ಬೆಂಗಳೂರು: ಚಿತ್ರದುರ್ಗದ ಮಾದಾರ ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಇಂದು ಧವಳಗಿರಿ ನಿವಾಸಕ್ಕೆ ಆಗಮಿಸಿ ಸಿಎಂ ಭೇಟಿ ಮಾಡಿದ್ರು.
ಬಳಿಕ ಮಾತನಾಡಿದ ಸ್ವಾಮೀಜಿ, ಮೊದಲ ಬಾರಿಗೆ ನಮ್ಮ ಸಮುದಾಯಕ್ಕೆ ಡಿಸಿಎಂ ಸ್ಥಾನ ಸಿಕ್ಕಿದೆ. ಮಾದಿಗ ಸಮುದಾಯವನ್ನು ಗುರುತಿಸಿ ಪ್ರಮುಖ ಖಾತೆ ನೀಡಲಾಗಿದೆ. ನಮ್ಮ ಸಮಾಜವನ್ನು ಇಲ್ಲಿಯವರೆಗೆ ರಾಜಕೀಯದಲ್ಲಿ ಗುರುತಿಸುವಂತೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಅವಕಾಶ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಎಂದು ತಿಳಿಸಿದರು.
ಕೊಪ್ಪಳದಲ್ಲಿನ ಅಸ್ಪೃಶ್ಯತೆ ಪ್ರಕರಣ ಸಂಬಂಧ ಮಾತನಾಡಿದ ಅವರು, ಅಸ್ಪೃಶ್ಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಈ ಸಾಮಾಜಿಕ ಪಿಡುಗಿನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಹಾಗೂ ನಮ್ಮ ಸಮುದಾಯದ ಡಿಸಿಎಂ ಕಾರಜೋಳ ಅವರಿಗೆ ಆಗ್ರಹಿಸುತ್ತೇನೆ. ಆದ್ರೆ, ಈ ಹಿಂದಿನ ಪರಿಸ್ಥಿತೆಗೆ ಹೋಲಿಸಿದ್ರೆ ಇಂದು ಕಡಿಮೆಯಾಗಿದೆ. ಸಾವಿರಾರು ವರ್ಷದಿಂದ ನಡೆದುಬಂದ ಪದ್ದತಿ ತಕ್ಷಣಕ್ಕೆ ನಿರ್ಮೂಲನೆ ಮಾಡೋದು ಕಷ್ಟ. ಮುಂದಿನ ದಿನಗಳಲ್ಲಿ ಸರಿ ಹೋಗುತ್ತೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ರು.