ದೊಡ್ಡಬಳ್ಳಾಪುರ: ಶಾಂತಿಯುತ ಗಣೇಶೋತ್ಸವಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆನ್ನುವ ನಿಟ್ಟಿನಲ್ಲಿ ಗಣೇಶೋತ್ಸವದ ಅಯೋಜಕರನ್ನ ಕರೆದು ಮಾತುಕತೆ ನಡೆಸಿದರು.
ಗಣೇಶೋತ್ಸವದ ಅಯೋಜಕರನ್ನ ಕರೆದು ಸಭೆ ನಡೆಸಿದ ದೊಡ್ಡಬಳ್ಳಾಪುರ ಉಪವಿಭಾಗದ ಇನ್ಸ್ ಪೆಕ್ಟರ್ ರಾಘವ ಎಸ್ ಗೌಡ ಮತ್ತು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಅಯೋಜಕರಿಗೆ ಕಾನೂನಿನ ಅಡಿಯಲ್ಲಿ ಶಾಂತಿಯುತ ಗಣೇಶೋತ್ಸವ ಆಚರಿಸುವಂತೆ ಹೇಳಿದರು.
ಪ್ರಮುಖವಾಗಿ ಗಣೇಶೋತ್ಸದ ಅಯೋಜಕರು ಪೊಲೀಸ್ ಇಲಾಖೆ, ಕೆಇಬಿ, ನಗರಸಭೆ ಮತ್ತು ಅಗ್ನಿಶಾಮಕ ದಳದಿಂದ ಅನುಮತಿಯನ್ನ ಪಡಿದರಬೇಕು. ಗಣೇಶಮೂರ್ತಿಯನ್ನ ಖಾಸಗಿಯವರ ಸ್ಥಳದಲ್ಲಿ ಕೂರಿಸುವುದಾದರೆ ಅವರ ಅನುಮತಿಯನ್ನ ಪಡೆದುಕೊಳ್ಳಬೇಕು, ಸಾರ್ವಜನಿಕ ಗಣೇಶೋತ್ಸವನ್ನು 9 ದಿನದೊಳಗೆ ಮುಗಿಸಬೇಕು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆ ಮಾಡಿದರೆ ಸಂಜೆ 6 ಗಂಟೆ ಪ್ರಾರಂಭ ಮಾಡಿ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಕಾನೂನು ನಿಗಧಿಪಡಿಸಿದ ಡೆಸಿಬಲ್ ಮಾಪನದಲ್ಲಿ ಧ್ವನಿವರ್ಧಕವನ್ನ ಅಳವಡಿಸಬೇಕು. ಗಣೇಶಮೂರ್ತಿ ಕೂರಿಸುವ ಸ್ಥಳದಲ್ಲಿ ರಾತ್ರಿಯ ವೇಳೆ ಸದಸ್ಯರೊಬ್ಬರು ಇರಲೇಬೇಕೆಂಬ ಅಂಶಗಳನ್ನು ತಿಳಿಸಿದ್ದಾರೆ.
ಜೊತೆಗೆ ಈ ವರ್ಷ ಪಿಒಪಿ ಗಣೇಶಮೂರ್ತಿಗಳ ನಿಷೇಧ ಇರುವುದರಿದಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಕೂರಿಸಬೇಕು. ಒಂದು ವೇಳೆ ಪಿಓಪಿ ಗಣೇಶ ಮೂರ್ತಿಗಳನ್ನ ಕೂರಿಸಿದ್ದೆ ಆದ್ದಲ್ಲಿ ಅಂತಹ ಮೂರ್ತಿಗಳ ವಿಸರ್ಜನೆ ಅವಕಾಶವನ್ನ ನಗರಸಭೆ ಕೊಡುವುದಿಲ್ಲ. ಅಲ್ಲದೆ, ಡಿಜೆಗಳಿಗೆ ಬ್ರೇಕ್ ಹಾಕಲಾಗಿರುವ ಪೊಲೀಸ್ ಇಲಾಖೆ ಹಾಗೊಂದು ವೇಳೆ ಡಿಜೆ ಹಾಕಿ ಮೆರವಣಿಗೆ ನಡೆಸಿದರೆ ಜಪ್ತಿ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.