ETV Bharat / state

ಸಿನಿಮಾ ನಿರ್ದೇಶಕನಿಗೆ ಬೆದರಿಸಿ ಚೆಕ್​ಗೆ ಸಹಿ; ನೆಲಮಂಗಲ ಟೌನ್​ ಸ್ಟೇಷನ್​​ ಪಿಎಸ್​ಐ ವಿರುದ್ಧ ವಾರಂಟ್ ಜಾರಿ - Cinema financial controversy

'ಪತಿ ಬೇಕು ಡಾಟ್​​ ಕಾಂ' ಸಿನಿಮಾಗೆ ಬಂಡವಾಳ ಹೂಡಿದ್ದ ಪಿಎಸ್‌ಐಯೊಬ್ಬರು ಸಿನಿಮಾ ಸೋತಿದ್ದಕ್ಕೆ ನಿರ್ದೇಶಕರಿಗೆ ಬೆದರಿಕೆ ಹಾಕಿ ಚೆಕ್​ಗೆ ಸಹಿ ಹಾಕಿಸಿಕೊಂಡಿರುವ ಪ್ರಕರಣ ಆಲಿಸಿದ ಇಲ್ಲಿನ ನ್ಯಾಯಾಲಯ ಪಿಎಸ್‌ಐ ವಿರುದ್ಧ ಬಂಧನ ವಾರಂಟ್​​ ಜಾರಿಯಾಗಿದೆ.

Warrant issued against Nelamangala town station PSI
ನೆಲಮಂಗಲ ಟೌನ್​​ ಸ್ಟೇಷನ್​​ ಪಿಎಸ್‌ಐ
author img

By

Published : Oct 28, 2020, 11:47 PM IST

ನೆಲಮಂಗಲ: 'ಪತಿ ಬೇಕು ಡಾಟ್​​ ಕಾಂ' ಸಿನಿಮಾದ ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕನಿಗೆ ಬೆದರಿಸಿ ಚೆಕ್​ಗಳಿಗೆ ಸಹಿ ಪಡೆದ ಆರೋಪ ಹಿನ್ನೆಲೆಯಲ್ಲಿ ನೆಲಮಂಗಲ ಟೌನ್​​ ಸ್ಟೇಷನ್​​ ಪಿಎಸ್‌ಐ ವಿರುದ್ಧ ಬಂಧನ ವಾರಂಟ್​​ ಜಾರಿಯಾಗಿದೆ.

ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ ಪೊಲೀಸ್​​​ ಆಯುಕ್ತರ ಮೂಲಕ ಪಿಎಸ್‌ಐ ಮಂಜುನಾಥ ಹಾಗೂ ಕಾನ್ಸ್​​ಟೇಬಲ್​​​ ಕೇಶವ್​​ ವಿರುದ್ಧ ವಾರಂಟ್ ಜಾರಿಗೊಳಿಸಲು ಆದೇಶ ನೀಡಿದೆ.

ಪಿಎಸ್‌ಐ ಮಂಜುನಾಥ 'ಪತಿ ಬೇಕು ಡಾಟ್​​ ಕಾಂ' ಸಿನಿಮಾಗೆ ಬಂಡವಾಳ ಹೂಡಿದ್ದರು. ಸಿನಿಮಾ ನಷ್ಟ ಅನುಭವಿಸಿದ್ದರಿಂದ ನಿರ್ದೇಶಕ ರಾಕೇಶ್ ಎಂಬುವರಿ​​​ಗೆ ಹಣ ಹಿಂದಿರುಗಿಸಲು ಒತ್ತಡ ಹೇರಿದ್ದರು. ನಿರ್ದೇಶಕ ರಾಕೇಶನನ್ನು ವಿಜಯನಗರದ ಮನೆಯಿಂದ ಬಲವಂತದಿಂದ ನೆಲಮಂಗಲ ಪೊಲೀಸ್​​​​​ ಠಾಣೆಗೆ ಕರೆಸಿಕೊಂಡು ಬೆದರಿಸಿ ಚೆಕ್​ಗೆ ಸಹಿ ಪಡೆದಿದ್ದರು. ಇದರ ಪೊಲೀಸರ ವಿರುದ್ಧ ರಾಕೇಶ್ ಖಾಸಗಿ ದೂರು ಸಲ್ಲಿಸಿದ್ದರು.

ಆದರೆ, ಸಮನ್ಸ್​ ನೀಡಿದರೂ ಪೊಲೀಸರು ಕೋರ್ಟ್​​​ಗೆ ಹಾಜರಾಗಿರಲಿಲ್ಲ. ವಾರಂಟ್​​ ಜಾರಿಗೊಳಿಸುವಂತೆ ವಕೀಲ ವೇದಮೂರ್ತಿ ವಾದ ಮಂಡಿಸಿದ್ದರು. ಸಿವಿಲ್ ಕೇಸ್​​ನಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಗರಂ ಆಗಿತ್ತು. ಸದ್ಯ ಈಗ ಎಸಿಎಂಎಂ ಕೋರ್ಟ್​ ನ್ಯಾಯಾಧೀಶರಾದ​ ಬಾಲಗೋಪಾಲಕೃಷ್ಣ ಅವರು 2021ರ ಜನವರಿ 29ರೊಳಗೆ ವಾರಂಟ್ ಜಾರಿಗೆ ಆದೇಶಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.