ETV Bharat / state

ಕರವೇ ರಾಜ್ಯ ಉಪಾಧ್ಯಕ್ಷನಿಗೆ ಪಿಎಸ್ಐ ಕಪಾಳ ಮೋಕ್ಷ: ಠಾಣೆ ಮುಂದೆ ಪ್ರತಿಭಟನೆ - ಕರವೇ ರಾಜ್ಯ ಉಪಾಧ್ಯಕ್ಷ

ಅನುಮತಿ ಇಲ್ಲದೆ ಬಂಧಿತರನ್ನು ಮಾತನಾಡಿಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಗೌಡ ಮತ್ತು ಪಿಎಸ್ ಐ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪಿಎಸ್ಐ ಸುರೇಶ್​​, ಉಮೇಶ್ ಗೌಡ ಎಂಬವರಿಗೆ ಕಪಾಳ ಮೋಕ್ಷ ಮಾಡಿದ್ದಾರೆಂದು ಆರೋಪಿಸಲಾಗಿದೆ.

Protest in front of police station by Karave activists in Nelamngal
ಠಾಣೆ ಮುಂದೆ ಕರವೇ ಪ್ರತಿಭಟನೆ
author img

By

Published : Apr 16, 2021, 9:45 AM IST

ನೆಲಮಂಗಲ: ಬಂಧಿತ ಆರೋಪಿಯನ್ನು ಮಾತನಾಡಿಸಲು ಬಂದ ಕರವೇ ಸಂಘಟನೆಯ ಉಪಾಧ್ಯಕ್ಷನಿಗೆ ಪಿಎಸ್ಐ ಕಪಾಳ ಮೋಕ್ಷ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ಠಾಣೆ ಮುಂದೆ ಕರವೇ ಪ್ರತಿಭಟನೆ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೇಶ್ ಮತ್ತು ರಂಗಸ್ವಾಮಿಯವರನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಮಾತನಾಡಿಸಲು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಠಾಣೆಗೆ ಬಂದಿದ್ದಾರೆ. ಅನುಮತಿ ಇಲ್ಲದೆ ಬಂಧಿತರನ್ನು ಮಾತನಾಡಿಸಿದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಗೌಡ ಮತ್ತು ಪಿಎಸ್‌ಐ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪಿಎಸ್ಐ ಸುರೇಶ್​​, ಉಮೇಶ್ ಗೌಡನಿಗೆ ಕಪಾಳ ಮೋಕ್ಷ ಮಾಡಿದ್ದರೆಂದು ಆರೋಪಿಸಲಾಗಿದೆ.

ಪೊಲೀಸ್ ಠಾಣೆಗೆ ಆಗಮಿಸಿದ ಪ್ರವೀಣ್ ಶೆಟ್ಟಿ ಪೊಲೀಸರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಕಾರ್ಯಕರ್ತರ ಮನವೊಲಿಸುವ ಪ್ರಯತ್ನವನ್ನು ಪೊಲೀಸರು ನಡೆಸಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕೈ ಮೀರಿದ ಕೊರೊನಾ: ತುರ್ತು ಸಭೆ ಕರೆದ ಸಿಎಂ ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.