ಬೆಂಗಳೂರು : ಇಂದು ಬೆಂಗಳೂರಿಗೆ ಎರಡು ಆಕ್ಸಿಜನ್ ರೈಲುಗಳಲ್ಲಿ ಸುಮಾರು 227.66 ಟನ್ ಆಮ್ಲಜನಕ ವೈಟ್ ಫೀಲ್ಡ್ ನಿಲ್ದಾಣಕ್ಕೆ ಬಂದಿದೆ.
26ನೇ ಆಕ್ಸಿಜನ್ ಎಕ್ಸ್‌ಪ್ರೆಸ್ 5ನೇ ತಾರೀಖಿನಂದು 12:30 AMಗೆ ಬೆಂಗಳೂರಿನ ವೈಟ್‌ಫೀಲ್ಡ್, ಒಳನಾಡಿನ ಕಂಟೈನರ್ ಡಿಪೋವನ್ನು ತಲುಪಿದೆ. ಈ ರೈಲು ಜೂನ್ 3ರಂದು ಜಾರ್ಖಂಡ್‌ನ ಟಾಟಾ ನಗರದಿಂದ ಸಂಜೆ 5:30ಕ್ಕೆ ಲೋಡ್ ಆಗಿ ಪ್ರಯಾಣ ಬೆಳೆಸಿತ್ತು. 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 120 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಿದೆ.
ಮತ್ತೊಂದು 27ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ಬೆಳಗ್ಗೆ 5 AMಗೆ ಬೆಂಗಳೂರಿನ ವೈಟ್‌ಫೀಲ್ಡ್, ಒಳನಾಡಿನ ಕಂಟೈನರ್ ಡಿಪೋವನ್ನು ತಲುಪಿದೆ. ಈ ರೈಲು ಜೂನ್ 3ರಂದು ರಾತ್ರಿ 10:50ಕ್ಕೆ ಗುಜರಾತ್‌ನ ಕನಾಲಸ್‌ನಿಂದ ಪ್ರಾರಂಭವಾಗಿತ್ತು.
ಇದು 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 107.66 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಗಿಸಿದೆ. ಈವರೆಗೆ ಕರ್ನಾಟಕವು 3,096.88 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ರೈಲು ಮೂಲಕ ಸ್ವೀಕರಿಸಿದೆ.
ಭಾರತೀಯ ರೈಲ್ವೆ ಈವರೆಗೆ 359 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ನಡೆಸಿದೆ. 1,463 ಟ್ಯಾಂಕರ್‌ಗಳಲ್ಲಿ 24,840 ಟನ್‌ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ದೇಶಾದ್ಯಂತ ಸಾಗಿಸಿದೆ ಮತ್ತು ಕೋವಿಡ್-19 ವಿರುದ್ಧದ ಹೋರಾಟದಲ್ಲಿ 15 ರಾಜ್ಯಗಳಿಗೆ ಪರಿಹಾರವನ್ನು ನೀಡಿದೆ.