ETV Bharat / state

ಗುಡ್​​ ನ್ಯೂಸ್​​... BBMP ವ್ಯಾಪ್ತಿಯಲ್ಲಿ ದಿನದ 12 ಗಂಟೆ ಲಸಿಕಾ ಕೇಂದ್ರ ಓಪನ್​​​​​​​​

ಕೋವಿಡ್​ ವ್ಯಾಕ್ಸಿನೇಷನ್​ ಡೋಸ್​ ಹಂಚಿಕೆಗೆ ಮತ್ತಷ್ಟು ವೇಗ ನೀಡಲು ಬಿಬಿಎಂಪಿ ಮುಂದಾಗಿದ್ದು, ಅದಕ್ಕಾಗಿ ಮೆಗಾ ಪ್ಲಾನ್​ ಹಾಕಿಕೊಂಡಿದೆ.

Covid Vaccine
Covid Vaccine
author img

By

Published : Sep 3, 2021, 12:19 AM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲಸಿಕೆ ಹಂಚಿಕೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಮತ್ತೊಂದು ಯೋಜನೆ ರೂಪಿಸಿದೆ. ಇಡೀ ದೇಶದಲ್ಲೇ ಲಸಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ಬಿಬಿಎಂಪಿ ದಿನಕ್ಕೆ ಒಂದು ಲಕ್ಷದ ಗಡಿ ಮೀರಿ ವ್ಯಾಕ್ಸಿನ್​​ ಹಂಚಿಕೆ ಮಾಡುತ್ತಿದೆ. ಅದರ ವ್ಯಾಪ್ತಿ ಇದೀಗ ಮತ್ತಷ್ಟು ಹೆಚ್ಚಾಗಲಿದೆ.

ದಿನದ 12 ತಾಸು ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್: ಬೃಹತ್ ಮಹಾನಗರ ಪಾಲಿಕೆ ಲಸಿಕೆ ಹಂಚಿಕೆಯನ್ನು ತೀವ್ರಗತಿಯಲ್ಲಿ ನಡೆಸುತ್ತಿದೆ. ಆದಷ್ಟು ಬೇಗ ಪೂರ್ಣ ಪ್ರಮಾಣದ ಲಸಿಕೆ ಹಂಚಿಕೆ ಪೂರ್ಣಗೊಳಿಸುವ ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಬಂದಿರುವ ಬಿಬಿಎಂಪಿ, ಲಸಿಕೆ ವಿತರಣೆಯ ಸಮಯವನ್ನು ವಿಸ್ತರಿಸಿದೆ. ಸದ್ಯ ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಮಾತ್ರ ಪಾಲಿಕೆ ಸೆಂಟರ್​ಗಳಲ್ಲಿ ಡೋಸ್​ ನೀಡಲಾಗುತ್ತಿತ್ತು. ಆದರೆ ಇದೀಗ ದಿನದ 12 ತಾಸು ಲಸಿಕೆ ವಿತರಣೆ ಮಾಡಲು ಪಾಲಿಕೆ ನಿರ್ಧಾರ ಮಾಡಿದೆ.

BBMP ವ್ಯಾಪ್ತಿಯಲ್ಲಿ ದಿನದ 12 ಗಂಟೆ ಲಸಿಕಾ ಕೇಂದ್ರ ಓಪನ್​​​​​​​​

ದೇಶದಲ್ಲಿ ಲಸಿಕೆ ಹಂಚಿಕೆಯಲ್ಲಿ ಮೂಂಚೂಣಿಯಲ್ಲಿರುವ ರಾಜ್ಯ ರಾಜಧಾನಿಯಲ್ಲಿ ದಿನದ 12 ತಾಸು ಲಸಿಕೆ ನೀಡಲು ಪಾಲಿಕೆ ನಿರ್ಧರಿಸಿದೆ.

28 ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ವ್ಯಾಕ್ಸಿನೇಷನ್ ಸೆಂಟರ್: ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ದಿನದಲ್ಲಿ 7 ಗಂಟೆ ಮಾತ್ರ ಪಾಲಿಕೆ ಲಸಿಕೆ ಹಂಚಿಕೆ ಮಾಡುತ್ತಿತ್ತು. ಈ ಅವಧಿಯನ್ನು ವಿಸ್ತರಿಸಿ ದಿನದ 12 ತಾಸು ಲಸಿಕೆ ಹಂಚಿಕೆ ಮಾಡಲಿದೆ. ರಾಜಧಾನಿಯ 28 ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ವ್ಯಾಕ್ಸಿನೇಷನ್ ಸೆಂಟರ್ ತೆರೆದು, 12 ತಾಸು ಲಸಿಕೆ ನೀಡಲು ಮುಂದಾಗಿದೆ.

ಈ ಮೂಲಕ ಪ್ರತಿ ದಿನ‌ ಒಂದು ಲಕ್ಷ ಲಸಿಕೆ ಹಂಚಿಕೆ ಮಾಡಿ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನೇಷನ್​ ಗುರಿ ಇಟ್ಟುಕೊಂಡಿದೆ.

ಇದನ್ನೂ ಓದಿರಿ: ಬಯಲು ಸೀಮೆಯಲ್ಲಿ ಮಲೆನಾಡ ಸೌಂದರ್ಯ; ಚಾರಣಪ್ರಿಯರಿಗೆ ಬಲು ಇಷ್ಟ ಅರ್ಕಾವತಿ ಉಗಮ ಸ್ಥಾನ

ಬೆಂಗಳೂರಿಗೆ ಮೂರು ಮೆಗಾ ವ್ಯಾಕ್ಸಿನೇಷನ್‌ ಸೆಂಟರ್: ಬೆಂಗಳೂರಿನಲ್ಲೇ ಮೂರು ಮೆಗಾ ವ್ಯಾಕ್ಸಿನೇಷನ್‌ ಸೆಂಟರ್ ಓಪನ್​ ಮಾಡಲು ಪಾಲಿಕೆ ನಿರ್ಧಾರ ಮಾಡಿದೆ. ಬೃಹತ್ ಮೈದಾನದಲ್ಲಿ ಪೂರ್ಣ ಪ್ರಮಾಣದ ‌ಲಸಿಕೆ ಹಂಚಿಕೆ ಆಗುವವರಿಗೆ ಮೆಗಾ ಲಸಿಕಾ ಕೇಂದ್ರ ಸದ್ಯದಲ್ಲೇ ಓಪನ್ ಆಗಲಿದೆ. ಮಲ್ಲೇಶ್ವರದಲ್ಲಿರುವ ಮೈದಾನ, ಸಿವಿರಾಮನ್​ನಗರದ ಈ.ಡಿ.ಹೆಚ್ ಕ್ಯಾಂಪಸ್, ಯಲಹಂಕದ ಅಂಬೇಡ್ಕರ್ ಭವನದಲ್ಲಿ ಬೃಹತ್ ಲಸಿಕಾ ಕೇಂದ್ರಗಳನ್ನು ತೆರೆಯಲಿದೆ. ಲಸಿಕೆ ಪಡೆಯಲು ಬಂದು ಸಿಗದೇ ಇದ್ದರೆ‌ ಕೂಪನ್ ವ್ಯವಸ್ಥೆ ಮಾಡಲಾಗಿದೆ. ಕೂಪನ್ ಪಡೆದುಕೊಂಡವರಿಗೆ ಮರು ದಿನ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂರನೇ ಅಲೆ ಭೀತಿ ಇರುವ ಸಮಯದಲ್ಲಿ ಬಿಬಿಎಂಪಿ ತ್ವರಿತಗತಿಯಲ್ಲಿ ಲಸಿಕೆ ಹಂಚಿಕೆ ಮಾಡಲು ಪ್ರಯತ್ನಿಸುತ್ತಿದೆ. ಲಸಿಕಾ ಮೇಳ ಕಾರ್ಯಕ್ರಮ ಜಾರಿಯಲ್ಲಿದ್ದು,‌ ದಾಖಲೆ ಮಟ್ಟದಲ್ಲಿ ಲಸಿಕೆ ವಿತರಣೆ ಮಾಡುತ್ತಿದೆ. ಜೊತೆಗೆ ದಿನದ 12 ತಾಸು ಲಸಿಕೆ ಹಂಚಿಕೆಯನ್ನು ಕಾರ್ಯಕ್ರಮ ಶೀಘ್ರವೇ ಅನುಷ್ಠಾನವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.