ETV Bharat / state

ನೆಲಮಂಗಲ: 'PAYCM' ಪೋಸ್ಟರ್ ಅಂಟಿಸಿದ ಮೂವರು ವಿದ್ಯಾರ್ಥಿಗಳ ಬಂಧನ - ನೆಲಮಂಗಲದಲ್ಲಿ ಮೂವರು ವಿದ್ಯಾರ್ಥಿಗಳ ಬಂಧನ

ನೆಲಮಂಗಲದಲ್ಲಿ PAYCM ಪೋಸ್ಟರ್ ಅಂಟಿಸಿದ ಮೂವರು ವಿದ್ಯಾರ್ಥಿಗಳನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.

PAYCM poster campaign
ಪೇ ಸಿಎಂ ಪೋಸ್ಟರ್ ಅಭಿಯಾನ
author img

By

Published : Sep 24, 2022, 9:40 AM IST

ನೆಲಮಂಗಲ(ಬೆಂಗಳೂರು ಗ್ರಾಮಾಂತರ): ಕಾಂಗ್ರೆಸ್ ಪಕ್ಷ 'ಪೇ-ಸಿಎಂ' ಪೋಸ್ಟರ್ ಅಭಿಯಾನ ಪ್ರಾರಂಭಿಸಿದೆ. ನೆಲಮಂಗಲದಲ್ಲಿ ಪೇ-ಸಿಎಂ ಪೋಸ್ಟರ್ ಅಂಟಿಸಿದ ಮೂವರು ವಿದ್ಯಾರ್ಥಿಗಳನ್ನು ಇಂದು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.

ಯೂತ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನಾರಾಯಣಗೌಡ, ಕಾರ್ಮಿಕ ಘಟಕದ ಅಧ್ಯಕ್ಷ ರಾಮಕೃಷ್ಣ ವಿರುದ್ಧ ಪೇ-ಸಿಎಂ ಪೋಸ್ಟರ್ ಅಂಟಿಸಿದ ಕಾರಣಕ್ಕೆ ಪ್ರಕರಣ ದಾಖಲಾಗಿದೆ. ನಿನ್ನೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ರಾತ್ರಿ ವಾಪಸ್ ಕಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಮೂವರನ್ನು ಬಂಧಿಸಲಾಗಿದೆ.

'ಪೇ-ಸಿಎಂ' ಪೋಸ್ಟರ್ ಅಭಿಯಾನ: ನೆಲಮಂಗಲದಲ್ಲಿ ಮೂವರು ವಿದ್ಯಾರ್ಥಿಗಳ ಬಂಧನ

ಇದನ್ನೂ ಓದಿ: 'PAYCM' ಪೋಸ್ಟರ್ ಮೂಲಕ ಬೊಮ್ಮಾಯಿ ಸರ್ಕಾರದ ಲೇವಡಿ ಮಾಡಿದ ಕಾಂಗ್ರೆಸ್!

ವಿದ್ಯಾರ್ಥಿಗಳನ್ನು ಬಂಧಿಸಿರುವುದಕ್ಕೆ ಕಾಂಗ್ರೆಸ್ ಮುಖಂಡರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿರುವ ನಾವು ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸುವ ಹಕ್ಕಿದೆ. ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದ್ದರೆ ಕೋರ್ಟ್​​ನಲ್ಲಿ ಜಾಮೀನು ಪಡೆದು ವಿದ್ಯಾರ್ಥಿಗಳನ್ನು ಬಿಡಿಸಿಕೊಂಡು ಬರುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಮುಂದುವರಿದ ಪೇಸಿಎಂ ಅಭಿಯಾನ: ಗ್ರಾಫಿಕ್ ವಿಡಿಯೋ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.