ETV Bharat / state

ಬಸ್​ಗಳಲ್ಲಿ ಪಟಾಕಿ ಸಾಗಣೆ:  ನೆಲಮಂಗಲ ಆರ್​ಟಿಒ ಅಧಿಕಾರಿಗಳಿಂದ ತಪಾಸಣೆ - crackers

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್​ಗಳಲ್ಲಿ ಪಟಾಕಿ ಸಾಗಣೆ ಮಾಡಲಾಗುವ ಹಿನ್ನೆಲೆಯಲ್ಲಿ ನೆಲಮಂಗಲ ಆರ್​ಟಿಒ ಅಧಿಕಾರಿಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್​ಗಳ ತಪಾಸಣೆ ನಡೆಸಿದರು.

ನೆಲಮಂಗಲ ಆರ್​ಟಿಓ ಅಧಿಕಾರಿಗಳಿಂದ ತಪಾಸಣೆ
author img

By

Published : Oct 25, 2019, 4:54 PM IST

ನೆಲಮಂಗಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್​ಗಳಲ್ಲಿ ಪಟಾಕಿ ಸಾಗಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ನೆಲಮಂಗಲ ಆರ್​ಟಿಒ ಅಧಿಕಾರಿಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್​ಗಳ ತಪಾಸಣೆ ನಡೆಸಿದರು.

ನೆಲಮಂಗಲ ಆರ್​ಟಿಓ ಅಧಿಕಾರಿಗಳಿಂದ ತಪಾಸಣೆ

ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸುಮಾರು 50ಕ್ಕೂ ಹೆಚ್ಚು ಬಸ್​ಗಳನ್ನು ತನಿಖೆ ನಡೆಸಿದ್ದಾರೆ. ಈ ವೇಳೆ 18ಕ್ಕೂ ಹೆಚ್ಚು ಬಸ್​ಗಳ ರಹದಾರಿ ಉಲ್ಲಂಘನೆಗೆ ನೋಟಿಸ್ ನೀಡಿದ್ದು ತೆರಿಗೆ ಪಾವತಿ ಮಾಡದಿರುವ ಕಾರಣ ಒಂದು ಬಸ್​​ ವಶಕ್ಕೆ ಪಡೆದಿದ್ದಾರೆ.

ಸಾರಿಗೆ ಅಧಿಕಾರಿ ಗುರುಮೂರ್ತಿಯವರ ನಿರ್ದೇಶನದಲ್ಲಿ, ಜಂಟಿ ಸಾರಿಗೆ ಆಯುಕ್ತ ಮಲ್ಲಿಕಾರ್ಜುನರವರ ಆದೇಶದ ಮೇರೆಗೆ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ವಿವೇಕಾನಂದ ಮಲ್ಲೇಶ್, ಮಂಜುನಾಥ್ ಡಿ.ಎಸ್ ಒಡೆಯರ್​ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

Intro:ದೀಪಾವಳಿ ಹಬ್ಬದ ಹಿನ್ನಲೆ ಬಸ್ ಗಳಲ್ಲಿ ಪಟಾಕಿ ಸಾಗಣಿಕೆ.

ನೆಲಮಂಗಲ ಆರ್ ಟಿಓ ಅಧಿಕಾರಿಗಳಿಂದ ಬಸ್ ಗಳ ತಪಾಸಣೆ
Body:ನೆಲಮಂಗಲ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಗಳಲ್ಲಿ ಪಟಾಕಿ ಸಾಗಣಿಕೆ ಮಾಡುತ್ತಾರೆ ಪ್ರಯಾಣಿಕರ ಹಿತದೃಷ್ಠಿಯಿಂದ ನೆಲಮಂಗಲ ಆರ್ ಟಿಓ ಅಧಿಕಾರಿಗಳು ಬಸ್ ಗಳ ತಪಾಸಣೆ ನಡೆಸಿದರು.

ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್ ಟಿ ಓ ಇಲಾಖೆ ಬಸ್ ಗಳ ತಪಾಸಣೆ ನಡೆಸಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ ಗಳಲ್ಲಿ ಪಟಾಕಿಗಳನ್ನೂ ಸಾಗಿಸುವುದರ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಕಾರ್ಯಾಚರಣೆ ನೆಡೆಸಿದ್ದು ಈ ನಿಟ್ಟಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಬಸ್ ಗಳನ್ನು ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಲಗೇಜು ಮತ್ತು ದಾಖಲೆಗಳ ತಪಾಸಣೆ ನಡೆಸಿದ್ದು ಸುಮಾರು 18 ಕ್ಕೂ ಹೆಚ್ಚು ಬಸ್ ಗಳ ರಹದಾರಿ ಉಲ್ಲಂಘನೆಗೆ ನೋಟಿಸ್ ನೀಡಿದ್ದು ತೆರಿಗೆ ಪಾವತಿ ಮಾಡದಿರುವ ಕಾರಣ ಒಂದು ಬಸ್ ನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರು ಸ್ಪೋಟಕ ವಸ್ತುಗಳು ಪಟಾಕಿಗಳನ್ನು ಪ್ರಯಾಣಿಕರ ವಾಹನಗಳಲ್ಲಿ ಕೊಂಡೊಯ್ಯಬಾರದು ಒಂದು ವೇಳೆ ಪಟಾಕಿ ಕೊಂಡೊಯ್ದಾರೆ ಅಕ್ಷಮ್ಯ ಅಪರಾವವೆಂದು ಬಸ್ ಸಿಬ್ಬಂದಿಗೆ ತಿಳುವಳಿಕೆ ಹೇಳಿದರು.

ಸಾರಿಗೆ ಅಧಿಕಾರಿಗಳಾದ ಗುರುಮೂರ್ತಿ ಯವರ ನಿರ್ದೇಶನದ ಮೇರೆಗೆ ಜಂಟಿ ಸಾರಿಗೆ ಆಯುಕ್ತರಾದ ಮಲ್ಲಿಕಾರ್ಜುನ ರವರ ಆದೇಶದ ಮೇರೆಗೆ ಹಿರಿಯ ಮೋಟಾರು ವಾಹನ ನೀರಿಕ್ಷರಾದ ವಿವೇಕಾನಂದ ಮಲ್ಲೇಶ್ , ಮಂಜುನಾಥ್ ಡಿ ಎಸ್ ಒಡೆಯರ್ ರವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.