ನೆಲಮಂಗಲ: ಬ್ಯಾಂಕ್ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬರುವಾಗ ವ್ಯಕ್ತಿಯೋರ್ವ ಮದ್ಯದ ಆಸೆಗೆ ವೈನ್ಶಾಪ್ ಬಳಿ ಸ್ಕೂಟರ್ ನಿಲ್ಲಿಸಿ ಖರೀದಿಗಾಗಿ ಒಳಗೆ ಹೋಗಿದ್ದಾರೆ. ಈ ಸಮಯದಲ್ಲಿ ದುಷ್ಕರ್ಮಿಗಳು ಸ್ಕೂಟರ್‌ನಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರಿಯಾದರು.
ಬೆಂಗಳೂರು ಉತ್ತರ ತಾಲೂಕಿನ ಮಾಗಡಿರಸ್ತೆಯ ಚಿಕ್ಕಗೊಲ್ಲರಹಟ್ಟಿ ಗ್ರಾಮದಲ್ಲಿ ಮಹೇಶ್ ಎಂಬುವವರು ಹಣದ ಸಮಸ್ಯೆಯಿಂದ ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲ ಬ್ಯಾಂಕ್‌ನಲ್ಲಿ ಒತ್ತೆ ಇಟ್ಟಿದ್ದರು. ಇಂದು ಒಡವೆಗಳನ್ನು ಬ್ಯಾಂಕ್ನಿಂದ ಬಿಡಿಸಿಕೊಂಡು ಬರುತ್ತಿದ್ದರು.
ಇವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ವೈನ್ಶಾಪ್ ಬಳಿ ನಿಲ್ಲಿಸಿದ್ದ ವಾಹನದ ಡಿಕ್ಕಿಯಲ್ಲಿದ್ದ 1 ಲಕ್ಷಕ್ಕೂ ಅಧಿಕ ನಗದು, 3 ಚಿನ್ನದ ಚೈನ್, ಒಂದು ಜೊತೆ ಬಳೆ, ಕೈ ಚೈನ್, ಲಾಂಗ್ ಚೈನ್ ಸೇರಿದಂತೆ 7 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕ್ಷಣಾರ್ಧದಲ್ಲಿ ಎಗರಿಸಿ ಪರಾರಿಯಾಗಿದ್ದಾರೆ.
ಸದ್ಯ ಕಳ್ಳರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಬೆನ್ನತ್ತಿದ್ದಾರೆ.
ಇದನ್ನೂ ಓದಿ: ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಪ್ರವಾಹಕ್ಕೆ ಸಿಲುಕಿದ ಮಹಿಳೆ.. ಎದೆ ಝಲ್ ಎನ್ನುವ ದೃಶ್ಯ ವೈರಲ್..