ETV Bharat / state

ಪೂರ್ಣವಾಗದ ಕೊಟ್ಟಿಗೆಮಾಚೇನಹಳ್ಳಿ ಸೇತುವೆ: ಜೀವದ ಹಂಗು ತೊರೆದು ಕಾಲುವೆ ದಾಟುತ್ತಿರುವ ಜನ

ಗ್ರಾಮಸ್ಥರ ಓಡಾಟಕ್ಕೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಕೊಟ್ಟಿಗೆಮಾಚೇನಹಳ್ಳಿ ಮತ್ತು ಹೊಸಹಳ್ಳಿ ಸೇತುವೆ ಕೊಚ್ಚಿ ಹೋಗಿದೆ.

author img

By

Published : Sep 6, 2022, 4:25 PM IST

people-struggling-to-crossing-the-canal-in-doddaballapur
ಪೂರ್ಣವಾಗದ ಕೊಟ್ಟಿಗೆಮಾಚೇನಹಳ್ಳಿ ಸೇತುವೆ: ಜೀವದ ಹಂಗು ತೊರೆದು ಕಾಲುವೆ ದಾಟುತ್ತಿರುವ ಜನ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಭಾರಿ ಮಳೆಯಿಂದ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿ ಮತ್ತು ಹೊಸಹಳ್ಳಿ ನಡುವಿನ ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ರಭಸವಾಗಿ ಹರಿಯುತ್ತಿರುವ ನೀರಿನ ಕಾಲುವೆಯಲ್ಲಿ ಜೀವದ ಹಂಗು ತೊರೆದು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಗ್ರಾಮಸ್ಥರು ಹಳ್ಳ ದಾಟುತ್ತಿದ್ದಾರೆ.

2017ರಲ್ಲೇ ಸುರಿದ ಮಳೆಗೆ ಈ ಸಂಪರ್ಕ ಸೇತುವೆ ಕೊಚ್ಚಿಹೋಗಿತ್ತು. ಈ ಸೇತುವೆ ಕೊಟ್ಟಿಗೆಮಾಚೇನಹಳ್ಳಿ, ಕುಕ್ಕಲಹಳ್ಳಿ, ಬ್ಯಾಡರಹಳ್ಳಿ ಗ್ರಾಮಗಳಿಗೆ ಸಂಪರ್ಕಕಲ್ಪಿಸುತ್ತದೆ. ಗ್ರಾಮಸ್ಥರ ಓಡಾಟಕ್ಕೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಈ ತಾತ್ಕಾಲಿಕ ಸೇತುವೆ ಸಹ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ಸದ್ಯ 75 ಲಕ್ಷ ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಆದರೆ, ಸೇತುವೆ ಕಾಮಗಾರಿ ಪೂರ್ಣವಾಗದೆ ಹಿನ್ನೆಲೆ ಜನರು ಜೀವದ ಹಂಗು ತೊರೆದು ಕಾಲುವೆ ದಾಟಬೇಕಿದೆ. ಹಗ್ಗದ ಸಹಾಯದಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಗ್ರಾಮಸ್ಥರು ಕಾಲುವೆ ದಾಟುತ್ತಿದ್ದಾರೆ. ಹಾಲಿನ ಕ್ಯಾನ್​ಗಳನ್ನು ಸಹ ಇದೇ ಕಾಲುವೆ ದಾಟಿಕೊಂಡು ಸಾಗಿಸಲಾಗುತ್ತಿದೆ. ನೀರಿನ ರಭಸ ಕಡಿಮೆಯಾದಾಗ ಬೈಕ್ ಸವಾರರು ಹರಸಹಾಸ ಪಟ್ಟು ದಾಟುತ್ತಾರೆ.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಪ್ರವಾಹ.. ಇಬ್ಬರು ಪೊಲೀಸರು ಹಳ್ಳದಲ್ಲಿ ಕೊಚ್ಚಿಹೋಗಿರುವ ಶಂಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.