ETV Bharat / state

ಕೇಂದ್ರದಿಂದ ರಾಜ್ಯಕ್ಕೆ 18 ಲಕ್ಷ ಮನೆ ಮಂಜೂರು: ಸಚಿವ ವಿ. ಸೋಮಣ್ಣ

author img

By

Published : Mar 21, 2022, 5:18 PM IST

ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಒಟ್ಟು 18 ಲಕ್ಷ ಮನೆಗಳು ಮಂಜೂರಾಗಿವೆ. ಈಗಾಗಲೇ ಎರಡು ಲಕ್ಷ ಮನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಹೆಚ್ಚುವರಿಯಾಗಿ ಮೂರು ಲಕ್ಷ ಸೇರಿದಂತೆ ಐದು ಲಕ್ಷ ಮನೆಗಳನ್ನು ತಕ್ಷಣವೇ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

minister Somanna
ಸಚಿವ ವಿ. ಸೋಮಣ್ಣ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್‍ ಯೋಜನೆಯಡಿ ರಾಜ್ಯಕ್ಕೆ 18 ಲಕ್ಷ ಮನೆಗಳು ಮಂಜೂರಾಗಿವೆ ಎಂದು ವಸತಿ ಸಚಿವ ವಿ. ಸೋಮಣ್ಣ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮಾನೆ ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಒಟ್ಟು 18 ಲಕ್ಷ ಮನೆಗಳು ಮಂಜೂರಾಗಿವೆ. ಈಗಾಗಲೇ ಎರಡು ಲಕ್ಷ ಮನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಹೆಚ್ಚುವರಿಯಾಗಿ ಮೂರು ಲಕ್ಷ ಸೇರಿದಂತೆ ಐದು ಲಕ್ಷ ಮನೆಗಳನ್ನು ತಕ್ಷಣವೇ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚಚಿ೯ಸಿ ದೆಹಲಿಗೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಿ ರಾಜ್ಯಕ್ಕೆ ಅಗತ್ಯವಿರುವ ಮನೆಗಳನ್ನು ಮಂಜೂರು ಮಾಡುವಂತೆ ಮನವಿ ಮಾಡುವುದಾಗಿ ಹೇಳಿದರು.

ಫಲಾನುಭವಿಗಳನ್ನು ಆಯ್ಕೆ ಮಾಡಲು ಆದಾಯ ಮಿತಿ ಹೆಚ್ಚಳ: ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ನಿಗದಿಪಡಿಸಿದ ಆದಾಯದ ಮಿತಿ ಹೆಚ್ಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ 32 ಸಾವಿರ ರೂ. ದಿಂದ 1.20 ಲಕ್ಷ ರೂ. ಗೆ, ನಗರ ಪ್ರದೇಶಗಳಲ್ಲಿ 87 ಸಾವಿರದಿಂದ 2 ಲಕ್ಷ ರೂ.ಗಳಿಗೆ ಹಾಗೂ ಬೆಂಗಳೂರು ನಗರದಲ್ಲಿ 3 ಲಕ್ಷ ರೂ. ಗೆ ಆದಾಯ ಮಿತಿ ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.

ಬಿಪಿಎಲ್‍ ಪಡಿತರ ಚೀಟಿ ಹೊಂದಿರುವವರು ನಿವೇಶನವಿದ್ದರೆ, ಸರ್ಕಾರ ಉಚಿತವಾಗಿ ಮನೆ ಕಟ್ಟಿಕೊಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವರು ಹೇಳಿದರು.

ಹಾವೇರಿ ಜಿಲ್ಲೆ ಹಾನಗಲ್‍ ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿಗೆ 5000 ಮನೆಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದೆವು. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಫಲಾನುಭವಿಗಳ ಆಯ್ಕೆ ವಿಳಂಬವಾಗಿದೆ. ಆದಷ್ಟು ಶೀಘ್ರ ಮನೆಗಳನ್ನು ಮಂಜೂರು ಮಾಡಿಕೊಡುವ ಭರವಸೆ ನೀಡಿದರು.

ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ 500 ಮನೆಗಳ ಗುರಿಯನ್ನು ಮಂಜೂರು ಮಾಡಲಾಗಿದೆ. ಇದಕ್ಕೆ ಸರ್ಕಾರ ಬದ್ಧವಿದೆ. ಈಗಾಗಲೇ ವಿವಿಧ ವಸತಿ ಯೋಜನೆಯಡಿ1,505 ಮನೆಗಳನ್ನು ಹಂಚಿಕೆ ಮಾಡಿದ್ದೇವೆ. ಉಳಿದ ಮನೆಗಳನ್ನು ಶೀಘ್ರ ಹಂಚಿಕೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ: ರಾಜ್ಯದಲ್ಲಿ ಹೊಸದಾಗಿ 400 ಪಶು ವೈದ್ಯಾಧಿಕಾರಿಗಳ ನೇಮಕವನ್ನು ಎಷ್ಟು ದಿನದಲ್ಲಿ ಪೂರ್ಣಗೊಳಿಸಿ ಪಶುವೈದ್ಯರಿಗೆ ನೇಮಕಾತಿ ಪತ್ರಗಳನ್ನು ಯಾವಾಗ ಕೊಡುವಿರಿ ಎಂಬ ಬಗ್ಗೆ ಒಂದು ನಿರ್ದಿಷ್ಟ ಉತ್ತರ ನೀಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರಿಗೆ ವಿಧಾನಸಭೆಯಲ್ಲಿ ಇಂದು ಸೂಚಿಸಿದರು.

ಇದನ್ನೂ ಓದಿ: ಶೀಘ್ರದಲ್ಲೇ ಹೊಸದಾಗಿ 3000 ಭೂಮಾಪಕರ ನೇಮಕ : ಸಚಿವ ಆರ್. ಅಶೋಕ್

ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಲಾಲಾಜಿ ಆರ್. ಮೆಂಡನ್ ಅವರ ಪ್ರಶ್ನೆಗೆ ಸಚಿವ ಪ್ರಭು ಚೌವ್ಹಾಣ್ ಉತ್ತರ ನೀಡಿ, 400 ಪಶು ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಪಶು ವೈದ್ಯಾಧಿಕಾರಿಗಳ ಕೊರತೆಯ ಸಮಸ್ಯೆ ಸರಿ ಹೋಗಲಿದೆ ಎಂದು ಹೇಳಿದರು. ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಸ್ಪೀಕರ್, ಸಚಿವರೇ 400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಬಗ್ಗೆ ಹೇಳಿದ್ದೀರಿ. ಇದನ್ನು ಪೂರ್ಣಗೊಳಿಸಲು ಎಷ್ಟು ತಿಂಗಳು ಬೇಕು ಹೇಳಿ ಎಂದರು.

ಆಗ ಸಚಿವ ಪ್ರಭು ಚೌವ್ಹಾಣ್ ಪ್ರತಿಕ್ರಿಯಿಸಿ, ಈ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಉತ್ತರಿಸಿದರು. ಮತ್ತೆ ಮಾತನಾಡಿದ ಸಭಾಧ್ಯಕ್ಷರು ಯಾವ ತಿಂಗಳು ಪೂರ್ಣಗೊಳ್ಳಲಿದೆ ಹೇಳಿ ಎಂದಾಗ ಸಚಿವ ಪ್ರಭು ಚೌವ್ಹಾಣ್ ಏಪ್ರಿಲ್-ಮೇ ತಿಂಗಳಲ್ಲಿ ಮುಗಿಯಬಹುದು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಮೀಸಲು ನೀಡಿಲ್ಲ: ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಪ್ರಿಯಾಂಕ್​ ಖರ್ಗೆ ಅವರು, ಸಭಾಧ್ಯಕ್ಷರೇ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಮೀಸಲು ನೀಡಿಲ್ಲ. 371 ಜೆ ಅಡಿಯಲ್ಲಿ ಮೀಸಲಾತಿ ನೀಡಿ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು. ಆಗ ಸಭಾಧ್ಯಕ್ಷರು ಯಾವಾಗ ಪ್ರಕ್ರಿಯೆ ಮುಗಿಯುತ್ತದೆ ಎಂದು ಮತ್ತೆ ಸಚಿವ ಪ್ರಭು ಚೌವ್ಹಾಣ್ ಅವರನ್ನು ಕೇಳಿದಾಗ, ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಭು ಚೌವ್ಹಾಣ್ ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಆಗುತ್ತದೆ ಎಂದಾಗ ಮೂರ್ನಾಲ್ಕು ಎಂದರೆ ಏಳು ತಿಂಗಳೆ ಎಂದು ಸಭಾಧ್ಯಕ್ಷರು ಹಾಸ್ಯ ಚಟಾಕಿ ಹಾರಿಸಿದರು. ಜುಲೈ ಹೊತ್ತಿಗೆ ಎಲ್ಲವನ್ನು ಪೂರ್ಣಗೊಳಿಸಿ ಪಶುವೈದ್ಯರ ಕೊರತೆ ಎಲ್ಲೆಡೆ ಇದೆ ಎಂದು ಸಲಹೆ ನೀಡಿದರು.

ಸಭಾಧ್ಯಕ್ಷರ ಸಲಹೆಗೆ ಸ್ಪಂದಿಸಿದ ಸಚಿವ ಪ್ರಭು ಚೌವ್ಹಾಣ್ ಅವರು, ಕಾನೂನಿನಂತೆ ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಮುಗಿಸುವ ಭರವಸೆಯನ್ನು ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.