ETV Bharat / state

ಬೆಂಗಳೂರು ಸಂಚಾರ ವಿಭಾಗಕ್ಕೆ ₹17.32 ಕೋಟಿ ಅನುದಾನ: ಶೀಘ್ರದಲ್ಲೇ 125 ಜಂಕ್ಷನ್​ ನಿರ್ಮಾಣ

ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕಾಗಿ ಅನುದಾನ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ₹17.32 ಕೋಟಿ ಅನುದಾನ ಒದಗಿಸಿದೆ.

ಬೆಂಗಳೂರು ಸಂಚಾರ ವಿಭಾಗಕ್ಕೆ ₹17.32 ಕೋಟಿ ಅನುದಾನ: ಶೀಘ್ರದಲ್ಲೇ 125 ಜಂಕ್ಷನ್​ ನಿರ್ಮಾಣ
author img

By

Published : Aug 23, 2019, 8:35 PM IST

ಬೆಂಗಳೂರು: ದಿನೇ ದಿನೆ ವಾಹನಗಳ ಸಂಖ್ಯೆ ಏರಿಕೆಯ ಪರಿಣಾಮ ನಗರದಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಿಂದಾಗಿ ಅಪಘಾತ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕಾಗಿ ಅನುದಾನ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, ₹17.32 ಕೋಟಿ ಅನುದಾನ ಒದಗಿಸಿದೆ.

2017-18ರಲ್ಲಿ ಬಿಬಿಎಂಪಿ ಟ್ರಾಫಿಕ್​ ಇಂಜಿನಿಯರಿಂಗ್​ ಸೆಲ್​ (ಟಿಇಸಿ) ವಿಭಾಗಕ್ಕೆ ಸರ್ಕಾರ ₹ 30 ಕೋಟಿ ಮೀಸಲಿಟ್ಟಿತ್ತು. ಈ ವೇಳೆ ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬಿ-ಟ್ರ್ಯಾಕ್​ ಯೋಜನೆಯಡಿ ಅನುದಾನ ನೀಡುವಂತೆ ನಗರಾಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿತ್ತು. ಹೊಸದಾಗಿ ಸಂಚಾರ ದೀಪಗಳ ಅಳವಡಿಕೆ, ಸಿಸಿಟಿವಿ ಕ್ಯಾಮರಾ ಹಾಗೂ ಅಗತ್ಯ ಕಡೆಗಳಲ್ಲಿ ರಸ್ತೆ ಉಬ್ಬು ಹಾಕುವುದು ಸೇರಿದಂತೆ ಸುಗಮ ಸಂಚಾರಕ್ಕೆ ಬೇಕಾದ ಅಂಶಗಳನ್ನು ಪ್ರಸ್ತಾವನೆ ಸೂಚಿಸಿತ್ತು.

ಇದರಂತೆ ನಗರಾಭಿವೃದ್ಧಿ ಇಲಾಖೆಯು ಲಭ್ಯವಿರುವ ₹ 30 ಕೋಟಿ ಹಣದಲ್ಲಿ ₹ 12 ಕೋಟಿ ಟ್ರಾಫಿಕ್​ ಸಿಗ್ನಲ್​ ಅಳವಡಿಕೆಗಾಗಿ ಹಾಗೂ ₹ 5.32 ಕೋಟಿ ರೋಡ್​ ಸ್ಟಡ್ಸ್​ ಅಥವಾ ಕ್ಯಾಟ್​ ಐಸ್ಸ್ ₹ 5.32 ಕೋಟಿ ನಿರ್ಮಾಣ ಸೇರಿದಂತೆ ಒಟ್ಟು ₹ 17.32 ಕೋಟಿ ಅನುದಾನವನ್ನು ನೇರವಾಗಿ ನಗರ ಸಂಚಾರ ವಿಭಾಗಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.

ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸ್​ ಆಯುಕ್ತರು ಕಾರ್ಯೋನ್ಮುಖವಾಗಿದ್ದು, ಮೊದಲ ಆದ್ಯತೆಯಾಗಿ 125 ಜಂಕ್ಷನ್​ ನಿರ್ಮಾಣ, ಟ್ರಾಫಿಕ್​ ಸಿಗ್ನಲ್​ ಲೈಟ್​ ಅಳವಡಿಕೆಗಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Intro:Body:
ಬೆಂಗಳೂರು ಸಂಚಾರ ವಿಭಾಗಕ್ಕೆ 17.32 ಕೋಟಿ ರೂ. ಅನುದಾನ:
ಶೀಘ್ರದಲ್ಲೇ 125 ಜಂಕ್ಷನ್​ ನಿರ್ಮಾಣ, ಅಗತ್ಯ ಕಡೆಗಳಲ್ಲಿ ಟ್ರಾಫಿಕ್​ ಲೈಟ್ಸ್​ ಅಳವಡಿಕೆ
ಬೆಂಗಳೂರು: ದಿನೇ ದಿನೆ ವಾಹನಗಳ ಸಂಖ್ಯೆ ಏರಿಕೆ ಪರಿಣಾಮ ನಗರದಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಿಂದಾಗಿ ಅಪಘಾತ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಆತಕಂಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕಾಗಿ ಅನುದಾನ ಕೋರಿ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸರ್ಕಾರ ಅಸ್ತು ಎಂದಿದ್ದು, 17.32 ಕೋಟಿ ರೂ. ಅನುದಾನ ಒದಗಿಸಿದೆ.
2017-18ರಲ್ಲಿ ಬಿಬಿಎಂಪಿ ಟ್ರಾಫಿಕ್​ ಇಂಜಿನಿಯರಿಂಗ್​ ಸೆಲ್​ (ಟಿಇಸಿ) ವಿಭಾಗಕ್ಕೆ ಸರ್ಕಾರ 30 ಕೋಟಿ ಮೀಸಲಿಟ್ಟಿತ್ತು. ಈ ವೇಳೆ ಬೆಂಗಳೂರು ಸಂಚಾರ ವಿಭಾಗದಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬಿ-ಟ್ರ್ಯಾಕ್​ ಯೋಜನೆಯಡಿ ಅನುದಾನ ನೀಡುವಂತೆ ನಗರಾಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿತ್ತು. ಹೊಸದಾಗಿ ಸಂಚಾರಿ ದೀಪಗಳ ಅಳವಡಿಕೆ, ಸಿಸಿಟಿವಿ ಕ್ಯಾಮರ ಹಾಗೂ ಅಗತ್ಯ ಕಡೆಗಳಲ್ಲಿ ರಸ್ತೆ ಉಬ್ಬು ಹಾಕುವುದು ಸೇರಿದಂತೆ ಸುಗಮ ಸಂಚಾರಕ್ಕೆ ಬೇಕಾದ ಅಂಶಗಳನ್ನು ಪ್ರಸ್ತಾವನೆ ಸೂಚಿಸಿತ್ತು.
ಇದರಂತೆ ನಗರಾಭಿವೃದ್ಧಿ ಇಲಾಖೆಯು ಲಭ್ಯವಿರುವ 30 ಕೋಟಿ ರೂ. ಹಣದಲ್ಲಿ 12 ಕೋಟಿ ರೂ. ಟ್ರಾಫಿಕ್​ ಸಿಗ್ನಲ್​ ಅಳವಡಿಕೆಗಾಗಿ ಹಾಗೂ 5.32 ಕೋಟಿ ರೋಡ್​ ಸ್ಟಡ್ಸ್​ ಅಥವಾ ಕ್ಯಾಟ್​ ಐಸ್ಸ್ 5.32 ಕೋಟಿ ರೂ.ನಿರ್ಮಾಣ ಸೇರಿದಂತೆ ಒಟ್ಟು 17.32 ಕೋಟಿ ರೂ.ಅನುದಾನವನ್ನು ನೇರವಾಗಿ ನಗರ ಸಂಚಾರ ವಿಭಾಗಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.
ಈ ನಿಟ್ಟಿನಲ್ಲಿ ಸಂಚಾರಿ ಪೊಲೀಸ್​ ಆಯುಕ್ತರು ಕಾರ್ಯನ್ಮೋಖವಾಗಿದ್ದು, ಮೊದಲ ಆದ್ಯತೆಯಾಗಿ 125 ಜಂಕ್ಷನ್​ ನಿರ್ಮಾಣ, ಟ್ರಾಫಿಕ್​ ಸಿಗ್ನಲ್​ ಲೈಟ್​ ಅಳವಡಿಕೆಗಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.