ETV Bharat / state

ಕಾಂಗ್ರೆಸ್​​ನಿಂದ ಮೂರನೇ ಗ್ಯಾರಂಟಿ ಘೋಷಣೆ.. ಅನ್ನಭಾಗ್ಯ ಮರು ಆರಂಭ: BPL ಕುಟುಂಬದ ತಲಾ ಒಬ್ಬರಿಗೆ 10 ಕೆಜಿ ಅಕ್ಕಿ ನೀಡುವ ಭರವಸೆ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷವು ಮೂರನೇ ಗ್ಯಾರಂಟಿಯನ್ನ ಘೋಷಣೆ ಮಾಡಿದೆ. ಜನರ ಹಸಿವು ನೀಗಬೇಕು ಎಂಬ ಉದ್ದೇಶದಿಂದ ಪ್ರತಿ ತಿಂಗಳು ಬಿಪಿಎಲ್​ ಕಾರ್ಡ್​ ಹೊಂದಿರುವ ಒಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದ್ದೇವೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿ​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

congress press meet
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜಂಟಿ​ ಸುದ್ದಿಗೋಷ್ಠಿ
author img

By

Published : Feb 24, 2023, 1:18 PM IST

Updated : Feb 24, 2023, 3:55 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿ, ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಮತದಾರರಿಗೆ ಮೂರನೇ ಕೊಡುಗೆಯನ್ನು ಘೋಷಣೆ ಮಾಡಿದರು.

'ರಾಜ್ಯಕ್ಕೆ ಬಿಜೆಪಿ ಮಾಡಲಾಗದ ಕೆಲಸವನ್ನು ನಾವು ಮಾಡಬೇಕೆಂದು ಈ ದಿನ ಸಂಕಲ್ಪ ಮಾಡಿ ಎರಡು ಘೋಷಣೆಗಳನ್ನು ಮಾಡಿದ್ದೇವೆ. ಬಹುಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಘೋಷಿಸಿದ್ದೇವೆ. ನಾವು ಬಸ್ ಯಾತ್ರೆ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಅನ್ನಭಾಗ್ಯಯೋಜನೆ ಮರು ಆರಂಭಿಸುವಂತೆ ಜನರು ಒತ್ತಾಯ ಮಾಡಿದ್ದಾರೆ. ಈಗಾಗಲೇ ನಮ್ಮ ಪಕ್ಷದ ನಾಯಕರ ಜೊತೆ ಈ ಕುರಿತು ಚರ್ಚಿಸಿ, ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಅಕ್ಕಿಯನ್ನು 7 ರಿಂದ 5 ಕೆಜಿಗೆ ಇಳಿಸಿರುವುದು ಜನರಿಗೆ ದೊಡ್ಡ ಹೊಡೆತ ನೀಡಿದೆ. ಇದರಿಂದ ನಾವು ಮತದಾರರಿಗೆ ಮೂರನೇ ಗ್ಯಾರಂಟಿ ನೀಡಲು ಸಮಾವೇಶಗೊಂಡಿದ್ದೇವೆ' ಎಂದು ಡಿಕೆಶಿ ಹೇಳಿದರು.

ಅನ್ನಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗುವ ರೀತಿ ಕಾರ್ಯ ನಿರ್ವಹಿಸಿದೆ. ಪ್ರತಿ ಮನೆಯಲ್ಲೂ ಬಿಪಿಎಲ್ ಕಾರ್ಡ್ ಹೊಂದಿದ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡುವ ನೂತನ ಯೋಜನೆಯನ್ನು ಘೋಷಿಸುತಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಈಗ ನೀಡುತ್ತಿರುವ 7 ಕೆ ಜಿ ಅಕ್ಕಿಯನ್ನು ಪಡೆಯುವವರಿಗೆ 10 ಕೆ.ಜಿ ನೀಡುತ್ತೇವೆ. ನಾವು 7 ಕೆಜಿ ನೀಡುತ್ತಿದ್ದ ಅಕ್ಕಿಯನ್ನು ಈಗಿನ ಸರ್ಕಾರ 5 ಕೆಜಿಗೆ ಇಳಿಸಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 'ನಾವು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ಕೈಗೊಂಡ ಕ್ರಮ ಇದು. ತಿಂಗಳಿಗೆ 30 ಕೆಜಿ ಅಕ್ಕಿ ನೀಡುವ ತೀರ್ಮಾನ ಕೈಗೊಂಡಿದ್ದೆವು. ನಂತರ ತಲಾ 7 ಕೆಜಿ ಅಕ್ಕಿ ನೀಡಲು ತೀರ್ಮಾನಿಸಿದೆವು. ಮೊದಲು ಜನರಿಂದ 2 ರೂ. ಹಾಗೂ ಸರ್ಕಾರದಿಂದ ಮೂರು ರೂ. ಹಾಕಿ 5 ರೂ ಗೆ ಒಂದು ಕೆಜಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿ ನೀಡಲು ನಿರ್ಧರಿಸಿದ್ದೆವು.

ನಂತರ ಇದನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ ರೂಪದಲ್ಲಿ ಉಚಿತವಾಗಿ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಿದೆವು. ಇದೀಗ ಸರ್ಕಾರದ ಐದು ಕೆಜಿಗೆ ಇಳಿಸಿದೆ. ನಾವು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜನ ನೀವು ಅಧಿಕಾರಕ್ಕೆ ಬಂದಾಗ ಇದನ್ನ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ನಾವು ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ್ದೇವೆ. ಹಸಿದವರಿಗೆ ಹೊಟ್ಟೆ ತುಂಬ ಊಟ ನೀಡಬೇಕೆಂಬ ತೀರ್ಮಾನ ಕೈಗೊಂಡು ಈ ನಿರ್ಧಾರ ಮಾಡಿದ್ದೇವೆ' ಎಂದು ತಿಳಿಸಿದರು.

ಇದನ್ನೂ ಓದಿ: ವಿದ್ಯುತ್, ಹಣ, ಅಕ್ಕಿ ಬಳಿಕ ಟಿವಿ ಬಹುಮಾನ ಘೋಷಿಸಿದ ಡಿ‌‌.ಕೆ.ಶಿವಕುಮಾರ್

'ಬೆಲೆ ಏರಿಕೆಯ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ. ಈ ಸಾರಿ ನಾವು ಅಧಿಕಾರಕ್ಕೆ ಬಂದರೆ ಏಳು ಕೆಜಿ ಬದಲು 10 ಕೆಜಿ ನೀಡಲು ತೀರ್ಮಾನಿಸಿದ್ದೇವೆ. ಈಗಾಗಲೇ ಎರಡು ನೂತನ ಯೋಜನೆಯನ್ನು ಗ್ಯಾರಂಟಿ ರೂಪದಲ್ಲಿ ಘೋಷಿಸಿರುವ ನಾವು, ಈ ಮೂರನೇ ಯೋಜನೆಯನ್ನು ಘೋಷಿಸುತ್ತಿದ್ದೇವೆ. ಬಿಜೆಪಿ ಸರ್ಕಾರ ಕೇವಲ ಸುಳ್ಳನ್ನೇ ಹೇಳುತ್ತಿರುವ ಹಿನ್ನೆಲೆ ಜನರಿಗೆ ಯಾವುದು ಸತ್ಯ ಎಂಬುದು ಅರಿವಾಗುತ್ತಿಲ್ಲ. ಇದರಿಂದ ನಾನು ಮತ್ತು ಡಿಕೆ ಶಿವಕುಮಾರ್ ಸಹಿ ಮಾಡಿದ ಗ್ಯಾರಂಟಿ ಕಾರ್ಡ್​ಗಳನ್ನು ಮನೆ ಮನೆಗೂ ವಿತರಿಸುತಿದ್ದೇವೆ.

ನಾವು ಅಧಿಕಾರಕ್ಕೆ ಬಂದ ತಕ್ಷಣ ಮೊದಲ ತಿಂಗಳಿಂದಲೇ ಈ ಯೋಜನಗಳನ್ನು ಜಾರಿಗೆ ತರುತ್ತೇವೆ. ಸದ್ಯಕ್ಕೆ ಅಕ್ಕಿ ನೀಡುವುದಕ್ಕೆ ನಾಲ್ಕೈದು ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ನಾವು ಹೆಚ್ಚುರಿಯಾಗಿ ನೀಡುವ ಅಕ್ಕಿಯಿಂದಾಗಿ ಮೂರ್ನಾಲ್ಕು ಸಾವಿರ ಕೋಟಿ ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಕೇಂದ್ರ ಸರ್ಕಾರದಿಂದ ನಮಗೆ 3 ಕೆಜಿ ವರೆಗೂ ಉಚಿತ ಅಕ್ಕಿ ಲಭಿಸಲಿದೆ. ಉಳಿದದ್ದನ್ನು ನಮ್ಮ ಸರ್ಕಾರ ಕೈಯಿಂದ ಹಾಕಿಕೊಳ್ಳಬೇಕು' ಎಂದರು.

ಇದನ್ನೂ ಓದಿ: ಮಹೇಶ್ ರಾಜಕೀಯ ಅಂತ್ಯ ಆರಂಭ : ಕೈ ಸೇರ್ತಿದ್ದಾರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದ ಡಿಕೆಶಿ

'ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದವರು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಅಲ್ಲ. ಬಸವರಾಜ ಬೊಮ್ಮಾಯಿ ಸುಳ್ಳು ಹೇಳುವಲ್ಲಿ ನಿಸ್ಸೀಮರು. ಇದಕ್ಕಾಗಿ ಆರ್​ಎಸ್​ಎಸ್​​​​ನವರು ಇವರನ್ನ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಭಾವಿಸಿದ್ದೇನೆ. ಸುಳ್ಳು ಹೇಳುವುದರಿಂದ ಇವರು ಸಿಎಂ ಸ್ಥಾನಕ್ಕೆ ಲಾಯಕ್ಕು ಎಂದು ಅವರು ಭಾವಿಸಿರಬೇಕು. ಉಚಿತವಾಗಿ ಅಕ್ಕಿ ಕೊಡುವ ಯೋಜನೆಯನ್ನು ಜಾರಿಗೆ ತಂದಿದ್ದು, ನಮ್ಮ ಸರ್ಕಾರ ಮಾತ್ರ. ನಾವು ಘೋಷಿಸಿರುವ ಮೊದಲಿನ ಎರಡು ಗ್ಯಾರಂಟಿ ಜೊತೆ ಈ ಮೂರನೇ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದರೆ ನೀಡಲಿದ್ದೇವೆ ಎಂದು ಭರವಸೆ ನೀಡುತ್ತೇವೆ' ಎಂದರು.

ಈ ವೇಳೆ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ , ಶಾಸಕ ಭೀಮಾ ನಾಯ್ಕ, ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಹಾಗೂ ವಿಧಾನ ಪರಿಷತ್ ಸದಸ್ಯ ಗೂಳಿಗೌಡ ಉಪಸ್ಥಿತರಿದ್ದರು.

Last Updated : Feb 24, 2023, 3:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.