಜೂನ್​ ತಿಂಗಳಲ್ಲಿ ಗುಜರಾತ್​ನ ಅದಾನಿ‌ ಮುಂದ್ರಾ ಬಂದರು ಮೂಲಕ ಆಶಿ ಟ್ರೇಡಿಂಗ್ ಕಂಪನಿ ಅಫ್ಘಾನಿಸ್ತಾನದಿಂದ 1,75,000 ಕೋಟಿ ಮೌಲ್ಯದ 25,000 ಕೆ.ಜಿ. ಹೆರಾಯಿನ್ ತಂದಿತ್ತು. ಅದನ್ನು ಜಪ್ತಿ ಮಾಡಿರಲಿಲ್ಲ. ಅದೀಗ ದೇಶಾದ್ಯಂತ ಮುಕ್ತವಾಗಿ ಸರಬರಾಜು ಆಗುತ್ತಿದೆ. ಈ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ ಯಾಕೆ?. ಡ್ರಗ್ಸ್ ಪ್ರಕರಣ ಸಂಬಂಧ ಅದಾನಿ ಮುಂದ್ರಾ ಪೋರ್ಟ್ ವಿರುದ್ಧ ತನಿಖೆ ಏಕೆ ನಡೆದಿಲ್ಲ?. ಈ ಬಗ್ಗೆ ಪ್ರಧಾನಿ ಹಾಗೂ ಗೃಹ ಸಚಿವರೇಕೆ ಸುಮ್ಮನಿದ್ದಾರೆ?. ಈ ಸಂಬಂಧ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.