ETV Bharat / state

ರಾಜಕೀಯ ಕಾರ್ಯಕ್ರಮದಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕಳ್ಳ - political program

ಕಾಂಗ್ರೆಸ್ ಕಚೇರಿ ಪಿಕ್​ಪಾಕೆಟ್​ ಮಾಡಲು ಬಂದಿದ್ದ ಯುವಕನನ್ನ ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

THIEF_ARREST
ರಾಜಕೀಯ ಕಾರ್ಯಕ್ರಮದಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕಳ್ಳ..
author img

By

Published : Nov 21, 2022, 8:06 PM IST

ಬೆಂಗಳೂರು: ಹಿರೇಕೇರೂರು ಬಿಜೆಪಿ ಮಾಜಿ ಶಾಸಕ ಯು.ಬಿ ಬಣಕಾರ್ ಮತ್ತು ತುಮಕೂರು ಗ್ರಾಮಾಂತರ ಜೆಡಿಎಸ್ ಮಾಜಿ ಶಾಸಕ ಎಚ್ ನಿಂಗಪ್ಪ, ಬಿಜಾಪುರದ ಮಲ್ಲಿಕಾರ್ಜುನ ರೋಣಿ ಹಾಗೂ ಕೂಡ್ಲಗಿಯ ಜೆಡಿಎಸ್ ಮುಖಂಡ ಡಾ. ಎನ್ ಟಿ ಶ್ರೀನಿವಾಸ್ ತಮ್ಮ ಅಪಾರ ಬೆಂಬಲಿಗರ ಜತೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು ತಮ್ಮ ನಾಯಕರ ಪರ ಕಾಂಗ್ರೆಸ್ ಪಕ್ಷದ ಕಚೇರಿ ಹೊರಭಾಗ ಘೋಷಣೆ ಕೂಗುತ್ತಾ ನಿಂತ ಸಂದರ್ಭ ಯುವಕನೊಬ್ಬ ಕಾರ್ಯಕರ್ತರ ಜೇಬಿಗೆ ಕತ್ತರಿಹಾಕಲೂ ಮುಂದಾಗಿದ್ದಾನೆ. ಬ್ಲೇಡ್ ಹಾಕಿ ಜೇಬಿನಿಂದ ದುಡ್ಡು ಕದ್ದು ಅದೇ ವ್ಯಕ್ತಿಯ ಉಡುದಾರ ಕದಿಯುವ ಸಂದರ್ಭ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ.

14 ಸಾವಿರ ಹಣ ಹಾಗೂ ಉಡದಾರ ಜೊತೆಯಾಗಿ ಪಿಕ್ ಪಾಕೆಟ್ ಮಾಡಿದ ಜೇಬು ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಹಣ ಕದಿಯುವಾಗ ಗಮನಕ್ಕೆ ಬಾರದಿದ್ದರೂ, ಉಡುದಾರಕ್ಕೆ ಕೈ ಹಾಕಿದ ಸಂದರ್ಭ ವ್ಯಕ್ತಿಗೆ ಅರಿವಾಗಿದೆ. ಕಳ್ಳನ ಕೈ ಹಿಡಿದುಕೊಂಡ ವ್ಯಕ್ತಿ ಜೋರಾಗಿ ಕಿರುಚಾಡಿದ್ದಾರೆ, ಕೂಡಲೇ ಸುತ್ತುವರೆದ ಕಾಂಗ್ರೆಸ್ ಕಾರ್ಯಕರ್ತರು ಹಣ ದೋಚಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಕ್ಷಮಾಪಣೆ ಚೀಟಿಯೊಂದಿಗೆ ಜೈನ ಮಂದಿರಕ್ಕೆ ಕದ್ದ ಮಾಲು ಹಿಂದಿರುಗಿಸಿದ ಕಳ್ಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.