ಬೆಂಗಳೂರು/ಆನೇಕಲ್: ಕೊರೊನಾ ಲಾಕ್ಡೌನ್ ನಡುವೆ ಸೇವೆ ಸಲ್ಲಿಸುತ್ತಿರುವ ಪೊಲೀಸರು ಮತ್ತು ಸ್ವಯಂಪ್ರೇರಿತವಾಗಿ ಕೆಲಸ ಮಾಡುತ್ತಿರುವ ಯುವಕರಿಗೆ ಜಿಗಣಿ ಪೊಲೀಸ್ ಠಾಣೆ-ಹೊಸ ಬೆಳಕು ಟ್ರಸ್ಟ್, ಎಸಿ ಸುಹಾಸ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಕೊರೊನಾ ಭೀತಿಯಲ್ಲಿ ನಲುಗುತ್ತಿದ್ದ ವಲಸೆ ಕಾರ್ಮಿಕರಿಗೆ ನಿರಂತರವಾಗಿ ದಿನಕ್ಕೆ 40 ಸಾವಿರ ರೂ. ವೆಚ್ಚದಲ್ಲಿ ಊಟೋಪಚಾರ ನೀಡುತ್ತಿದ್ದರು. ಇನ್ನಷ್ಟು ಉತ್ಸಾಹದಿಂದ ಯುವ ಪಡೆ ಸ್ವಯಂ ಸೇವಕರಾಗಿ ಜಿಗಣಿ ಅಷ್ಟೆ ಅಲ್ಲದೆ ಆನೇಕಲ್ ತಾಲೂಕು ಹಾಗೂ ಬೆಂಗಳೂರು ದಕ್ಷಿಣ ತಾಲೂಕಿಗೆ ಆಹಾರ ಪೂರೈಸುತ್ತಿದೆ.
ಇನ್ನು ಜಿಗಣಿ ಭಾಗದ ಕ್ಲಿನಿಕ್ಗಳಲ್ಲಿ ಹೆಚ್ಚಿನ ಬೆಲೆಗೆ ಔಷಧಿ ಮಾರಾಟ ಮಾಡುತ್ತಿರುವುದಲ್ಲದೆ, ನೆಗಡಿ, ಕೆಮ್ಮು, ಜ್ವರಕ್ಕೆ ಪ್ಯಾರಾಸಿಟಮಲ್-ಸಿಟ್ರಿಜಿನ್ ಮಾತ್ರೆಯನ್ನು ವೈದ್ಯರ ಸಲಹೆ ಇಲ್ಲದೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಇದರಿಂದ ಕೊರೊನಾ ತಪಾಸಣೆ ಕಷ್ಟ ಸಾಧ್ಯವಾಗುತ್ತಿದೆ ಎಂದು ಮೆಡಿಕಲ್ ಸಿಬ್ಬಂದಿಗೆ ಪೊಲೀಸರು ತರಾಟೆ ತೆಗೆದುಕೊಂಡಿದ್ದಾರೆ.