ETV Bharat / state

ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಟಾಪ್ 5 ಹಣಕಾಸು ಸಚಿವರು/ಸಿಎಂಗಳು ಯಾರು?

ಸಿಎಂ ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬೊಮ್ಮಾಯಿ ಬಜೆಟ್ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಹಾಗೂ ಹಣಕಾಸು ಸಚಿವರ ಮಾಹಿತಿ ಇಲ್ಲಿದೆ ನೋಡಿ.

ರಾಮಕೃಷ್ಣ ಹೆಗಡೆ
ರಾಮಕೃಷ್ಣ ಹೆಗಡೆ
author img

By

Published : Mar 4, 2022, 6:47 AM IST

Updated : Mar 4, 2022, 7:01 AM IST

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಇಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಬೊಮ್ಮಾಯಿ ಅವರಿಗೆ ಇದು ಚೊಚ್ಚಲ ಬಜೆಟ್ ಆಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಸಿಎಂ ಹಾಗೂ ಹಣಕಾಸು ಸಚಿವರು ಯಾರು ಎಂಬುದನ್ನು ನೋಡುವುದಾದರೆ, ಸಿಎಂ ಇಂದು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬೊಮ್ಮಾಯಿ ಬಜೆಟ್ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದು, ಆರ್ಥಿಕ ಸಂಕಷ್ಟದ ಮಧ್ಯೆ ಯಾವ ರೀತಿಯ ಅಚ್ಚರಿಗಳ ಘೋಷಣೆ ಮಾಡಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಹಣಕಾಸು ಸಚಿವರೇ ಬಜೆಟ್ ಮಂಡನೆ ಮಾಡುತ್ತಾರೆ. ಬಹುತೇಕ ರಾಜ್ಯದ ಸಿಎಂಗಳು ತಮ್ಮ ಬಳಿಯೇ ಹಣಕಾಸು ಇಲಾಖೆ ಉಳಿಸಿಕೊಂಡಿರುವುದರಿಂದ ಅವರೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಕೆಲ ಸಿಎಂಗಳಿಗೆ ಮಾತ್ರ ಸೀಮಿತವಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಟಾಪ್ 5 ಸಿಎಂ/ಹಣಕಾಸು ಸಚಿವರುಗಳ ಬಜೆಟ್ ವಿವರ ಹೀಗಿದೆ.

13 ಬಾರಿ ಬಜೆಟ್ ಮಂಡಿಸಿದ್ದ ರಾಮಕೃಷ್ಣ ಹೆಗಡೆ: ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ‌ ಮಾಡಿದ ಹೆಗ್ಗಳಿಕೆ ಸಲ್ಲುವುದು ರಾಮಕೃಷ್ಣ ಹೆಗಡೆಯವರಿಗೆ. ಎಸ್.ನಿಜಲಿಂಗಪ್ಪ ಆಡಳಿತದಲ್ಲಿ ಹಣಕಾಸು ಸಚಿವಾರಾಗಿದ್ದ ರಾಮಕೃಷ್ಣ ಹೆಗಡೆ 1966-67ನೇ ಸಾಲಿನ ತಮ್ಮ ಮೊದಲ ಬಜೆಟ್ ಮಂಡಿಸಿದ್ದರು. ಅವರ ಮೊದಲ ಬಜೆಟ್ ಗಾತ್ರ 154 ಕೋಟಿ ರೂ. ಬಳಿಕ ಹಣಕಾಸು ಸಚಿವರಾಗಿ 1967-68, 1968-69, 1969-70, 1970-71, 1971-72ರಲ್ಲಿ ಬಜೆಟ್ ಮಂಡಿಸಿದರು. ಹಣಕಾಸು ಸಚಿವರಾಗಿ ರಾಮಕೃಷ್ಣ ಹೆಗಡೆ 6 ಬಾರಿ ಬಜೆಟ್ ಮಂಡಿಸಿದ್ದರು.

ರಾಮಕೃಷ್ಣ ಹೆಗಡೆ
ರಾಮಕೃಷ್ಣ ಹೆಗಡೆ

ಇದನ್ನೂ ಓದಿ: ಭೀಕರ ಸ್ಫೋಟ: ಐವರು ದುರ್ಮರಣ, 10ಕ್ಕೂ ಹೆಚ್ಚು ಮಂದಿಗೆ ಗಾಯ

ಬಳಿಕ ರಾಮಕೃಷ್ಣ ಹೆಗಡೆ ಸಿಎಂ ಆಗಿ 1983 - 84ರಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಿದ್ದರು. ಬಳಿಕ ಸಿಎಂ ಆಗಿ 1984-85, 1985-86, 1986-87, 1987-88, 1988-89 ಬಜೆಟ್ ಮಂಡನೆ ಮಾಡಿದರು. ಆ ಮೂಲಕ ಒಟ್ಟು 13 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದರು.

ಬಜೆಟ್ ಮಂಡನೆ ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ: ರಾಮಕೃಷ್ಣ ಹೆಗಡೆಯವರ ಅತಿಹೆಚ್ಚು ಆಯವ್ಯಯ ಮಂಡಿಸಿದ ದಾಖಲೆ ಸರಿಗಟ್ಟಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಮೊದಲಿಗೆ ಹಣಕಾಸು ಸಚಿವರಾಗಿ ಬಳಿಕ ಸಿಎಂರ ಆಗಿ 13 ಬಾರಿ ಆಯವ್ಯಯ ಮಂಡನೆ ಮಾಡಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

ಹೆಚ್.ಡಿ.ದೇವೇಗೌಡರು ಹಾಗೂ ಜೆ.ಹೆಚ್.ಪಟೇಲ್ ಆಡಳಿತದಲ್ಲಿ ಹಣಕಾಸ ಸಚಿವರಾಗಿದ್ದ ಸಿದ್ದರಾಮಯ್ಯ, 1995-96ನೇ ಸಾಲಿನ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ಬಳಿಕ 1996-97, 1997-98, 1998-99, 1999 - 2000, 2004-05, 2005-06ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಸಿಎಂ ಆಗಿ 2013-14, 2014-15, 2015-16, 2016-17, 2017-18, 2018-19ರಲ್ಲಿ ಬಜೆಟ್ ಮಂಡಿಸಿದರು. ಆ ಮೂಲಕ ಒಟ್ಟು 13 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.

8 ಬಾರಿ ಬಜೆಟ್ ಮಂಡಿಸಿದ ಬಿಎಸ್​ವೈ: ರಾಮಕೃಷ್ಣ ಹೆಗಡೆ ಮತ್ತು ಸಿದ್ದರಾಮಯ್ಯ ಬಳಿಕ ಅತಿ ಹೆಚ್ಚು ರಾಜ್ಯದ ಆಯವ್ಯಯ ಮಂಡಿಸಿದ ಹೆಗ್ಗಳಿಕೆ ಸಲ್ಲುವುದು ಬಿ.ಎಸ್.ಯಡಿಯೂರಪ್ಪಗೆ. ಬಿ.ಎಸ್.ಯಡಿಯೂರಪ್ಪ ಅವರು 8 ಬಾರಿ ಬಜೆಟ್ ಮಂಡಿಸಿದ್ದರು.

ಇದನ್ನೂ ಓದಿ: ಬಜೆಟ್​ಗೂ ಮುನ್ನ ಸಿನಿರಂಗಕ್ಕೆ ಬಂಪರ್​ ಆಫರ್​ ಕೊಟ್ಟ ಸಿಎಂ: ಕಾರ್ಯಕ್ರಮದಲ್ಲಿ ದರ್ಶನ್​ ಹೊಗಳಿದ ಬೊಮ್ಮಾಯಿ

2006-07ರಲ್ಲಿ ಯಡಿಯೂರಪ್ಪ ಅವರು ಡಿಸಿಎಂ ಆಗಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಬಳಿಕ 2007-08ರಲ್ಲೂ ಡಿಸಿಎಂ ಆಗಿ ಬಿಎಸ್​ವೈ ಬಜೆಟ್ ಮಂಡಿಸಿದರು. ಬಳಿಕ ಯಡಿಯೂರಪ್ಪ ಸಿಎಂ ಆಗಿ 2008-09, 2009-10, 2010-11, 2011-12ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಮತ್ತೆ 2020-21 ಹಾಗೂ 2021-22ನೇ ಸಾಲಿನ ಬಜೆಟ್ ಮಂಡಿಸಿದರು‌.

ಎಂ.ವೈ. ಘೋರ್ಪಡೆಯಿಂದ 6 ಬಾರಿ ಬಜೆಟ್ ಮಂಡನೆ: ರಾಜ್ಯದಲ್ಲಿ ಅತಿಹೆಚ್ಚು ಬಜೆಟ್ ಮಂಡನೆ ಮಾಡಿದ ಟಾಪ್ ಐವರಲ್ಲಿ ನಾಲ್ಕನೇ ಸ್ಥಾನ ಸಲ್ಲುವುದು ಎಂ.ವೈ.ಘೋರ್ಪಡೆಯವರಿಗೆ. ಎಂ.ವೈ.ಘೋರ್ಪಡೆಯವರು ಒಟ್ಟು ಆರು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.

ಎಂ.ವೈ.ಘೋರ್ಪಡೆ
ಎಂ.ವೈ.ಘೋರ್ಪಡೆ

ದೇವರಾಜು ಅರಸು ಆಡಳಿತಾವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಎಂ.ವೈ.ಘೋರ್ಪಡೆ ಆರು ಬಾರಿ ಮುಂಗಡ ಪತ್ರ ಮಂಡಿಸಿದ್ದರು. 1972-73, 1973-74, 1974-75, 1975-76, 1976-77, 1977-78ನೇ ಸಾಲಿನಲ್ಲಿ ಬಜೆಟ್ ಮಂಡಿಸಿದ್ದರು.

ಐದು ಬಾರಿ ಬಜೆಟ್ ಮಂಡಿಸಿದವರು ಯಾರು?: ಐದು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ರಾಜ್ಯದ ಮೂವರಿಗೆ ಸಲ್ಲುತ್ತದೆ. ಮೊದಲಿಗೆ ಎಸ್.ನಿಜಲಿಂಗಪ್ಪ ಹಾಗೂ ಬಿ.ಡಿ.ಜತ್ತಿ ಆಡಳಿತದಲ್ಲಿ ಟಿ.ಮರಿಯಪ್ಪರು ಹಣಕಾಸು ಸಚಿವರಾಗಿ ಐದು ಬಾರಿ ಬಜೆಟ್ ಮಂಡಿಸಿದ್ದರು.1957-58, 1958-59, 1959-60, 1960-61, 1961-62 ರಂದು ಟಿ.ಮರಿಯಪ್ಪನವರು ಆಯವ್ಯಯ ಮಂಡಿಸಿದ್ದರು.

ಟಿ.ಮರಿಯಪ್ಪ
ಟಿ.ಮರಿಯಪ್ಪ

ಇದನ್ನೂ ಓದಿ: ರಾಕೆಟ್ ಮೇಲಿದ್ದ ಭಾರತದ ತ್ರಿವರ್ಣ ಧ್ವಜ ಬಿಟ್ಟು ಬೇರೆಲ್ಲ ದೇಶಗಳ ಧ್ವಜ ತೆಗೆದು ಹಾಕಿದ ರಷ್ಯಾ

ಐದು ಬಾರಿ ಮುಂಗಡ ಪತ್ರ ಸಲ್ಲಿಸಿದವರ ಸಾಲಿಗೆ ವೀರಪ್ಪ ಮೊಯ್ಲಿ ಕೂಡ ಸೇರುತ್ತಾರೆ. ಗಂಡೂರಾವ್ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ವೀರಪ್ಪ ಮೊಯ್ಲಿ 1980-81, 1981-82, 1982-83ನೇ ಸಾಲಿನಲ್ಲಿ ಬಜೆಟ್ ಮಂಡಿಸಿದ್ದರು. ಬಳಿಕ 1993-94 ಹಾಗೂ 1994-95ರಲ್ಲಿ ಸಿಎಂರಾಗಿ ವೀರಪ್ಪ ಮೊಯ್ಲಿ ಬಜೆಟ್ ಮಂಡಿಸಿದರು.

ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

ಐದು ಬಾರಿ ಬಜೆಟ್ ಮಂಡಿಸಿದ ಮತ್ತೊಬ್ಬ ಹಣಕಾಸು ಸಚಿವ/ಸಿಎಂ ಎಸ್.ಎಂ.ಕೃಷ್ಣ. ಎಸ್.ಎಂ.ಕೃಷ್ಣ ಅವರು ಸಿಎಂ ಆಗಿ 2000-01, 2001-02, 2002-03, 2003-04, 2004-05ನೇ ಸಾಲಿನಲ್ಲಿ ಆಯವ್ಯಯ ಮಂಡನೆ ಮಾಡಿದ್ದರು.

Last Updated : Mar 4, 2022, 7:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.